ಬೆಂಗಳೂರು,ಜು.27- ರಾಜ್ಯದಲ್ಲಿ ನಿನ್ನೆ ಇಬ್ಬರು ರೌಡಿಗಳು ಸೇರಿದಂತೆ ಮೂವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಅಡುಗೆ ಭಟ್ಟನ ಕೊಲೆ :
ಅಡುಗೆ ಭಟ್ಟರೊಬ್ಬರನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಹಳೇ ಆರ್‌ಟಿಒ ರಸ್ತೆಯ ವೈನ್‌ಶಾಪ್‌ವೊಂದರ ಮುಂಭಾಗ ಕಳೆದ ರಾತ್ರಿ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಕಲಬುರಗಿಯ ಆದರ್ಶನಗರ ನಿವಾಸಿ ರವಿಗುತ್ತೇದಾರ್ (46) ಎಂದು ತಿಳಿದುಬಂದಿದೆ.
ಅಡುಗೆ ಕೆಲಸ ಮಾಡಿಕೊಂಡಿದ್ದ ರವಿ ಕಳೆದ ರಾತ್ರಿ ಮದ್ಯ ಸೇವಿಸಲು ವೈನ್‌ಶಾಪ್‌ಗೆ ಬಂದು ವಾಪಸ್ ಹೋಗಲು ಸ್ಕೂಟರ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ರವಿ ಗುತ್ತೇದಾರ್ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಎನ್ನಲಾಗಿದ್ದು, ಹಳೆ ವೈಷಮ್ಯಕ್ಕೆ ಕೊಲೆ ನಡೆದಿದೆ ಎಂದ ತಿಳಿದುಬಂದಿದೆ.ಈ ಸಂಬಂಧ ಎಂ ಬಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ರೌಡಿಗಳಿಬ್ಬರ ಕೊಲೆ :
ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯ ಶಿವಾಲ್ದಪ್ಪನ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ರೌಡಿ ಅರಕೆರೆಯ ವೆಂಕಟೇಶ್ (45)ನನ್ನು ಕಳೆದ ರಾತ್ರಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.ರಾತ್ರಿ ತುಮಕೂರು ಬಳಿಯ ಬೆಳಗುಂಬ ಸಮೀಪ ರೌಡಿ ಮಲ್ಲ ಅಲಿಯಾಸ್ ವೀರಣ್ಣ (42)ನನ್ನು ದುಷ್ಕರ್ಮಿಗಳು ಕೊಲೆ ತಲೆಮರೆಸಿಕೊಂಡಿದ್ದಾರೆ.ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಇಬ್ಬರು ರೌಡಿಗಳ ಕೊಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
