ಸಿಯೋಲ್, ಮಾ.11-ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಮಗಳ ಜೊತೆ ಯುದ್ಧನೌಕೆಯಿಂದ ಹಾರಿಸಲಾದ ಕ್ಷಿಪಣಿಗಳ ಪರೀಕ್ಷೆಗಳನ್ನು ವೀಕ್ಷಿಸಿದ್ದಾರೆ.
ಯುಎಸ್-ದಕ್ಷಿಣ ಕೊರಿಯಾದ ಮಿಲಿಟರಿ ಕವಾಯತುಗಳಿಗೆ ಪ್ರತ್ಯುತ್ತರ ಎಂಬಂತೆ ಉತ್ತರ ಕೊರಿಯಾ ಈ ಪರೀಕ್ಷೆ ನಡೆಸಿದೆ ಎನ್ನಲಾಗಿದೆ. ಕಾನ್ಫರೆನ್ಸ್ ಕೊಠಡಿಯಲ್ಲಿ ಇಬ್ಬರೂ ಈ ಕ್ಷಣವನ್ನು ನೋಡುತ್ತಿರುವುದನ್ನು ಮಾಧ್ಯಮ ತೋರಿಸಿದೆ.
ಕಿಮ್ ಜಾಂಗ್ ಉನ್ ವೀಡಿಯೊ ಮೂಲಕ ಕ್ಷಿಪಣಿಗಳ ಉಡಾವಣೆಗಳನ್ನು ವೀಕ್ಷಿಸಿದರು ಮತ್ತು ಶಕ್ತಿಯುತ ಮತ್ತು ವಿಶ್ವಾಸಾರ್ಹ ಪರಮಾಣು ಯುದ್ಧ ನಿರೋಧಕ ವನ್ನು ನಿರ್ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು, ಎಂದು ಕೆಸಿಎನ್‌ಎ ತನ್ನ ಮಗಳನ್ನು ಉಲ್ಲೇಖಿ ಹೇಳಿದ್ದಾರೆ.
ಕಿಮ್ ಜು ಏ ಇನ್ನು 13 ವರ್ಷದ ಬಾಲಕಿ ಕಳೆದ 3 ಷರ್ಷದಿಂದ ಮಿಲಿಟರಿ ಕಾವಾಯತು ಮತ್ತು ಶಸ್ತ್ರಾಸ್ತ್ರ ಉಡಾವಣೆಗಳು ಸೇರಿದಂತೆ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ತನ್ನ ತಂದೆಯೊಂದಿಗೆ ಬಾಗಿಯಾಗಿದ್ದು ವಿಶೇಷವಾಗಿದೆ.
ದಕ್ಷಿಣ ಕೊರಿಯಾದ ಬೇಹುಗಾರಿಕೆ ಸಂಸ್ಥೆ ಕಳೆದ ತಿಂಗಳು ಕಿಮ್ ಜಾಂಗ್ ಉನ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವ ಹಂತದಲ್ಲಿದ್ದರು ಎಂದು ಹೇಳಿತ್ತು. ನೌಕಾಪಡೆಯ ಕಾರ್ಯತಂತ್ರದ ಆಕ್ರಮಣಕಾರಿ ನಿಲುವನ್ನು ಪ್ರದರ್ಶಿಸಲು ಮತ್ತು ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯೊಂದಿಗೆ ಸೈನಿಕರಿಗೆ ಪರಿಚಿತರಾಗಲು ಈ ಉಡಾವಣೆಗಳನ್ನು ಉದ್ದೇಶಿಸಲಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಕಿಮ್ ಜಾಂಗ್ ಉನ್ ಅವರ ಸಹೋದರಿ ಮತ್ತು ಹಿರಿಯ ಅಧಿಕಾರಿ ಕಿಮ್ ಯೋ ಜಾಂಗ್ ಅವರು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸಮರಾಭ್ಯಾಸವನ್ನು ಟೀಕಿಸಿ ಎಚ್ಚರಿಕೆ ನೀಡಿದ್ದರು.
