ನವದೆಹಲಿ,ಆ.6- ಇಂಧನ ಭದ್ರತೆಯ ವ್ಯಾಖ್ಯಾನವು ಮೂಲಭೂತ ಪರಿವರ್ತನೆಗೆ ಒಳಗಾಗಿದೆ ಎಂದು ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
7ನೇ ಸಿಐಐ ಅಂತಾರಾಷ್ಟ್ರೀಯ ಇಂಧನ ಸಮೇಳನ ಮತ್ತು ಪ್ರದರ್ಶನದ ಸಂದರ್ಭದಲ್ಲಿ ಇಂಧನ ಭದ್ರತೆ ಮತ್ತು ಪೂರೈಕೆ ಸರಪಳಿಗಳು ಕುರಿತ ವಿಶೇಷ ಸಮಗ್ರ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ರಾಷ್ಟ್ರವು ಅಭಿವೃದ್ಧಿ ಹೊಂದುವುದು ಕೇವಲ ಇಂಧನ ಸಂಪನೂಲಗಳಿಂದಲ್ಲ. ಬದಲಾಗಿ ಭವಿಷ್ಯಕ್ಕೆ ಶಕ್ತಿ ತುಂಬುವ ತಂತ್ರಜ್ಞಾನಗಳ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ತಯಾರಿಸುವ, ಆವಿಷ್ಕರಿಸುವ ಮತ್ತು ನಿರ್ಣಯಿಸುವ ಸಾಮರ್ಥ್ಯದಿಂದ ನಿರ್ಧರಿಸಲ್ಪಡುತ್ತದೆ ಎಂದರು.
ಕೈಗಾರಿಕ ಸಾಮರ್ಥ್ಯ ಮತ್ತು ಇಂಧನ ಸುರಕ್ಷತೆಯನ್ನು ಬೇರ್ಪಡಿಸಲಾಗುವುದಿಲ್ಲ. ಇತ್ತೀಚಿನ ಭೌಗೋಳಿಕ, ರಾಜಕೀಯ ಬೆಳವಣಿಗೆಗಳು, ಪೂರೈಕೆ ಸರಪಳಿ ಯೋಜನೆಗಳು ಹಾಗೂ ನಿರ್ಣಾಯಕ ಖನಿಜಗಳಿಗೆ ಹೆಚ್ಚುತ್ತಿರುವ ಪೈಪೋಟಿಯು ಜಾಗತಿಕ ಕೈಗಾರಿಕಾ ಆದ್ಯತೆಗಳನ್ನು ಪುನರ್ ರೂಪಿಸಿದ್ದು, ಉತ್ಪಾದನಾ ಸ್ಥಿತಿಸ್ಥಾಪಕತ್ವ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ರಾಷ್ಟ್ರೀಯ ಆರ್ಥಿಕ ಭದ್ರತೆಗೆ ಕೇಂದ್ರವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಆತ್ಮನಿರ್ಭರ ಭಾರತದ ದೃಷ್ಟಕೋನದ ಮೂಲಕ ಭಾರತವು ಜಾಗತಿಕ ಬದಲಾವಣೆಗಳಿಗೆ ಸ್ಪಂದಿಸುತ್ತಿದ್ದು, ಭಾರತವು ಜಾಗತಿಕ ಇಂಧನ ಪರಿವರ್ತನೆಗೆ ಚಾಲನೆ ನೀಡುವ ಉಪಕರಣಗಳು, ಮತ್ತು ತಂತ್ರಜ್ಞಾನಗಳ ಪ್ರಮುಖ ಉತ್ಪಾದಕ ದೇಶಗಳಲ್ಲಿ ಒಂದಾಗಿ ಭಾರತ ಹೊರಹೊಮಬೇಕು ಎಂದು ಹೇಳಿದರು.
ಉಕ್ಕು, ಭಾರೀ ಎಂಜಿನಿಯರಿಂಗ್, ಬ್ಯಾಟರಿಗಳು, ಟ್ರಾನ್‌್ಸಫಾರ್ಮ್‌ಗಳು, ವಿದ್ಯುತ್ ಉಪಕರಣಗಳು, ಎಲೆಕ್ಟ್ರಿಕ್ ಮೊಬಿಲಿಟಿ ಮೊದಲಾದ ಸುಧಾರಿತ ಕೈಗಾರಿಕಾ ತಂತ್ರಜ್ಞಾನಗಳನ್ನು ಒಳಗೊಂಡ ಬಲವಾದ ಉತ್ಪಾದನಾ ಪರಿಸರ ವ್ಯವಸ್ಥೆಯ ಮೂಲಕವೇ ದೇಶದ ಇಂಧನ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಾಧ್ಯ ಎಂದರು.
ಸ್ವಚ್ಛ ಇಂಧನ ಪರಿವರ್ತನೆಯಲ್ಲಿ ಉಕ್ಕು ಬೆನ್ನೆಲುಬಿನಂತಿದೆ. ವಿಶ್ವದ ಎರಡನೇ ಅತೀ ದೊಡ್ಡ ಉಕ್ಕು ಉತ್ಪಾದಕ ದೇಶವಾಗಿರುವ ಭಾರತವು ಉಕ್ಕಿಗಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪೂರೈಸಲು ಉತ್ತಮ ಸ್ಥಾನದಲ್ಲಿದೆ ಎಂದು ಪ್ರತಿಪಾದಿಸಿದ ಅವರು, 2030ರ ವೇಳೆಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ತಲುಪುವ ಗುರಿ ಇದೆ. ಕಡಿಮೆ ಇಂಧನದ ಹೊರಸೂಸುವಿಕೆಯ ಉಕ್ಕು ಉತ್ಪಾದನೆಗೆ ಪರಿವರ್ತನೆಯಾಗುವುದು ಪರಿಸರದ ಅಗತ್ಯ ಹಾಗೂ ಆರ್ಥಿಕ ಅನಿವಾರ್ಯತೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್, ಭೂತಾನ್‌ನ ಇಂಧನ ಮತ್ತು ನೈಸರ್ಗಿಕ ಸಂಪನೂಲಗಳ ಸಚಿವ ಲಿಯೋನ್ಪೋ ಗೆಮ್ ತ್ಸೆರಿಂಗ್, ಶ್ರೀಲಂಕಾದ ಇಂಧನ ಸಚಿವ ಅನುರ ಕರುಣಾತಿಲಕೆ ಮತ್ತಿತರರು ಉಪಸ್ಥಿತರಿದ್ದರು.
