Tuesday, May 7, 2024
Homeಅಂತಾರಾಷ್ಟ್ರೀಯನಮೀಬಿಯಾದ ಅಧ್ಯಕ್ಷ ಹಗೆ ಜಿಂಗೊಬ್ ನಿಧನ

ನಮೀಬಿಯಾದ ಅಧ್ಯಕ್ಷ ಹಗೆ ಜಿಂಗೊಬ್ ನಿಧನ

ಕೈರೋ, ಫೆ. 4: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಮೀಬಿಯಾದ ಅಧ್ಯಕ್ಷ ಹಗೆ ಗಿಂಗೊಬ್ ಅವರು ನಿಧನರಾಗಿದ್ದರೆ. ಈ ಬಗ್ಗೆ ಅಧ್ಯಕ್ಷ ರ ಕಚೇರಿಯೂ ಕೂಡ ಅದಿಕೃತವಾಗಿ ಪ್ರಕಟಿಸಿದೆ. ಸಾಮಾಜಿಕ ತಾಣ ಎಕ್ಸ್‍ನಲ್ಲಿನ ಪೊಹಂಬಾ ಆಸ್ಪತ್ರೆಯಲ್ಲಿ ಗೀಂಗೋಬ್ ಅವರಿಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡ ಅತ್ಯುತ್ತಮವಾಗಿ ಹಾರೈಕೆ ನೀಡಿತ್ತು ಆದರೆ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಧ್ಯಕ್ಷರ ಪತ್ನಿ ಮೋನಿಕಾ ಜಿಂಗೊಸ್ ಪೋಸ್ಟ್ ಮಾಡಿದ್ದಾರೆ.

ಈ ವೇಳೆ ನಾನು ಮತ್ತು ಮಕ್ಕಳು ಅವರ ಪಕ್ಕದಲ್ಲೇ ಇದ್ದೆವು, ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. 82 ವರ್ಷ ವಯಸ್ಸಿನಲ್ಲಿ ಕಳೆದ ಜನವರಿ 8 ರಂದು ಕೊಲೊನೋಸ್ಕೋಪಿ ಮತ್ತು ಗ್ಯಾಸ್ಟ್ರೋಸ್ಕೋಪಿ ಮಾಡಲಾಯಿತು, ನಂತರ ಬಯಾಪ್ಸಿ ಮಾಡಲಾಯಿತು.

ನಾಳೆ ಜೆಡಿಎಸ್ ಕೋರಕಮಿಟಿ ಸಭೆ : ಲೋಕಸಭೆ-ರಾಜ್ಯಸಭೆ ಚುನಾವಣೆ ಕುರಿತ ಚರ್ಚೆ

ನಮೀಬಿಯಾದ ಹಂಗಾಮಿ ಅಧ್ಯಕ್ಷ ಅಂಗೋಲೊ ಅವರು ದೇಶದ ಜನತೆ ಶಾಂತವಾಗಿರಲು ಕರೆ ನೀಡಿದರು, ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಕ್ಯಾಬಿನೆಟ್ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.

ಕಳೆದ 2015 ರಿಂದ ರಾಷ್ಟ್ರದ ಅಧ್ಯಕ್ಷರಾಗಿದ್ದ ಗೈಂಗೋಬ್ ಅವರು ಈ ವರ್ಷ ತಮ್ಮ ಎರಡನೇ ಮತ್ತು ಅಂತಿಮ ಅವಧಿಯನ್ನು ಪೂರ್ಣಗೊಳಿಸಲು ನಿರ್ಧರಿಸಿದರು. 2014 ರಲ್ಲಿ, ಅವರು ಪ್ರಾಸ್ಟೇಟ್ ಕ್ಯಾನ್ಸನಿರ್ಂದ ಬದುಕುಳಿದರು ಮುಂದಿನ ನವೆಂಬರ್‍ನಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡಲು ನಮೀಬಿಯಾ ಚುನಾವಣೆಗಳನ್ನು ನಡೆಸಲಿದೆ

RELATED ARTICLES

Latest News