Homeಇದೀಗ ಬಂದ ಸುದ್ದಿಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2026)

ನಿತ್ಯ ನೀತಿ : ಅತಿದೊಡ್ಡ ಸಂಪತ್ತು ಎಂದರೆ ಬುದ್ಧಿವಂತಿಕೆ. ಅತಿ ಬಲವಾದ ಆಯುಧ ಎಂದರೆ ತಾಳೆ. ಅತ್ಯುತ್ತಮ ಔಷಧಿ ಎಂದರೆ ನಗು. ವಿಸ್ಮಯ ಎಂದರೆ ಇವೆಲ್ಲವೂ ಪ್ರಪಂಚದಲ್ಲಿ ಹಣವಿಲ್ಲದೆ ಸಿಗುವ ಅಮೂಲ್ಯ ಸಂಪತ್ತುಗಳು.

ಪಂಚಾಂಗ: ಸೋಮವಾರ, 27-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ /ಪಕ್ಷ: ಶುಕ್ಲ / ತಿಥಿ: ತ್ರಯೋದಶಿ / ನಕ್ಷತ್ರ: ಮೂಲಾ / ಯೋಗ: ವೈಧೃತಿ / ಕರಣ: ಗರಜೆ

ಸೂರ್ಯೋದಯ : ಬೆ.6.05
ಸೂರ್ಯಾಸ್ತ : 06.49
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಉದ್ಯೋಗದಾತರು ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವರು.
ವೃಷಭ: ರಾಜಕೀಯ ಪ್ರವೇಶಿಸಲು ಇದು ಸಕಾಲ. ಆತ್ಮ ವಿಶ್ವಾಸದ ಕೊರತೆ ಕಾಡಲಿದೆ.
ಮಿಥುನ: ಹಣ ನಿಮ್ಮ ಮೂಲಕ ಸುಲಭವಾಗಿ ಜಾರಿ ಹೋದರೂ ನಿಮ್ಮ ಅದೃಷ್ಟದಿಂದ ನಿಮಗೆ ಸುಲಭವಾಗಿ ದೊರಕುವಂತೆ ಮಾಡುತ್ತದೆ.

ಕಟಕ: ಹವಾಮಾನ ವೈಪರೀತ್ಯದಿಂದಾಗಿ ದೂರ ಪ್ರಯಾಣ ರದ್ದು ಮಾಡಬೇಕಾಗಬಹುದು.
ಸಿಂಹ: ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮವಾಗಿರುವುದು.
ಕನ್ಯಾ: ಉಪನ್ಯಾಸಕರಿಗೆ ಶುಭ ದಿನ. ಕಲಾವಿದರಿಗೆ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.

ತುಲಾ: ದುಡುಕು ಮಾತು ಗಳನ್ನಾಡದಿರಿ. ಆಟಗಾರರಿಗೆ ನಿರೀಕ್ಷಿತ ಫಲ ಸಿಗಲಿದೆ.
ವೃಶ್ಚಿಕ: ತೈಲ ಮಾರಾಟದಿಂದ ಲಾಭ ಸಿಗಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ.
ಧನುಸ್ಸು: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.

ಮಕರ: ಹಿಂಜರಿಕೆ ಮತ್ತು ಭಯದ ಸ್ವಭಾವದಿಂದ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಕುಂಭ: ಬದುಕಿನಲ್ಲಿ ತಿರುವು ಪಡೆಯುವಿರಿ. ವ್ಯಾಪಾರದಲ್ಲಿ ಲಾಭ.
ಮೀನ: ಮಧುಮೇಹದಂಥ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ.

RELATED ARTICLES

Latest News