Homeರಾಷ್ಟ್ರೀಯಚಿನ್ನ-ಬೆಳ್ಳಿ ದರಗಳಲ್ಲಿ ಹೆಚ್ಚಳ

ಚಿನ್ನ-ಬೆಳ್ಳಿ ದರಗಳಲ್ಲಿ ಹೆಚ್ಚಳ

ಬೆಂಗಳೂರು, ಸೆ.3-ನಿರಂತರ ಕುಸಿತದಿಂದ ಇಳಿಮುಖದ ಹಾದಿಯಲ್ಲಿ ಸಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಂದು ದಿಢೀರ್‌ ಏರಿಕೆಯಾಗಿದೆ. ಬೆಳ್ಳಿ ಒಂದು ಕೆ.ಜಿ.ಗೆ ಐದು ಸಾವಿರ ರೂ.ಹೆಚ್ಚಳವಾಗಿದ್ದರೆ, ಚಿನ್ನದ ದರದಲ್ಲಿ 333 ರೂ. ಏರಿಕೆಯಾಗಿದೆ. ಆಗಸ್ಟ್‌ ಕೊನೆಯ ವಾರದಿಂದ ಸತತ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಚೇತರಿಕೆ ಕಂಡಿವೆ. ಪದೇ ಪದೇ ಏರಿಳಿತಕ್ಕೆ ಒಳಗಾಗುತ್ತಿದ್ದ ಚಿನ್ನ ಕಳೆದ ಐದು ದಿನಗಳಿಂದ ನಿರಂತರ ಕುಸಿತವಾಗಿತ್ತು. ಸ್ಥಿರವಾಗಿದ್ದ ಬೆಳ್ಳಿಯೂ ಎರಡು ದಿನಗಳಿಂದ ಇಳಿಮುಖವಾಗಿತ್ತು. ಆದರೆ, ಇಂದು ಬೆಳಿಗ್ಗೆ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಹೆಚ್ಚಳ ಕಂಡುಬಂದಿದೆ.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ 24 ಕ್ಯಾರೆಟ್‌ ಚಿನ್ನವು ಒಂದು ಗ್ರಾಂಗೆ 333 ರೂ. ಹೆಚ್ಚಳವಾಗಿ 15,535ರೂ. ನಷ್ಟಿದೆ. 22 ಕ್ಯಾರೆಟ್‌ನ ಚಿನ್ನವು 305 ರೂ. ಏರಿಕೆಯಾಗಿ 14,240 ರೂ.ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 249 ರೂ. ಹೆಚ್ಚಳವಾಗಿದ್ದು, 11,651 ರೂ.ನಷ್ಟಿದೆ. ಚಿನ್ನದಂತೆ ಪ್ಲಾಟಿನಮ್‌ ಆಭರಣಗಳ ಬೆಲೆಯೂ ಏರಿಕೆಯಾಗಿದೆ. 10 ಗ್ರಾಂಗೆ 1260 ರೂ. ಹೆಚ್ಚಾಗಿದ್ದು, 53,790 ರೂ. ನಷ್ಟಿದೆ.

ಕಳೆದ ಎರಡು ದಿನಗಳಿಂದ ನಿರಂತರ ಇಳಿಕೆಯಾಗಿದ್ದ ಬೆಳ್ಳಿ ಇಂದು ಒಂದು ಕೆ.ಜೆ.ಗೆ ಐದು ಸಾವಿರ ರೂ. ಹೆಚ್ಚಾಗಿದ್ದು, 2.50 ಲಕ್ಷ ರೂ.ಗೆ ತಲುಪಿದೆ. ಇಳಿಮುಖವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ದಿಢೀರ್‌ ಏರಿಕೆಯಾಗಿರುವುದು ಆಭರಣಪ್ರಿಯರ ಆತಂಕಕ್ಕೆ ಕಾರಣವಾಗಿದೆ.

RELATED ARTICLES
spot_img

Latest News