ಬಿಗ್ ಬಾಸ್ ಸೀಸನ್ 12 ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಮೂರು ವಾರಗಳಲ್ಲಿ ಬಿಗ್ ಬಾಸ್ ಮುಕ್ತಾಯವಾಗುತ್ತೆ. ಆದ್ರೆ ಈ ಕೊನೆಯ ಹಂತದಲ್ಲಿ ಬಿಗ್ ಬಾಸ್ ಕಪ್ ಎತ್ತೋರು ಯಾರು..? 50 ಲಕ್ಷ ರೂಪಾಯಿ ತಗೊಂದು ಮನೆಗೆ ಹೋಗೋದು ಯಾರು ಎಂಬ ಪ್ರಶ್ನೆ ಸಾಮಾನ್ಯವಾಗಿಯೇ ಎಲ್ಲರ ತಲೆಯಲ್ಲೂ ಇದೆ. ಇದಕ್ಕೆ ಉತ್ತರ ಈಗಲೂ ಗೊಂದಲದಲ್ಲಿಯೇ ಇದೆ. ಯಾಕಂದ್ರೆ ಬಹಳ ಮುಖ್ಯವಾಗಿ ಓಡುತ್ತಿರುವ ಹೆಸರು ಒಂದಲ್ಲ.. ಇಲ್ಲಿ ಎರಡು. ಅಂದ್ರೆ ಗಿಲ್ಲಿ ಹಾಗೂ ಅಶ್ವಿನಿ. ಈ ಇಬ್ಬರ ಗ್ರಾಫ್ ಅನ್ನು ಆರಂಭದಿಂದಾನೂ ನೋಡಿಕೊಂಡು ಬಂದರೆ ಇಬ್ಬರಲ್ಲಿ ಒಬ್ಬರು ಇದ್ದೇ ಇರ್ತಾರೆ ಅನ್ನೋದು ಜನಗಳ ನಿರೀಕ್ಷೆ.
ಜನರ ಬಳಿ ಬಿಗ್ ಬಾಸ್ ಬಗ್ಗೆ ಅಭಿಪ್ರಾಯವನ್ನೇನಾದ್ರೂ ಕೇಳಿದ್ರೆ ಅವರೇಳುವುದು ನಾವೂ ಗಿಲ್ಲಿಗಾಗಿಯೇ ಬಿಗ್ ಬಾಸ್ ನೋಡ್ತೀವಿ ಅಂತ. ಇದರ ಜೊತೆಗೆ ಅಶ್ವಿನಿ ಅವರು ಇಲ್ಲ ಅಂದಿದ್ರೆ ಅಲ್ಲಿ ಗಿಲ್ಲಿ ಆಟಕ್ಕೂ ಒಂದು ಸ್ವಾರಸ್ಯ ಇರ್ತಾ ಇರ್ಲಿಲ್ಲ ಎಂಬ ಅಂದಾಜು ಎಲ್ಲರಿಗೂ ಇದೆ. ಶೋ ಆರಂಭವಾದಾಗಿನಿಂದ ಇಲ್ಲಿಯವರೆಗೂ ಅಶ್ವಿನಿ ಹಾಗೂ ಗಿಲ್ಲಿಯದ್ದು ನಾನಾ ನೀನಾ ಫೈಟೇ ಇದೆ. ಆದ್ರೂ ಕೆಲವೊಮ್ಮೆ ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ಒಬ್ಬರ ಬೆಂಬಲಕ್ಕೆ ಇನ್ನೊಬ್ಬರು ನಿಂತು ಅಚ್ಚರಿ ಮೂಡಿಸಿದ್ದಾರೆ. ಇನ್ನೇನು ಎರಡ್ಮೂರು ವಾರದಲ್ಲಿ ಫೈನಲ್ ನಡೆಯುತ್ತೆ. ಈ ಸಂದರ್ಭದಲ್ಲಿಯೂ ಚಾಂಪಿಯನ್ ಪಟ್ಟಕ್ಕೂ ಇವರಿಬ್ಬರೇ ಮುಖ್ಯ ರೇಸ್ನಲ್ಲಿದ್ದಾರೆ ಅನ್ನೋ ಮಾತುಗಳನ್ನ ಬಿಗ್ಬಾಸ್ ವೀಕ್ಷಕರು ಹೇಳ್ತಿದ್ದಾರೆ.
ಗಿಲ್ಲಿಗೆ ಬಿಗ್ಬಾಸ್ ಮನೆಗೆ ಬಂದಾಗಿಂದ ತಾನು ಕ್ಯಾಪ್ಟನ್ ಆಗ್ಬೇಕು ಅನ್ನೋ ಆಸೆಯಿತ್ತು. ಆದ್ರೆ, ಆ ಆಸೆ ನೆರವೇರಿದ್ದು 12ನೇ ವಾರದಲ್ಲಿ. ಅದು ಅಶ್ವಿನಿ ಗೌಡ ವಿರುದ್ಧ ಫೈನಲ್ ಟಾಸ್ಕ್ನಲ್ಲಿ ಗೆದ್ದು ಕ್ಯಾಪ್ಟನ್ ಪಟ್ಟಕ್ಕೇರುತ್ತಾರೆ. ಹೀಗಾಗಿ ಈ ವಾರ ನಡೆಯೋ ಗೇಮ್ನಲ್ಲಿ ಗಿಲ್ಲಿಯದ್ದೇ ಉಸ್ತುವಾರಿಯಾಗಿರುತ್ತೆ.
ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಗಿಲ್ಲಿಗೆ ರಾಜನ ಪಟ್ಟ ನೀಡಿದ್ರೆ, ಅಶ್ವಿನಿ ಗೌಡಗೆ ರಾಣಿ ಪಟ್ಟ ನೀಡುತ್ತೆ. ಕಳೆದ ಕೆಲವು ದಿನಗಳ ಹಿಂದಷ್ಟೆ ಗಿಲ್ಲಿ ಹಾಗೇ ಅಶ್ವಿನಿ ಗೌಡ ನಡುವೆ ಇದ್ದ ಆತ್ಮೀಯತೆ ನೋಡಿ ವೀಕ್ಷಕರು ನಿಜಕ್ಕೂ ಶಾಕ್ ಆಗಿದ್ದರು. ಇದೇನಿದು ಇದ್ದಕ್ಕಿದ್ದ ಹಾಗೇ ಈ ರೀತಿ ಒಂದಾಗಿಬಿಟ್ರಲ್ಲ ಅಂತ ಮಾತನಾಡಿಕೊಳ್ತಾ ಇದ್ರು. ಆದರೆ ಮತ್ತೆ ಇದ್ದಕ್ಕಿದ್ದ ಹಾಗೇ ಇಬ್ಬರ ನಡುವೆ ಶುರುವಾಯ್ತು ನೋಡಿ ಮಾತಿನ ವಾದ.
ಗಿಲ್ಲಿ ಮುದುಕಿ ಅನ್ನೋದಕ್ಕೆ ಅಶ್ವಿನಿ ಅವರು ಸ್ಪೈನಲ್ ಕಾರ್ಡ್ ಇಲ್ಲದೋನೆ ಅನ್ನೋಕೆ. ತಾರಕಕ್ಕೇರಿದೆ ಇಬ್ಬರ ಜಗಳ. ಸದ್ಯ ಇಂದಿನ ಪ್ರೋಮೋ ನೋಡಿದಾಗಲೂ ಶನಿವಾರದ ಸುದೀಪ್ ಅವರು ಮಾತನಾಡುವ ಬಹಳ ಮುಖ್ಯವಾದ ಪಾಯಿಂಟ್ ಕೂಡ ಇದೇ ಗಿಲ್ಲಿ ಹಾಗೂ ಅಶ್ವಿನಿ ಗೌಡರದ್ದೇ ಆಗಿದೆ. ಒಟ್ನಲ್ಲಿ ಕಪ್ ಎತ್ತುವವರು ಯಾರೂ ಎಂಬ ಕುತೂಹಲದಲ್ಲಿ ಎಲ್ಲರೂ ಕಾಯ್ತಿದ್ದಾರೆ.
