ಚಿಕ್ಕಮಗಳೂರು, ಏ.26: ಸಾಂಬಾರ್ ಮಾಡಿಲ್ಲ ಎಂದು ಅಪ್ಪ ಬೈದಕ್ಕೆ ಮನನೊಂದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲಿ ನಡೆದಿದೆ. ಸೌಮ್ಯ ಪಾಟೀಲ್ (22) ನೇಣಿಗೆ ಶರಣಾದ ಯುವತಿ.
ಸೌಮ್ಯ ಅವರ ತಂದೆ ನಗೇಶ್ ಪಾಟೀಲ್ ಅವರು ಬೆಳಗ್ಗೆ ತರಕಾರಿ ತಂದು ಮಗಳಿಗೆ ಸಾಂಬಾರ್ ಮಾಡು ಎಂದು ಹೇಳಿ ಹೊರ ಹೋಗಿದ್ದರು.
ಮಧ್ಯಾಹ್ನ 2 ಗಂಟೆಗೆ ಮನೆಗೆ ವಾಪಾಸು ಬಂದಾಗ ಸಾಂಬಾರ್ ಮಾಡಿಲ್ಲವೆಂಬ ಕಾರಣಕ್ಕೆ ಮಗಳನ್ನು ಬೈದು ಪಕ್ಕದ ಮನೆದಿಂದ ಸಾಂಬಾರ್ ತರಲು ತೆರಳಿದ್ದಾರೆ. ಈ ಸಮಯದಲ್ಲಿ ಸೌಮ್ಯ ಮನೆಯಲ್ಲಿ ಬಾಗಿಲು ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತುಂಬಾ ಸಮಯವಾದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೋಗ್ರಿಬಿಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
