ಚಿಕ್ಕಮಗಳೂರು,ಅ.7-ಶಾಲೆಗೆ ರಜೆ ಇದ್ದ ಕಾರಣ ಆಟವಾಡಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಮರ್ಲೆ ಗ್ರಾಮದ ಚಿಕ್ಕ ಕೆರೆಯಲ್ಲಿ ನಡೆದಿದೆ. ಮತರನ್ನು ತರುಣ್ (13), ಭುವನ್ (12) ಹಾಗೂ ಲಿಖಿತ್ (12) ಎಂದು ಗುರುತಿಸಲಾಗಿದೆ.
ಮತ ಭುವನ್ ಮತ್ತು ಲಿಖಿತ್ ಮರ್ಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ತರುಣ್ ತನ್ನ ಅಜ್ಜಿಯ ಮನೆ ಸಕಲೇಶಪುರ ತಾಲೂಕಿನ ಕುದುರಂಗಿಯಲ್ಲಿ ಏಳನೇ ತರಗತಿ ಓದುತ್ತಿದ್ದು, ರಜೆ ಹಿನ್ನಲೆಯಲ್ಲಿ ಮನೆಗೆ ಬಂದಿದ್ದ. ಈ ಮೂವರೂ ಗೆಳೆಯರು ಸೇರಿ ದನ ಕರುಗಳೊಂದಿಗೆ ಗ್ರಾಮದ ಕೆರೆ ಬಳಿ ತೆರಳಿದ್ದರು.
ಕೆರೆಯಲ್ಲಿ ದನ ತೊಳೆಯುವಾಗ ಕಾಲು ಜಾರಿ ಆಳವಾದ ಗುಂಡಿಗೆ ಬಿದ್ದು ಈಜು ಬಾರದೆ ನೀರಿನಲ್ಲಿ ಮುಳುಗಿ ಮತಪಟ್ಟಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಮೂವರು ಸ್ನೇಹಿತರು ಕೆರೆಯ ಬಳಿಗೆ ಹೋದಾಗ ಒಬ್ಬ ಸ್ನೇಹಿತ ನೀರಿನಲ್ಲಿ ಆಟವಾಡುವಾಗ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ ಒಬ್ಬನನ್ನು ರಕ್ಷಿಸಲು ಮತ್ತೊಬ್ಬರು ಹೋಗಿ ಮೂವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೆರೆಯ ಬಳಿ ಬಂದು ಶವಗಳನ್ನು ಮೇಲಕೆತ್ತಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.ತಹಸಿಲ್ದಾರ್ ರೇಷಾ ಸ್ಥಳಕ್ಕೆ ಬಂದು ಕುಟುಂಬದವರಿಗೆ ಸಾಂತ್ವನ ಹೇಳಿದರು ಹಾಗೂ ಸರ್ಕಾರಿ ಶಾಲಾ ಮಕ್ಕಳು ಮತಪಟ್ಟರೆ ಶಿಕ್ಷಣ ಇಲಾಖೆಯಿಂದ 1.25 ಲಕ್ಷ ನೀಡಲು ಅವಕಾಶ ಇದೆ ಅದನ್ನ ಕೊಡಿಸುವುದಾಗಿ ಭರವಸೆ ನೀಡಿದರು.
ತರುಣ್ ಅಜ್ಜ ಕೆಂಚೇಗೌಡ ಎಂಬುವವರು ಕೆಲವು ವರ್ಷಗಳ ಹಿಂದೆ ಇದೇ ಕೆರೆಯಲ್ಲಿ ಆಕಸಿಕವಾಗಿ ಬಿದ್ದು ಮತಪಟ್ಟಿದ್ದರು ತಾತ ಬಿದ್ದ ಕೆರೆಯಲ್ಲಿ ಮೊಮಗನ ಸಾವು ಆಗಿರುವುದು ದುರಂತವೇ ಸರಿ.
ಮತಪಟ್ಟ ಮೂವರು ಬಾಲಕರ ಮನೆಯಲ್ಲಿ ಒಬ್ಬೊಬ್ಬರೇ ಗಂಡು ಮಕ್ಕಳು ಈಗ ಮೂರು ಮನೆಗಳ ಗಂಡು ಮಕ್ಕಳು ಇಲ್ಲವಾಗಿರುವುದು ಗ್ರಾಮಸ್ಥರಲ್ಲಿ ಬೇಸರ ತರಿಸಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
