ಪಾವಗಡ,ಮೇ 19- ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಕಮಲಕುಂಟೆ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ಜರುಗಿದೆ.
ಕಡಮಲಕುಂಟೆ ಗ್ರಾಮದ ಸರ್ವೆ ನಂಬರ್ 264/2 ಎಕರೆ ವಿನೋದಮ ರಾಮಾಂಜಿನಪ್ಪ ಎನ್ನುವರಿಗೆ ಸೇರಿದ್ದು, ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಡೀ ತೋಟಕ್ಕೆ ಬೆಂಕಿ ವ್ಯಾಪಿಸಿದೆ. ಇದರಿಂದ 10 ತೆಂಗಿನ ಗಿಡಗಳು ಮತ್ತು 800 ಅಡಿಕೆ ಸಸಿಗಳು ಹಾಗೂ, ನೀರಿನ ಸ್ಪಿಂಕ್ಲರ್ ಪೈಪುಗಳು ಸುಟ್ಟು ಕರಕಲಾಗಿವೆ.
ಮಾಹಿತಿ ಪಡೆದುಕೊಂಡ ಅಗ್ನಿಶಾಮಕ ಠಾಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯ ಕೆನಾಲೆಯನ್ನು ನಂದಿಸಿದ್ದಾರೆ. ಇಲ್ಲದಿದ್ದರೆ ಇಡೀ ತೋಟಕ್ಕೆ ತೋಟ ಸುಟ್ಟು ಹೋಗಿ ರೈತರಿಗೆ ತೀವ್ರ ನಷ್ಟ ಉಂಟಾಗುವ ಸಂಭವ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಬಗ್ಗೆ ಬಾಧಿತ ರೈತ ರಾಮಾಂಜಿನಪ್ಪ ಮಾತನಾಡಿ, ಕಳೆದ 30 ವರ್ಷಗಳಿಂದ ನಾವು ತೋಟದ ಮನೆಯಲ್ಲಿ ವಾಸಿಸುತ್ತಿದ್ದು, ನಿನ್ನೆ ಮಧ್ಯಾಹ್ನ ಯಾರೊ ಕಿಡಿಗೇಡಿಗಳು ನಮ ತೋಟಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ತೋಟವನ್ನು ಬೆಳೆಸಿಕೊಂಡು ಬಂದಿದ್ದು ಬಂದ ಪಸಲನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತ್ದೆಿವು, ನಮಗೆ ಈಗ ಲಕ್ಷಾಂತರ ರೂಗಳು ನಷ್ಟವಾಗಿದ್ದು, ಸಂಬಂಧಪಟ್ಟ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮಹಜರು ನಡೆಸಿ ನಷ್ಟ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
