Homeಜಿಲ್ಲಾ ಸುದ್ದಿಗಳುಮೆಡಿಕಲ್‌ ವಿದ್ಯಾರ್ಥಿ ಆತಹತ್ಯೆ

ಮೆಡಿಕಲ್‌ ವಿದ್ಯಾರ್ಥಿ ಆತಹತ್ಯೆ

Medical student commits suicide

ಕಲಬುರಗಿ,ಮಾ.24- ಪ್ರತಿಷ್ಠಿತ ಕಾಲೇಜೊಂದರ ಮೆಡಿಕಲ್‌ ವಿದ್ಯಾರ್ಥಿ ವಸತಿ ನಿಲಯದಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆ.ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ನಿವಾಸಿ ಅನಿಷ್ಕಾರ್‌ ಚೌಹಾಣ್‌ (21) ಆತಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಅಂತಿಮ ವರ್ಷದ ಎಂಬಿಬಿಎಸ್‌‍ ವ್ಯಾಸಂಗ ಮಾಡುತ್ತಿದ್ದನು.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಅನಿಷ್ಕಾರ್‌ ಕಾಲೇಜು ವಸತಿ ನಿಲಯದಲ್ಲಿ ತಡರಾತ್ರಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದು, ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಎಫ್‌ಎಸ್‌‍ಎಲ್‌ ತಂಡ, ಸೋಕೋ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಸತಿ ನಿಲಯದ ಸಹಪಾಠಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಈ ವಿದ್ಯಾರ್ಥಿ ಆತಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆನ್‌ಲೈನ್‌ ಗೇಮ್‌ಗೆ ಈತ ಬಲಿಯಾದನಾ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆ ನಿಟ್ಟಿನಲ್ಲೂ ಸಹ ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES
spot_img

Latest News