Homeರಾಜ್ಯಬಿಜೆಪಿ ಪಾದಯಾತ್ರೆಗೆ ಪ್ರತ್ಯುತ್ತರ: ಸಿಎಂ ಡಿಕೆಶಿ ಗುಡುಗು..

ಬಿಜೆಪಿ ಪಾದಯಾತ್ರೆಗೆ ಪ್ರತ್ಯುತ್ತರ: ಸಿಎಂ ಡಿಕೆಶಿ ಗುಡುಗು..

ಬೆಂಗಳೂರು, ಸೆ.1- ಬಿಜೆಪಿಯವರು ಪಾದಯಾತ್ರೆ ನಡೆಸುವುದರಿಂದ ಹೆಚ್ಚಿನ ಅನುಕೂಲಗಳಾಗುತ್ತವೆ. ತಕ್ಕ ಉತ್ತರ ನೀಡಲು ನಾವು ಎಲ್ಲಾ ಸಿದ್ಧತೆ ಮಾಡಿ ಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಪಾದಯಾತ್ರೆ ಮಾಡುವುದು ಬಹಳ ಒಳ್ಳೆಯದು. ಪಾದಯಾತ್ರೆಗೆ ತಕ್ಕ ಉತ್ತರ ನೀಡಲು ನಾವು ಪ್ರತಿತಂತ್ರ ಮಾಡಿಕೊಂಡು ಸಿದ್ಧರಿದ್ದೇವೆ. ಕಾಂಗ್ರೆಸ್‌‍ಗೆ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಇತಿಹಾಸವಿದೆ. ಆ ಹೋರಾಟಲ್ಲಿ ಬಿಜೆಪಿಯ ಯಾರೂ ಭಾಗವಹಿಸಿರಲಿಲ್ಲ ಎಂದು ಲೇವಡಿ ಮಾಡಿದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಗರಿಕ ನಿವೇಶನ ಮತ್ತು ಪಾರ್ಕ್‌ ಜಾಗಗಳನ್ನು ಆರ್‌ಎಸ್‌‍ಎಸ್‌‍ ಸಂಸ್ಥೆಗೆ ಬರೆದುಕೊಟ್ಟಿರುವ ಬಹಳಷ್ಟು ಉದಾಹರಣೆಗಳು ತಮ ಮುಂದಿವೆ. ಲಾಲ್‌ಬಾಗ್‌ ಪ್ರತಿಭಟನಾಕಾರರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಪಾರ್ಕ್‌ಗಳ ಜಾಗದ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ನೆಲ ಮತ್ತು ಪಾರ್ಕ್‌ ಜಾಗಗಳನ್ನು ಹೇಗೆ ರಕ್ಷಣೆ ಮಾಡಬೇಕೆಂದು ತಮಗೆ ಗೊತ್ತಿದೆ ಎಂದು ಹೇಳಿದರು.
ಈ ಹಿಂದೆ ಬಿಜೆಪಿಯವರ ಆಡಳಿತದಲ್ಲಿ ಪಾರ್ಕ್‌ ಹಾಗೂ ನಾಗರಿಕರ ನಿವೇಶನಗಳನ್ನು ಆರ್‌ಎಸ್‌‍ಎಸ್‌‍ನವರಿಗೆ ಬರೆದುಕೊಟ್ಟಿದ್ದಾರೆ. ಸದಾಶಿವನಗರದಲ್ಲಿ ಪಾರ್ಕಿನ ಜಾಗವನ್ನು ಆರ್‌ಎಸ್‌‍ಎಸ್‌‍ಗೆ ನೀಡಲಾಗಿದೆ. ಈ ಬಗ್ಗೆ ತಮ ಬಳಿ ದಾಖಲೆಗಳಿವೆ. ಸಂದರ್ಭ ಬಂದಾಗ ಯಾರು ಯಾವ ಜಾಗವನ್ನು ಯಾವ ಕಾಲದಲ್ಲಿ ಯಾರಿಗೆ ಬರೆದುಕೊಟ್ಟಿದ್ದರು ಎಂಬ ಎಲ್ಲಾ ವಿಚಾರಗಳನ್ನು ತಾವು ಬಹಿರಂಗ ಪಡಿಸುವುದಾಗಿ ಹೇಳಿದರು.

ವಿಧೇಯಕ ವಾಪಸ್‌‍:
ಪಾರ್ಕ್‌ಗಳ ಜಾಗದಲ್ಲಿ ಶೇ.5ರಷ್ಟನ್ನು ಬಳಕೆ ಮಾಡಿಕೊಳ್ಳುವ ಕುರಿತಂತೆ ರೂಪಿಸಲಾಗಿದ್ದ ಮಸೂದೆಯ ಬಗ್ಗೆ ಬಿಜೆಪಿಯವರು, ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಧರಣಿ ನಡೆಸಿ ಕಾಲಹರಣ ಮಾಡಿದ್ದಾರೆ. ಆದರೂ ತಾವು ವಿಧೇಯಕದ ಕುರಿತು ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆದು ನಂತರ ನಿರ್ಧಾರ ಕೈಗೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಈಗಾಗಲೇ ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿರುವ ವಿಧೇಯಕವನ್ನು ಹಿಂಪಡೆದು ಮತ್ತೆ ಶಾಸನ ಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು.

ಬೆಂಗಳೂರಿನಲ್ಲಿ ಇನ್ನೂ ನಾಲ್ಕೈದು ಲಾಲ್‌ಬಾಗ್‌ಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದು ಪಾರ್ಕ್‌ ಕೂಡ ನಿರ್ಮಾಣ ಮಾಡಿಲ್ಲ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 102 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ ಹಲವು ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಪ್ರತಿ 15 ದಿನಗಳಿಗೊಮೆ ವರದಿ ಪಡೆದು ಅದರ ಆಧಾರದ ಮೇಲೆ ಹೊಸದಾಗಿ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು. ಆವರೆಗೂ ಶಾಸಕರು ತಾಳೆಯಿಂದಿರಬೇಕು ಎಂದು ಹೇಳಿದರು.

ಬರ ಘೋಷಣೆಗೆ ಕೇಂದ್ರ ಸರ್ಕಾರದ ನಿಯಮಗಳಿವೆ. ಅದರಂತೆ ತಾಂತ್ರಿಕ ಮಾನದಂಡಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಈ ವಿಚಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಮಾಹಿತಿ ಕೊರತೆ ಇರುವ ಹಿನ್ನೆಲೆಯಲ್ಲಿ ತಾವೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಬಾಗಲಕೋಟೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಈಗಿನ ಪಟ್ಟಿಯಲ್ಲಿ ನನ್ನ ಕನಕಪುರವೂ ಬಂದಿಲ್ಲ. ಅದಕ್ಕಾಗಿ ತಲೆ ಕೆಡಿಸಿಕೊಳ್ಳಲು ಆಗುತ್ತಾ? ಬರ ಘೋಷಣೆಗೆ ಒಂದು ನಿಯಮವಿದೆ. ಕೇಂದ್ರದ ತಂಡ ಬಂದಾಗ ಆಕ್ಷೇಪಣೆಗಳು ವ್ಯಕ್ತವಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದರು. ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ದಾಖಲಿಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ರಾಹುಲ್‌ಗಾಂಧಿಯವರು ಮಾಡಬಾರದಂತಹ ಯಾವ ಕೆಲಸವನ್ನೂ ಮಾಡಿಲ್ಲ ಎಂದು ತಿರುಗೇಟು ನೀಡಿದರು. ತಾವು ದೆಹಲಿಗೆ ಭೇಟಿ ನೀಡುತ್ತಿಲ್ಲ. ಮೊನ್ನೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಎರಡು ಗಂಟೆ ಇದ್ದು, ವಾಪಸ್‌‍ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

RELATED ARTICLES
spot_img

Latest News