Thursday, April 16, 2026
Homeಮನರಂಜನೆಸ್ನೇಹ.. ಪ್ರೀತಿ.. ದ್ವೇಷದ `ಕರಿಕಾಡ’ ಕಾಡ ನಟರಾಜನ ನಟನೆಗೆ ಜೈಕಾರ

ಸ್ನೇಹ.. ಪ್ರೀತಿ.. ದ್ವೇಷದ `ಕರಿಕಾಡ’ ಕಾಡ ನಟರಾಜನ ನಟನೆಗೆ ಜೈಕಾರ

Karikada Kannada Movie Review

ಕರಿಕಾಡ ಟೈಟಲ್ ನಲ್ಲೇ ಗಮನ ಸೆಳೆದಿದ್ದ ಸಿನಿಮಾ ಇಂದು ರಿಲೀಸ್ ಆಗಿ ಉತ್ತಮ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಇದು ಕಾಡ ನಟರಾಜ್ ಅವರ ಕನಸಿನ ಕೂಸಾಗಿದೆ. ಆ ಕನಸಿನ ಕೂಸನ್ನ ಜೋಪಾನ ಮಾಡಿ, ಪ್ರೇಕ್ಷಕರೆದುರು ದೊಡ್ಡ ಪರದೆ ಮೇಲೆ ತೆರೆದಿಡುವಲ್ಲಿ ನಿರ್ದೇಶಕ ವೆಂಕಟೇಶ್ ಕೂಡ ಸಕ್ಸಸ್ ಆಗಿದ್ದಾರೆ. ಈ ಸಿನಿಮಾದಲ್ಲಿ ಮಲೆನಾಡಿನ ಭಾಗದ ಸೌಂದರ್ಯವನ್ನ ಮನಸಾರೆ ಫೀಲ್ ಮಾಡುವಂತ ದೃಶ್ಯಗಳೇ ಹೆಚ್ಚಾಗಿದಾವೆ.

ಕಾಡ ನಟರಾಜ್ ಕಾರ್ಪೋರೇಟ್ ಸೆಕ್ಟರ್ ನಲ್ಲಿ ಕೆಲಸ ಮಾಡಿಕೊಂಡೇ ಸಿನಿಮಾವನ್ನ ಮಾಡಿ ಮುಗಿಸಿದವರು. ಮಲೆನಾಡಿನ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಈ ಸಿನಿಮಾದಲ್ಲಿ ಕಾಡು ಹಂದಿಯ ಬೇಟೆ ಪ್ರಮುಖವಾಗಿದೆ. ಇದರ ಜೊತೆ ಜೊತೆಗೆ ಪ್ರೀತಿ ಅರಳುತ್ತೆ, ದ್ವೇಷ ಕಾಣಿಸುತ್ತೆ, ಗುದ್ದಾಟಗಳು ಆಗುತ್ತವೆ, ಒಂದಷ್ಟು ಎಮೋಷನಲ್ ಸೀನ್ ಮನಸ್ಸಿಗೆ ನಾಟುತ್ತೆ. ಒಟ್ಟಾರೆ ಇಡೀ ಸಿನಿಮಾವನ್ನು ಶ್ರದ್ಧೆಯಿಂದ ನೋಡುವಂತೆ ಮಾಡುತ್ತದೆ.

ನಾಯಕ ಕಾಡ ನಟರಾಜ್ ತಮ್ಮ ಮೊದಲ ಸಿನಿಮಾದಲ್ಲಿಯೇ ಭರವಸೆಯನ್ನ ಮೂಡಿಸಿದ್ದಾರೆ. ಸಿನಿಮಾಗೆ ಮ್ಯೂಸಿಕ್ ಕೂಡ ಪ್ಲಸ್ ಪಾಯಿಂಟ್ ಆಗಿದೆ. ಮಲೆನಾಡಿನ ಭಾಗ ಅಂದ್ರೆ ಕೇಳೋದೆ ಬೇಡ. ಒಂದೊಳ್ಳೆ ದೃಶ್ಯ ಕಾವ್ಯವನ್ನೇ ಕಟ್ಟಿಕೊಟ್ಟಿದ್ದಾರೆ. ದೀಪ್ತಿ ದಾಮೋದರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಒಂದೊಳ್ಳೆ ಸಿನಿಮಾ ಮೂಲಕ ಕಾಡ ನಟರಾಜ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

RELATED ARTICLES

Latest News