Homeಮನರಂಜನೆದಳಪತಿ ವಿಜಯ್‌- ತ್ರಿಷಾ ಮದುವೆಯಾಗಲಿ; ರಾಖಿ ಸಾವಂತ್‌

ದಳಪತಿ ವಿಜಯ್‌- ತ್ರಿಷಾ ಮದುವೆಯಾಗಲಿ; ರಾಖಿ ಸಾವಂತ್‌

Rakhi Sawant reacts to Vijay and Trisha's dating rumours: 'They should get married'

ಮುಂಬೈ, ಮೇ.9- ಸರ್ಕಾರ ರಚನೆಗೆ ದಳಪತಿ ವಿಜಯ್‌ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲೇ ಬಾಲಿವುಡ್‌ನ ವಿವಾದಾತಕ ನಟಿ ರಾಖಿ ಸಾವಂತ್‌ ಅವರು ವಿಜಯ್‌- ತ್ರಿಷಾ ಕೃಷ್ಣನ್‌ ವಿವಾಹವಾಗಲಿ ಎಂದು ಹೇಳಿಕೆ ನೀಡುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

ದಳಪತಿ ವಿಜಯ್‌ ಮತ್ತು ತ್ರಿಷಾ ಕೃಷ್ಣನ್‌ ನಡುವಿನ ಸ್ನೇಹದ ಬಗ್ಗೆ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ ರಾಖಿ ಸಾವಂತ್‌ ಅವರು ವಿಜಯ್‌ ಮತ್ತು ತ್ರಿಷಾ ಮದುವೆಯಾಗಬೇಕು ಎಂದು ಹೇಳುವ ಮೂಲಕ ರಾಖಿ ಸಂಚಲನ ಮೂಡಿಸಿದ್ದಾರೆ.

ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ರಾಖಿ, ವಿಜಯ್‌ ಮತ್ತು ತ್ರಿಷಾ ಮದುವೆಯಾಗಬೇಕು ಎಂದು ನನಗೆ ಅನ್ನಿಸುತ್ತಿದೆ. ಅವರಿಬ್ಬರ ಮದುವೆ ನಡೆದರೆ ನಾನು ಖಂಡಿತವಾಗಿಯೂ ಮೆಹಂದಿ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದಿದ್ದಾರೆ. ಅಲ್ಲದೆ, ವಿಜಯ್‌ ರಾಜಕೀಯ ಯಶಸ್ಸನ್ನು ಶ್ಲಾಘಿಸಿದ ಅವರು, ವಿಜಯ್‌ ಅವರ ಪಕ್ಷವನ್ನು ಸೇರಲು ನಾನು ಇಷ್ಟಪಡುತ್ತೇನೆ ಎಂದು ತಮ ಆಸೆಯನ್ನು ಹೊರಹಾಕಿದ್ದಾರೆ.

ವಿಜಯ್‌ ಮತ್ತು ತ್ರಿಷಾ ಬಗ್ಗೆ ಇಷ್ಟೊಂದು ಚರ್ಚೆ ನಡೆಯಲು ಕಾರಣ ಅವರ ಆನ್‌‍-ಸ್ಕ್ರೀನ್‌ ಕೆಮಿಸ್ಟ್ರಿ. ಗಿಲ್ಲಿ ಚಿತ್ರದಿಂದ ಆರಂಭವಾದ ಇವರ ಜೋಡಿ ಲಿಯೋ ಚಿತ್ರದವರೆಗೂ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದೆ. ಇನ್ನೊಂದೆಡೆ, ವಿಜಯ್‌ ಮತ್ತು ಅವರ ಪತ್ನಿ ಸಂಗೀತ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳು ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದವು. ಅದು ನಿಜವಾಗಿದೆ. ಸಂಗೀತಾ ಅವರು ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ವಿಜಯ್‌ ಅವರ ಟಿವಿಕೆ ಪಕ್ಷ ದೊಡ್ಡ ಮಟ್ಟದ ಗೆಲುವು ಸಾಧಿಸಿದ ಬೆನ್ನಲ್ಲೇ, ತ್ರಿಷಾ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ವಿಜಯ್‌ ಗೆದ್ದಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ತ್ಯಜಿಸಬೇಕಿದ್ದು, ಆ ಉಪಚುನಾವಣೆಯಲ್ಲಿ ತ್ರಿಷಾ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

RELATED ARTICLES

Latest News