Homeಜಿಲ್ಲಾ ಸುದ್ದಿಗಳುಮಂಡ್ಯ ; ನವ ವಿವಾಹಿತ ಸೇರಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯ ; ನವ ವಿವಾಹಿತ ಸೇರಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯ,ಜೂ.9- ನವವಿವಾಹಿತ ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಪೂರ್ವ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನೆಹರುನಗರದ ನಿವಾಸಿ ಪ್ರಭಾಕರ್‌ ಎಂಬುವವರ ಪತ್ನಿ ಜ್ಯೋತಿ ಹಾಗೂ ಮಗ ಸಂತೋಷ್‌ ತಡರಾತ್ರಿ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ನಡುವೆಯೇ ಇಂದು ಬೆಳಗ್ಗೆ ತಮ ಬಟ್ಟೆ ಅಂಗಡಿಯಲ್ಲಿ ಪ್ರಭಾಕರ್‌ ಆತಹತ್ಯೆಗೆ ಶರಣಾಗಿದ್ದಾರೆ.ತಾಯಿ ಮಗ ಹೇಗೆ ಸಾವನ್ನಪ್ಪಿದ್ದಾರೆ ಎಂಬುವುದು ನಿಗೂಢವಾಗಿದೆ.ಒಂದು ತಿಂಗಳ ಹಿಂದೆಯಷ್ಟೇ ಸಂತೋಷ್‌ಗೆ ಮದುವೆ ಮಾಡಲಾಗಿದ್ದು, ಈ ಕುಟುಂಬ ಅನ್ಯೊನ್ಯವಾಗಿಯೇ ಇತ್ತು. ಆದರೆ ಯಾವ ಕಾರಣಕ್ಕೆ ಕುಟುಂಬದ ಮೂವರು ಸದಸ್ಯರು ಆತಹತ್ಯೆ ಮಾಡಿಕೊಂಡಿದ್ದಾರೆಂಬುವುದು ನಿಗೂಢವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಆತಹತ್ಯೆಗೂ ಮುನ್ನ ಏನಾದರೂ ಡೆತ್‌ನೋಟ್‌ ಬರೆದಿದ್ದಾರೆಯೇ ಎಂಬ ಬಗ್ಗೆ ಪ್ರಭಾಕರ್‌ ಅವರ ಮನೆಯನ್ನೆಲ್ಲಾ ಪೊಲೀಸರು ಶೋಧಿಸುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬದ ಸಂಬಂಧಿಕರು ಹಾಗೂ ನೆರೆಹೊರೆಯವರಿಂದ ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News