Thursday, April 16, 2026
Homeರಾಜ್ಯಮಹಿಳೆಯರೊಂದಿಗೆ ಅನುಚಿತ ವರ್ತಿಸಿದ ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳ ಬಂಧನ

ಮಹಿಳೆಯರೊಂದಿಗೆ ಅನುಚಿತ ವರ್ತಿಸಿದ ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳ ಬಂಧನ

Two students from Tamil Nadu arrested for misbehaving with women

ಬೆಂಗಳೂರು,ಜ.3- ಕುಡಿದ ಮತ್ತಿನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಮಿಳುನಾಡಿನ ಇಬ್ಬರು ವಿದ್ಯಾರ್ಥಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಅಂಶ್‌ಮೆಹ್ತಾ (22) ಮತ್ತು ಪೆರಂಬೂರ್‌ ನಿವಾಸಿ ಪರ್ವರಾತಿ (22) ಬಂಧಿತ ವಿದ್ಯಾರ್ಥಿಗಳು.

ಇವರಿಬ್ಬರು ಹೊಸವರ್ಷಾಚಣೆಗಾಗಿ ತಮಿಳುನಾಡಿನಿಂದ ನಗರಕ್ಕೆ ಬಂದಿದ್ದು, ಜ.1 ರಂದು ಬೆಳಗಿನ ಜಾವ 1.40 ರ ಸುಮಾರಿನಲ್ಲಿ ಅಂಬೇಡ್ಕರ್‌ ವೀದಿ, ಇಂಡಿಯನ್‌ ಎಕ್ಸ್ ಪ್ರೆಸ್‌‍ ಕಟ್ಟಡದ ಮುಂಭಾಗ ಹೋಗಿದ್ದಾರೆ.ವರ್ಷಾಚರಣೆ ಮುಗಿಸಿಕೊಂಡು ರೆಸ್ಟೋರೆಂಟ್‌ ಮುಂಭಾಗ ನಾಲ್ವರು ಮಹಿಳೆಯರು ಕ್ಯಾಬ್‌ಗಾಗಿ ಕಾಯುತ್ತಿದ್ದಾಗ ಅವರೊಂದಿಗೆ ಇವರಿಬ್ಬರು ಅನುಚಿತವಾಗಿ ವರ್ತಿಸಿದ್ದಾರೆ.

ತಕ್ಷಣ ಈ ಮಹಿಳೆಯರು ಕರ್ತವ್ಯದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದಾರೆ. ಕನ್ಸ್ ಸ್ಟೇಬಲ್‌ ರವಿ ಎಂಬುವವರು ಅಲ್ಲಿದ್ದ ಇಬ್ಬರು ಯುವಕರನ್ನು ವಿಚಾರಿಸಿ ಇಲ್ಲಿಂದ ಹೊರಡಿ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಕಾನ್ಸ್ ಸ್ಟೇಬಲ್‌ ಧರಿಸಿದ್ದ ರಿಫ್ಲಕ್ಟರ್‌ ಜಾಕೆಟ್‌ನನ್ನು ಹರಿದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.ತಕ್ಷಣ ಕಾನ್ಸ್ ಸ್ಟೇಬಲ್‌ ಕಂಟ್ರೋಲ್‌ ರೂಮ್‌ಗೆ ತಿಳಿಸಿ ಹೊಯ್ಸಳ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಹೊಯ್ಸಳ ಸಿಬ್ಬಂದಿಗಳಾದ ಎಎಸ್‌‍ಐ ಶ್ರೀನಿವಾಸ್‌‍ ಮತ್ತು ಹೆಡ್‌ಕಾನ್ಸ್ ಸ್ಟೇಬಲ್‌ ಪ್ರಶಾಂತ್‌ ಕಲಬುರಗಿಯವರು ಸ್ಥಳಕ್ಕೆ ಬಂದು ಆ ಇಬ್ಬರು ಯುವಕರನ್ನು ಹೊಯ್ಸಳ ವಾಹನದಲ್ಲಿ ಕೂರಿಸಲು ಯತ್ನಿಸಿ ದಾಗ ತಲ್ಲಾಟ ಮಾಡಿದ್ದಾರೆ. ನಂತರ ಆ ಇಬ್ಬರು ಯುವಕರನ್ನು ಹೊಯ್ಸಳ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದೊಯ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News