Thursday, December 12, 2024
Homeರಾಜ್ಯಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಬೃಹತ್ ಜಾಗೃತಿ ಜಾಥ

ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಬೃಹತ್ ಜಾಗೃತಿ ಜಾಥ

ಬೆಂಗಳೂರು, ಫೆ.4- ಆರಂಭಿಕ ಹಂತದಲ್ಲಿ ಮಾರಕ ಕ್ಯಾನ್ಸರ್ ಪತ್ತೆ ಮಾಡುವುದರಿಂದ ರೋಗವನ್ನು ಗುಣಪಡಿಸಬಹುದಲ್ಲದೆ, ರೋಗಿಗಳ ಜೀವವನ್ನು ಉಳಿಸಬಹುದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಇಂಡಿಯಾ, ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಷನ್ ರೀಸರ್ಚ್ ಟ್ರಸ್ಟ್, ನವೋದಯ ಇನ್ ಬೆಂಗಳೂರು, ಆರೋಗ್ಯ ಇಲಾಖೆ ಸಹಯೋಗದಲ್ಲಿ 5ಕಿಲೋ ಮೀಟರ್ ವಾಕಥಾನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು,ಬದಲಾದ ಆಹಾರ ಪದ್ದತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ವ್ಯಾಯಾಮವಿಲ್ಲದಿರುವುದು. ಹೀಗೆ ಹಲವು ಕಾರಣದಿಂದ ಕ್ಯಾನ್ಸರ್ ರೋಗ ಬರುತ್ತದೆ ಪ್ರಪಂಚದಲ್ಲಿ ಅತ್ಯಂತ ಹಾನಿಕಾರಕವಾಗಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್‍ರೋಗ ಒಂದಾಗಿದೆ ಎಂದರು.

ಕೋಲ್ಕತಾಗೆ ಶೀಘ್ರರೈಲು ಸಂಪರ್ಕ : ಸಿಎಂ ಮಾಣಿಕ್ ಸಹಾ

ಪ್ರತಿಯೊಬ್ಬರು ಪ್ರತಿದಿನ ಒಂದು ಅವರ ಜೀವನಕ್ಕಾಗಿ ಸಮಯ ಮೀಸಲು ಇಡಬೇಕು. ಯೋಗ, ವಾಕಿಂಗ್, ವ್ಯಾಯಾಮ ಮಾಡುವುದರಿಂದ ಆರೋಗ್ಯವಂತರಾಗಿ ಇರಬಹುದು. ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ಮುಕ್ತ ಸಮಾಜ, ರಾಜ್ಯ ನಮ್ಮದಾಗಲಿ ಎಂದು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು. ಸರ್ಜಿಕಲ್ ಸೊಸೈಟಿಯ ಬೆಂಗಳೂರು ಅದ್ಯಕ್ಷ ರಾಜಶೇಖರ್ ಸಿ.ಜಾಕ ಮಾತನಾಡಿ.ಆರೋಗ್ಯವಂತರಾಗಿರಲು ಪ್ರತಿಯೊಬ್ಬರು ಒಂದು ಗಂಟೆಯಾದರೂ ಗಂಟೆ ವಾಕಿಂಗ್ ಮಾಡಬೇಕು.

ಕ್ಯಾನ್ಸರ್ ಮೊದಲನೇಯ ಹಂತದಲ್ಲಿ ಪತ್ತೆ ಮಾಡಿದರೆ, ಬೇಗನೆ ಚಿಕಿತ್ಸೆ ನೀಡಿ ರೋಗಿಯ ಜೀವನ ಉಳಿಸಬಹುದು.ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತಿರುವುದರಿಂದ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ನಾನು ಪುಸ್ತಕ ಹೊರತಂದ್ದೀನೆ. ಕನ್ನಡ, ಮರಾಠಿ,ಗುಜರಾತ್, ಬೆಂಗಾಲಿ, ತಮಿಳು,ತೆಲುಗು 9ಭಾಷೆಯಲ್ಲಿ ಮುದ್ರಣಗೊಂಡಿದೆ.

ಆತಂಕಪಡದೆ ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡು ವೈದ್ಯರ ಸಲಹೆಯಿಂದ ಕ್ಯಾನ್ಸರ್ ರೋಗ ಮುಕ್ತ ಮಾಡಬಹುದು ಎಂದು ಹೇಳಿದರು.

RELATED ARTICLES

Latest News