ಲಂಡನ್,ಮೇ 19-ಭಯವೇ ಧರ್ಮದ ಮೂಲ ಎಂದು ವ್ಯಾಖ್ಯಾನಿಸುತ್ತಿರುವ ಇವತ್ತಿನ ಜಾಗತಿಕ ಸಂದರ್ಭದಲ್ಲಿ ಬಸವಣ್ಣವರು ಹೇಳಿದ ದಯವೇ ಧರ್ಮದ ಮೂಲವಯ್ಯ ಎಂಬದನ್ನು ಗಟ್ಟಿಯಾಗಿ ಸಾರುವ ಅಗತ್ಯವಿದೆ ಎಂದು ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ. ಶ್ರೀ ಮನಿಪ್ರಡಾ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ.
ಯೂರೋಪ್‌ಬಸವ ಸಮಿತಿ ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಆಯೋಜಿಸಿದ್ದ ಬಸವ ಜಯಂತಿಯ ಸಾನ್ನಿಧ್ಯವಹಿಸಿ ಅಶೀರ್ವಚನ ನೀಡಿದರು.ಇಂದು ಹಿಂಸೆಯನ್ನು ಎತ್ತಿಹಿಡಿಯುವ ವಿಕೃತಿ ಮೆರೆಯುತ್ತಿದೆ. ಬಸವಣ್ಣ ಧರ್ಮವನ್ನು ಅದರ ಮೂಲ ಅರ್ಥದಲ್ಲಿ ವ್ಯಾಖ್ಯಾನಿಸಿ ಎಲ್ಲರಲ್ಲೂ ದಯೆಯೇ ಮುಖ್ಯವಾಗಬೇಕು. ದಯೆಯುಳ್ಳದ್ದೇ ಧರ್ಮ, ಅಲ್ಲವಾದುದು ಅಧರ್ಮವೆಂದೇ ಹೇಳಿದ್ದಾರೆ.
ಕಾಯಕವೇ ಕೈಲಾಸ, ದಾಸೋಹವೇ ದೇವಧಾಮ ಎಂಬ ನುಡಿಗಟ್ಟುಗಳು ಅಂದಿನಿಂದಲೂ ಸುಪ್ರಸಿದ್ಧವಾಗಿ ಜನಮಾನಸದಲ್ಲಿ ನೆಲೆಸಿವೆ. ಪ್ರತೀ ಮಾನವನು ಕೂಡಾ ನೈತಿಕ ನೆಲೆಗಟ್ಟಿನಲ್ಲಿ ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು ಎಂಬುದು ಅನುಭವ ಮಂಟಪದ ಸಿದ್ಧಾಂತವಾಗಿತ್ತು. ಅನುಭವ ಮಂಟಪದ ಈ ಮೌಲ್ಯಗಳು ಇಂದಿಗೂ ಅಗತ್ಯ ಮತ್ತು ಅನಿವಾರ್ಯ ಎಂದು ವಿವರಿಸಿದರು.
ಜರ್ಮನ್‌ನಲ್ಲಿರುವ ಭಾರತೀಯ ರಾಯಭಾರಿ ಅಜಿತ್ ವಿನಾಯಕ ಗುಪ್ತೆ ಮಾತನಾಡಿ, ಬಸವಣ್ಣ ಒಬ್ಬ ತತ್ವಜ್ಞಾನಿ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕ ಮಾತ್ರವಲ್ಲದೆ ದೈವಿಕ ಮತ್ತು ದೈನಂದಿನ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಿದ ಆಧ್ಯಾತಿಕ ಚೈತನ್ಯ ಮತ್ತು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ಪ್ರಸಿದ್ಧವಾಗಿ ತಿರಸ್ಕರಿಸಿದ ವರ್ಗರಹಿತ ಸಮಾಜದ ಉಗ್ರ ಪ್ರತಿಪಾದಕರಾಗಿದ್ದರು ಎಂದರು.
ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅವರ ಅನುಭವ ಮಂಟಪವು ಸಾರ್ವಜನಿಕ ಜೀವನದಲ್ಲಿ ಯಾವುದೇ ತಾರತಮ್ಯವನ್ನು ಲೆಕ್ಕಿಸದೆ ಎಲ್ಲರ ಸಾರ್ವತ್ರಿಕ ಭಾಗವಹಿಸುವಿಕೆಗೆ ಅಡಿಪಾಯ ಹಾಕಿತು ಎಂದು ತಿಳಿಸಿದರು.
ಇಂದಿನ ಈ ಸಮಾವೇಶವು ಜರ್ಮನಿ ಮತ್ತು ಭಾರತದಲ್ಲಿ ಹೇರಳವಾಗಿರುವ ಪ್ರಾಚೀನ ಜ್ಞಾನದ ನಡುವಿನ ಪ್ರಮುಖ ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯನಿರ್ವಹಿಸುವುದರಿಂದ ಇದು ಸಮಯೋಚಿತವಾಗಿದೆ, ಇದು ಇಂದು ಜಾಗತಿಕ ಸಮಾಜವನ್ನು ಗೊಂದಲಕ್ಕೀಡುಮಾಡುವ ಹಲವಾರು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಸಾಧನವಾಗಿದೆ ಎಂದರು.
ಇಂಡಾಲಜಿಸ್ಟ್ ಮತ್ತು ಪೊೆಸರ್ ದಕ್ಷಿಣ ಏಷ್ಯಾದ ಅಧ್ಯಯನಗಳ ವಿಭಾಗದ ಪೊ. ಡಾ. ರಾಬರ್ಟ್ ಜೆ ಝೈಡೆನ್ಬೋಸ್ ಅವರು ಮಾತನಾಡಿ, ದಾಸೋಹ ಅನ್ನುವ ವಿಚಾರ ಸರ್ವೋದಯ ತತ್ವದ ಆಧಾರಿತದ್ದು. ಅದು ಸಿದ್ಧಾಂತಕ್ಕೂ ಮೀರಿದ ಜೀವನದ ಫಿಲಾಸಫಿ.ಭಾರತೀಯರಾದ ನೀವುಗಳು , ನೀವು ಯಾವ ವಿಚಾರದ ಭೂಮಿಯವರು ಎಂಬ ಅರಿವು ಇರಲಿ ಎಂದು ಘೋಷಿಸಿದರು.
ಚಿಕ್ಕಮಗಳೂರಿನ ಐಸಿರಿ ೌಂಡೇಷನ್‌ನ ನಿರ್ದೇಶಕರಾದ ರೋಹನ್ ಭಾರ್ಗವಪುರಿ ಮಾತನಾಡಿ, ಬಸವಣ್ಣನವರ ಮೂರು ಮೂಲಭೂತ ವಿಷಯಗಳಾದ ದಾಸೋಹ, ಸಮಾನತೆ ಹಾಗೂ ಕಾಯಕತ್ವ ಇಡೀ ಜಗತ್ತಿಗೆ ಒಂದು ಮಾದರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎರ್ಲಾಂಗೆನ್‌ನಗರದ ಉಪಮೇಯರ್ ಇವಾ ಲಿನ್ಹಾರ್ಟ್, ವಿಹೆಚ್‌ಪಿ ಯೂರೋಪಪ್ರೊತಿನಿ ರಾಹುಲ್ ನಾರಾಯಣ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಸವ ಸಮಿತಿ ಯುರೋಪಿನ ಅಧ್ಯಕ್ಷರಾದ ವಿಜಯ್ ಕುಮಾರ್ ಮತ್ತು ಕಾರ್ಯಕಾರಿ ಮಂಡಳಿಯವರು ಮತ್ತಿತರರು ಉಪಸ್ಥಿತರಿದ್ದರು.
