ಬೆಂಗಳೂರು,ಸೆ.27-ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಡ್ರೋಣ್ ಹಾರಾಟ ನಡೆಸಿರುವ ಘಟನೆ ನಡೆದಿದೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲೇ ಡ್ರೋಣ್ ಹಾರಾಟ ನಡೆಸಿದೆ.
ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಹೊರಟ ವೇಳೆ ಡ್ರೋಣ್ ಹಾರಾಟ ನಡೆಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಡ್ರೋಣ್ ಕೇಸರಿ ಮತ್ತು ಹಳದಿ ಬಣ್ಣದಿಂದ ಕೂಡಿತ್ತು ಎನ್ನಲಾಗಿದೆ. ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಯಾವುದೇ ಡ್ರೋಣ್ ಹಾರಾಟ ಮಾಡುವಂತಿಲ್ಲ. ಈ ವೇಳೆ ಇದನ್ನು ನಿಷೇತ ವಲಯ ಎಂದು ಘೋಷಣೆ ಮಾಡಲಾಗಿರುತ್ತದೆ.
ಬ್ಯಾಂಕ್ ಲಾಕರ್‌ನಲ್ಲಿದ್ದ 18 ಲಕ್ಷ ರೂ. ತಿಂದ ಗೆದ್ದಲು ಹುಳುಗಳು
ವಿಮಾನವ ಟೇಕ್ ಆಫ್ ಆದ ಸ್ಥಳದಿಂದ ಆರು ನಾಟಿಕಲ್ ಮೈಲಿ ದೂರದಲ್ಲಿ ಡ್ರೋಣ್ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ. ಇದರಂದ ಆತಂಕಗೊಂಡ ಪೈಲೆಟ್ಗಳು ತಕ್ಷಣವೇ ವಾಯು ಸಂಚಾರ ನಿಯಂತ್ರಣಾಲಯ(ಎಟಿಸಿ)ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.