ಬೆಂಗಳೂರು,ಆ.8- ಭಾರತದ ಮಣ್ಣಿನ ಬಗ್ಗೆ ಕೃತಜ್ಞತೆ, ಗೌರವಿಸುವವರ ಬಳಿ ಮಾತ್ರ ಹಿಂದೂಗಳು ವ್ಯಾಪಾರ ಮಾಡಬೇಕು ಪಾಶ್ಚಿಮಾತ್ಯ ಸಂಸ್ಕೃತಿಯ ಗುಲಾಮಗಿರಿಯಿಂದ ನಮ ಮಕ್ಕಳನ್ನು ಹೊರತರುವ ಪ್ರಯತ್ನ ಮನೆಯಿಂದಲೇ ಆರಂಭವಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರೆ ಭವ್ಯ ಮೋಹನ್ ಗೌಡ ತಿಳಿಸಿದ್ದಾರೆ. ಪತಂಜಲಿ ಯೋಗ ಶಿಕ್ಷಣ ಸಮಿತಿ ಆಯೋಜಿಸಿದ್ದ, ಪ್ರಾಂತ ಪ್ರಶಿಕ್ಷಣ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತೋ ಅಲ್ಲಿ ಖರೀದಿ ಮಾಡುವುದನ್ನು ಬಿಟ್ಟು, ವ್ಯಾಪಾರಿಯು ಭಾರತ್ ಮಾತಾ ಕಿ ಜೈ ಹೇಳ್ತಾರಾ? ಆ ವ್ಯಕ್ತಿ ಈ ಭಾರತದ ನೆಲವನ್ನು ಗೌರವಿಸ್ತಾರಾ? ಆತನಿಗೆ ಭಾರತದ ಮಣ್ಣಿನ ಬಗ್ಗೆ ಕೃತಜ್ಞತೆ ಇದೆಯಾ ಎಂಬುದನ್ನು ವಿಚಾರ ಮಾಡಿ ವ್ಯಾಪಾರ ಮಾಡಬೇಕಾಗಿದೆ ಎಂದು ಹೇಳಿದರು.
ಭಾರತದಲ್ಲಿ ಹುಟ್ಟೋದೇ ಎಷ್ಟೋ ಜನದ ಪುಣ್ಯದ ಫಲ. ನಾವು ಗಿಡ, ಮರ, ಪ್ರಕೃತಿ… ಪ್ರತಿಯೊಂದರಲ್ಲೂ ದೇವರನ್ನು ನೋಡುತ್ತೇವೆ. ಅಂಥ ದೇಶದಲ್ಲಿ ಹುಟ್ಟಿದ ನಾವು ಇಂದು ಪಾಶ್ಚಿಮಾತ್ಯರನ್ನು ಅನುಸರಿಸಿ ನಮ ಸಂಸ್ಕಾರ, ಸಂಸ್ಕೃತಿಯನ್ನು ಮರೆತಿದ್ದೇವೆ ಇದನ್ನು ಸರಿ ಮಾಡುವುದು ನಮೆಲ್ಲರ ಕರ್ತವ್ಯ. ನಮಲ್ಲಿ ಆ ಕ್ಷಾತ್ರ ತೇಜಸ್ಸು ವೃದ್ಧಿಯಾಗಬೇಕು.
ನಮ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಗುಲಾಮಗಿರಿಯತ್ತ ಆಕರ್ಷಣೆ ಆಗುತ್ತಿದ್ದರೆ, ಅವರಿಗೆ ಸನಾತ ಹಿಂದೂ ಸಂಸ್ಕೃತಿಯಬಗ್ಗೆ ಅರಿವು ಮೂಡಿಸಬೇಕು. ಮನೆಯಿಂದಲೇ ಆರಂಭವಾಗಬೇಕು ಅದಕ್ಕೆ ಅವರ ಹುಟ್ಟುಹಬ್ಬದಂದು ಅವರ ಬಳಿ ಕೇಕ್ ಕತ್ತರಿಸುವ ಬದಲು, ಮನೆಯಲ್ಲೇ ದೀಪ ಬೆಳಗಿಸಿ ಮನೆಯ ಹಿರಿಯರ ಆಶೀರ್ವಾದ ಪಡೆದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಪದ್ಧತಿ ಪ್ರಕಾರನೇ ಆಚರಣೆ ಮಾಡುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿಯ ಗುಲಾಮಗಿರಿಯಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು.
ದೀಪ ಅರಿದರೆ, ಫೋಟೋ ಕೆಳಗೆ ಬಿದ್ರೆ ಅಶುಭ, ಆದ್ರೆ ಇಂದು ಮಗು ಎಷ್ಟು ಕೆಜಿ ಇದೆಯೋ ಅಷ್ಟು ಕೆಜಿಯ ಕೇಕ್ ಮೇಲೆ ಆ ಮಗುವಿನ ಫುಲ್ ಫೋಟೋ ಹಾಕಿ ಕ್ಯಾಂಡಲ್ ಇಟ್ಟು, ಮಗುವಿನ ಕೈಯಲ್ಲಿ ಚಾಕುವಿನಿಂದ ಕಾಲಿನಿಂದ ಕುತ್ತಿಗೆ ತನಕ ಕತ್ತರಿ ಊರವರನ್ನೆಲ್ಲಾ ಕರೆದು ಮೋಜು-ಮಸ್ತಿ ಮಾಡುತ್ತಾರೆ. ಇದು ನಮ ಸಂಸ್ಕೃತಿಯ ವಿರುದ್ದ ಆಚರಣೆಗಳು. ನಮ ಧರ್ಮ ತ್ಯಾಗವನ್ನು ಕಲಿಸಿಕೊಟ್ಟಿದೆ. ಹಿಂದೆ ಪೂರ್ವಜರು ಜನದಿನ ಅಥವಾ ಹಬ್ಬದಂತಹ ವಿಶೇಷ ದಿನಗಳಲ್ಲಿ ತ್ಯಾಗ-ದಾನ ಮಾಡುವುದನ್ನು ಕಲಿಸುತ್ತಿದ್ದರು. ಆದರೆ ಈಗ ಮಕ್ಕಳಿಗೆ ತಮ ಜನದಿನದ ಬಗ್ಗೆ ಗೊತ್ತೇ ಇರುವುದಿಲ್ಲ.
ಅಂದರೆ ಪಾಶ್ಚಿಮಾತ್ಯದ ಈ ಗುಲಾಮಗಿರಿ ಯನ್ನು ಕಲಿಸಿದವರು ನಾವೇ. ಅದಕ್ಕೋಸ್ಕರ ಇದರ ಬಗ್ಗೆ ನಾವು ನಮ ಊರುಗಳಲ್ಲಿ ಜಾಗೃತಿ ಮೂಡಿಸೋಣ, ಇದೇ ರಾಷ್ಟ್ರ ಜಾಗೃತಿ. ರಾಷ್ಟ್ರ ರಕ್ಷಣೆಗೆ ನಾವೆಲ್ಲರೂ ಸಜ್ಜಾಗಬೇಕಾಗಿದೆ ಎಂದರು. ಅಡುಗೆ ಕೋಣೆಯಲ್ಲಿ ಅನ್ನಪೂರ್ಣೇಶ್ವರಿ, ಮಕ್ಕಳಿಗೆ ಓದಿಸುವಾಗ ಸರಸ್ವತಿ, ಹಣದ ವಿಚಾರದಲ್ಲಿ ಲಕ್ಷಿ ಅಂತ ಮಹಿಳೆಯನ್ನು ಗೌರವಿಸುತ್ತೇವೆ. ಈಗ ಒಂದು ಹೆಜ್ಜೆ ನಾವು ಹೊರಗೆ ಹೋದಾಗ ಎಲ್ಲಾದರೂ ಅನ್ಯಾಯ ಆಗ್ತಾ ಇದೆ, ನಮನ್ನು ಯಾರಾದರೂ ವಕ್ರ ದೃಷ್ಟಿಯಲ್ಲಿ ನೋಡ್ತಾ ಇದ್ದಾರೆ ಅಂದ್ರೆ ನಾವು ಅಲ್ಲಿ ದುರ್ಗೆಯಾಗಬೇಕಾಗಿದೆ! ಇನ್ನು ಅಂತ ಹೆಚ್ಚು ಅಂದ್ರೆ ಚಂಡಿ-ಚಾಮುಂಡಿ ಆಗೋದು ಅವಶ್ಯವಾಗಿದೆ ಎಂದು ಹೇಳಿದರು.
