Friday, May 24, 2024
Homeಜಿಲ್ಲಾ ಸುದ್ದಿಗಳುಮನೆಯಲ್ಲೇ ಮತದಾನ ಮಾಡಿ ಮರುಕ್ಷಣವೇ ಪ್ರಾಣಬಿಟ್ಟ ವೃದ್ದೆ

ಮನೆಯಲ್ಲೇ ಮತದಾನ ಮಾಡಿ ಮರುಕ್ಷಣವೇ ಪ್ರಾಣಬಿಟ್ಟ ವೃದ್ದೆ

ಉಡುಪಿ, ಏ.17-ಲೋಕಸಭೆ ಚುನಾವಣೆ ಸಂಭಂದ ಚುನಾವಣಾ ಆಯೋಗದ ಸೌಲಭ್ಯಪಡೆದು ಉತ್ಸಾಹದಿಂದ ಮನೆಯಲ್ಲೇ ಮತದಾನ ಮಾಡಿದ ವೃದ್ದೆ ಕೆಲವೇ ಕ್ಷಣದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರದಲ್ಲಿ ನಡೆದಿದೆ.

ಚಡಗರ ಅಗ್ರಹಾರದ ನಿವಾಸಿ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಅವರು ಮನೆಯಲ್ಲಿ ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಚುನಾವಣಾ ಆಯೋಗ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಹೀಗಾಗಿ ನಿವೃತ್ತ ಗ್ರಾಮ ಲೆಕ್ಕಾಕಾರಿ ದಿವಂಗತ ನಾರಾಯಣ ಉಪಾಧ್ಯ ಅವರ ಪತ್ನಿ ಪಿ.ಯಶೋಧಾ ಅವರು ಮನೆಯಲ್ಲೆ ಮತದಾನ ಮಾಡಿದರು.

ಬೆಳಿಗ್ಗೆ ಯಶೋಧಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿ ಆಸ್ಪತ್ರೆ ತೆರಳಲು ಪಿ.ಯಶೋಧಾ ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕ ಪಿ.ಯಶೋಧಾ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕ್ಸತ್ಸೆ ಫಲಕಾರಿಯಾಗದೆ ಪಿ.ಯಶೋಧಾ ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.

RELATED ARTICLES

Latest News