Tuesday, April 14, 2026
Homeಬೆಂಗಳೂರುಆನ್‌ಲೈನ್‌ನಲ್ಲೇ ಲಭ್ಯವಿವೆ ಐಪಿಎಲ್‌ ಟಿಕೆಟ್‌, ಕ್ರೀಡಾಂಗಣ ಸುತ್ತ ಅಲೆಯಬೇಡಿ

ಆನ್‌ಲೈನ್‌ನಲ್ಲೇ ಲಭ್ಯವಿವೆ ಐಪಿಎಲ್‌ ಟಿಕೆಟ್‌, ಕ್ರೀಡಾಂಗಣ ಸುತ್ತ ಅಲೆಯಬೇಡಿ

IPL tickets available online

ಬೆಂಗಳೂರು, ಮಾ.24- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28ರಂದು ಆರ್‌ಸಿಬಿ-ಸನ್‌ರೈಸರ್ಸ್ ಸ ನಡುವೆ ನಡೆಯಲಿರುವ ಐಪಿಎಲ್‌ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕವೇ ಖರೀದಿಸಬೇಕೆಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ಸಿಂಗ್‌ ಸೂಚಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪಂದ್ಯ ವೀಕ್ಷಿಸಲು ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆದವರು ಪಂದ್ಯ ಪ್ರಾರಂಭವಾಗುವ ಮುನ್ನ 4 ಗಂಟೆ ಮುಂಚಿತವಾಗಿ ಕ್ರೀಡಾಂಗಣಕ್ಕೆ ಬರಬೇಕು. ಟಿಕೆಟ್‌ ಪಡೆದವರಿಗೆ ಮೆಟ್ರೊ ಪ್ರಯಾಣ ಉಚಿತವಾಗಿರುತ್ತದೆ ಎಂದು ಹೇಳಿದರು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುವವರಿಗೆ ಕಬ್ಬನ್‌ಪಾರ್ಕ್‌ ಹಾಗೂ ಎಂಜಿ ರಸ್ತೆ ಮೆಟ್ರೊ ನಿಲ್ದಾಣಗಳು ಸಮೀಪವಾಗಿರುತ್ತವೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಟಿಕೆಟ್‌ನಲ್ಲೇ ಪಾರ್ಕಿಂಗ್‌ ವ್ಯವಸ್ಥೆಯ ಜಾಗವನ್ನು ಸಹ ಸೂಚಿಸಲಾಗಿದ್ದು, ಸಂಸ್ಥೆ ಸೂಚಿಸಿರುವ ನಿಗದಿತ ಜಾಗದಲ್ಲೇ ವಾಹನ ನಿಲುಗಡೆ ಮಾಡಬೇಕು ಹಾಗೂ ನಿಗದಿತ ಗೇಟ್‌ ಮೂಲಕವೇ ಕ್ರೀಡಾಂಗಣದೊಳಗೆ ಪ್ರೇಕ್ಷಕರು ಪ್ರವೇಶಿಸಬೇಕೆಂದು ಅವರು ಹೇಳಿದರು.

ಕ್ರೀಡಾಂಗಣದ ಬಳಿ ಟಿಕೆಟ್‌ ಮಾರಾಟ ಮಾಡುವುದಿಲ್ಲ. ವಿನಾಃಕಾರಣ ಕ್ರೀಡಾಂಗಣದ ಬಳಿ ಬಂದು ಅಲೆದಾಡಬೇಡಿ ಎಂದು ಸಾರ್ವಜನಿಕರಲ್ಲಿ ಆಯುಕ್ತರು ಮನವಿ ಮಾಡಿದ್ದಾರೆ.
ನಮ್ಮ ಪೊಲೀಸರು ಕ್ರೀಡಾಂಗಣದ ಬಳಿ ಬಂದೋಬಸ್‌್ತನಲ್ಲಿರುತ್ತಾರೆ.

ಟಿಕೆಟ್‌ ಇಲ್ಲದಿದ್ದರು ಕ್ರೀಡಾಂಗಣದ ಸುತ್ತ ಸುತ್ತಾಡುವುದು ಕಂಡು ಬಂದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದ್ದಾರೆ. ಕ್ರಿಕೆಟ್‌ ವೀಕ್ಷಣೆಗೆ ಬರುವವರು ತಮ್ಮ ವಾಹನವನ್ನು ಬಳಸದೇ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಇದೇ ವೇಳೆ ಅವರು ಮನವಿ ಮಾಡಿದ್ದಾರೆ.

ಕ್ರೀಡಾಂಗಣದ ಸುತ್ತ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕೆಎಸ್‌ಸಿಎ ಸೂಚಿರುವ ಅಂಶಗಳನ್ವಯ ನಾವು ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದು ಆಯುಕ್ತರು ವಿವರಿಸಿದರು.

ಆರ್‌ಸಿಬಿಯಿಂದ ದಯಾಳ್‌ ಔಟ್‌ :
ಬೆಂಗಳೂರು, ಮಾ.24- ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಆರ್‌ಸಿಬಿ ವೇಗಿ ಯಶ್‌ ದಯಾಳ್‌ ಅವರು 19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂದು ತಂಡದ ನಿರ್ದೇಶಕ ಮೊ ಬೊಬಾಟ್‌ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

RELATED ARTICLES

Latest News