ಬೆಂಗಳೂರು,ಆ.7- ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಪಶ್ಚಿಮ ಬಂಗಾಳ ಮೂಲದ ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಅಗ್ರೋಜಿತ್ ಮಲ್ಲಿಕ್ (18) ಕೊಲೆಯಾದ ಯವಕ. ಈತ ಪಶ್ಚಿಮ ಬಂಗಾಳದ ಚಕ್ಕಡಹ ಗ್ರಾಮದ ನಿವಾಸಿ ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕಳೆದ 20 ದಿನಗಳ ಹಿಂದೆಯಷ್ಟೇ ಈತ ಬೆಂಗಳೂರಿಗೆ ಬಂದಿದ್ದನು. ಬೆಳ್ಳಂದೂರು ಕೆರೆಯ ಸಮೀಪ ಸ್ನೇಹಿತರು ವಾಸವಾಗಿದ್ದ ಲೇಬರ್ ಶೆಡ್ನಲ್ಲಿ ಈತನೂ ವಾಸವಾಗಿದ್ದುಕೊಂಡು ಫುಡ್ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದನು.
ನಿನ್ನೆ ರಾತ್ರಿ ಲೇಬರ್ ಶೆಡ್ ಪಕ್ಕದ ಜಮೀನಿನೊಂದರಲ್ಲಿ ಮೂರ್ನಾಲ್ಕು ಮಂದಿ ಸ್ನೇಹಿತರು ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ಅವರುಗಳ ಮಧ್ಯೆ ಜಗಳವಾಗಿದೆ.
ಆ ಸಂದರ್ಭದಲ್ಲಿ ದುಷ್ಕರ್ಮಿಗಳು ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಬೆಳ್ಳಂದೂರು ಠಾಣೆ ಇನ್್ಸಪೆಕ್ಟರ್, ಸಿಬ್ಬಂದಿ ಹಾಗೂ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ನೇಹಿತರೇ ಕೊಲೆ ಮಾಡಿರುವ ಶಂಕೆಯನ್ನು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.
