ಮಂಡ್ಯ,ಜು.27- ಮರದ ಕೊಂಬೆ ತಗುಲಿ ಬೃಹತ್ ಗಾತ್ರದ ಬಾಯ್ಲರ್ ರಸ್ತೆಗೆ ಅಡ್ಡಲಾಗಿ ಲಾರಿಯಿಂದ ಕೆಳಗೆ ಉರುಳಿ ಬಿದ್ದಿದ್ದು, ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಸಂಚಾರ ಬಂದ್ ಆಗಿತ್ತು.
ರಾಜಸ್ಥಾನದಿಂದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಬೃಹತ್ ಗಾತ್ರದ ಬಾಯ್ಲರ್ ಸಾಗಿಸುತ್ತಿದ್ದ ಲಾರಿಗೆ ಮುರುಕನಹಳ್ಳಿ ಬಳಿ ಬೃಹತ್ ಮರದ ಕೊಂಬೆ ತಗುಲಿ ಬಾಯ್ಲರ್ ರಸ್ತೆಗೆ ಅಡ್ಡಲಾಗಿ ಕೆಳಗೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಇದರಿಂದ ಮೈಸೂರು-ಚನ್ನರಾಯಪಟ್ಟಣ ರಸ್ತೆ ಬಂದ್ ಆಗಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಗಿತ್ತು.ಬದಲಿ ಮಾರ್ಗದಲ್ಲಿ ತೆರಳುವಂತೆ ಸ್ಥಳೀಯ ಪೊಲೀಸರು ಸೂಚನೆ ನೀಡಿದರು. ನಂತರ ಕ್ರೇನ್ ಮೂಲಕ ಬಾಯ್ಲರ್ ಅನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
