Homeರಾಷ್ಟ್ರೀಯಅಕ್ರಮ ಬಾಂಗ್ಲಾ ನಿವಾಸಿಗಳ ಸ್ವರ್ಗವಾಗುತ್ತಿದೆಯೇ ಕರ್ನಾಟಕ..?

ಅಕ್ರಮ ಬಾಂಗ್ಲಾ ನಿವಾಸಿಗಳ ಸ್ವರ್ಗವಾಗುತ್ತಿದೆಯೇ ಕರ್ನಾಟಕ..?

ಬೆಂಗಳೂರು, ಮೇ 23- ಶಾಂತಿಯ ತೋಟವಾಗಿರುವ ಕರ್ನಾಟಕ ಇತ್ತೀಚೆಗೆ ಅಕ್ರಮ ಬಾಂಗ್ಲಾ ನಿವಾಸಿಗಳ ಸ್ವರ್ಗವಾಗಿ ಪರಿಣಮಿಸತೊಡಗಿದೆ ಎಂಬ ಗುಮಾನಿ ಕಾಡುತ್ತಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಫಡ್ನವಿಸ್‌‍ ನೇತೃತ್ವದ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯಾದ ನಂತರ ಅಲ್ಲಿನ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಗಡೀಪಾರು ಮಾಡಲಾಗುತ್ತಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಅಲ್ಲಿ ನೆಲೆಸಿದ್ದ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳಿಗೆ ಉಳಿಗಾಲವಿಲ್ಲದಂತಾಗಿದೆ.

ಹೀಗಾಗಿ ಮಹಾರಾಷ್ಟ್ರ ಮತ್ತು ಬಂಗಾಳದ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳು ದೇಶದ ಇತರ ನಗರಗಳಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅದರಲ್ಲೂ ಕಾಂಗ್ರೆಸ್‌‍ ಆಡಳಿತವಿರುವ ರಾಜ್ಯಗಳಲ್ಲಿ ನಾವು ನೆಲೆ ಕಂಡುಕೊಂಡರೆ ನಮ್ಮ ತಂಟೆಗೆ ಯಾರು ಬರುವುದಿಲ್ಲ ಎಂಬ ನಂಬಿಕೆಯೊಂದಿಗೆ ಹೊರ ರಾಜ್ಯಗಳಿಂದ ಹೊರದಬ್ಬಲ್ಪಟ್ಟ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳು ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ ಆಶ್ರಯ ಕಂಡು ಕೊಳ್ಳುತ್ತಿದ್ದಾರೆ ಎನ್ನುವುದು ಪೊಲೀಸ್‌‍ ಇಲಾಖೆಗೆ ರಹಸ್ಯ ಮಾಹಿತಿ ರವಾನೆಯಾಗಿದೆ.

ಈ ಮಾಹಿತಿಯನ್ನಾಧರಿಸಿ ರಾಜ್ಯದಲ್ಲಿರುವ ಹಲವಾರು ಮಹಾನಗರಗಳಲ್ಲಿ ಪೊಲೀಸರು ಅಕ್ರಮ ಬಾಂಗ್ಲಾ ನಿವಾಸಿಗಳ ಬೆನ್ನು ಬಿದ್ದಿದ್ದಾರೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತೆ ಇರುವ ಹುಬ್ಬಳಿಗೆ ಆಗಾಧ ಪ್ರಮಾಣದ ಅಕ್ರಮ ಬಾಂಗ್ಲಾ ನಿವಾಸಿಗಳು ನುಸುಳಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸರು ಈಗಾಗಲೇ ಕಾರ್ಯಚರಣೆಗೆ ಇಳಿದಿರುವುದು ಹಲವಾರು ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದೆ.

ಅಕ್ರಮ ಬಾಂಗ್ಲಾ ನಿವಾಸಿಗಳ ಪತ್ತೆಗಾಗಿ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಹುಬ್ಬಳಿ-ಧಾರವಾಡ ಪೊಲೀಸ್‌‍ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ರೈಲು, ಬಸ್‌‍ಗಳಲ್ಲಿ ಬರುತ್ತಿರುವ ಕಾರ್ಮಿಕರನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ ಹಾಗೂ ಬಂಗಾಳದಿಂದ ಬರುವ ಶಾಲಿಮಾರ್‌ ಅಮರಾವತಿ ಎಕ್‌್ಸಪ್ರೆಸ್‌‍ ರೈಲು ಮತ್ತು ಬಸ್‌‍ಗಳ ಮೂಲಕ ವಾಣಿಜ್ಯ ರಾಜಧಾನಿಗೆ ಬರುತ್ತಿರುವ ಸಾವಿರಾರು ಕಾರ್ಮಿಕರ ಜನ ಜಾಲಾಡಲಾಗುತ್ತಿದೆ.ಆಧಾರ್‌ ಕಾರ್ಡ್‌ ಮತ್ತಿತರ ಅಗತ್ಯ ದಾಖಲೆ ಹೊಂದಿಲ್ಲದವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ದಾಖಲೆ ಇಲ್ಲದವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಇದು ಕೇವಲ ಹುಬ್ಬಳಿಗೆ ಮಾತ್ರ ಸೀಮಿತವಾಗಿಲ್ಲ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಅಕ್ರಮ ಬಾಂಗ್ಲಾ ನಿವಾಸಿಗಳ ಮೇಲೆ ಪೊಲೀಸರು ಹಾಗೂ ಜಿಲ್ಲಾಡಳಿತ ಹದ್ದಿನಕಣ್ಣಿಟ್ಟಿದೆ ಎಂದು ಮೂಲಗಳು ಈ ಸಂಜೆಗೆ ದೃಢಪಡಿಸಿವೆ.

RELATED ARTICLES
spot_img

Latest News