Homeಕ್ರೀಡಾ ಸುದ್ದಿಅರ್ಜೆಂಟೀನಾ ತಾರೆ ಲಿಯೋನೆಲ್‌ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ

ಅರ್ಜೆಂಟೀನಾ ತಾರೆ ಲಿಯೋನೆಲ್‌ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ

ಬ್ಯುನಸ್‌‍ ಐರಿಸ್‌‍ ,ಸೆ.1- ಅರ್ಜೆಂಟೀನಾ ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದೊಂದಿಗೆ 21 ವರ್ಷಗಳ ಸುದೀರ್ಘ ಪಯಣಕ್ಕೆ ತೆರೆ ಎಳೆದಿದ್ದಾರೆ. 2022ರ ವಿಶ್ವಕಪ್‌ ಗೆಲುವಿನೊಂದಿಗೆ ತಮ ವೃತ್ತಿಜೀವನವನ್ನು ಅಲಂಕರಿಸಿದ್ದ ಮೆಸ್ಸಿ, ಫುಟ್ಬಾಲ್‌ ಇತಿಹಾಸದ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
39 ವರ್ಷದ ಮೆಸ್ಸಿ ತಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಇದು ನನಗೆ ನೋವುಂಟು ಮಾಡಿದ ಮತ್ತು ಈಗಲೂ ಆಳವಾಗಿ ನೋವುಂಟು ಮಾಡುತ್ತಿರುವ ನಿರ್ಧಾರ. ಆದರೆ ಸಮಯ ಬಂದಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆಎಂದು ಹೇಳಿದ್ದಾರೆ.
ಮೆಸ್ಸಿರಾಷ್ಟ್ರೀಯ ತಂಡದಿಂದ ನಿವೃತ್ತಿಯಾದರೂ, ಕ್ಲಬ್‌ ಫುಟ್ಬಾಲ್‌ನಲ್ಲಿ ಅಮೆರಿಕದ ಮೇಜರ್‌ ಲೀಗ್‌ ಸಾಕರ್‌ನ ಇಂಟರ್‌ ಮಿಯಾಮಿಗಾಗಿ ಆಟ ಮುಂದುವರಿಸಲಿದ್ದಾರೆ. ಅರ್ಜೆಂಟೀನಾ ಪರ ದಾಖಲೆಯ ಆರು ವಿಶ್ವಕಪ್‌ಗಳಲ್ಲಿ ಆಡಿ, 2022ರಲ್ಲಿ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. 2014ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾವನ್ನು ಫೈನಲ್‌ಗೆ ಮುನ್ನಡೆಸಿದ್ದ ಅವರು, ಈ ವರ್ಷದ ವಿಶ್ವಕಪ್‌ನಲ್ಲೂ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದಿದ್ದರು. ಆದರೆ ಪೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ ಸ್ಪೇನ್‌ ವಿರುದ್ಧ ಸೋಲು ಕಂಡಿತ್ತು.

ಅರ್ಜೆಂಟೀನಾ ಪರ ಒಟ್ಟು 207 ಪಂದ್ಯಗಳನ್ನುಆಡಿರುವ ಮೆಸ್ಸಿ,125 ಗೋಲುಗಳೊಂದಿಗೆ ದೇಶದ ಸಾರ್ವಕಾಲಿಕ ಗರಿಷ್ಠ ಗೋಲುಗಾರರಾಗಿ ವೃತ್ತಿಜೀವನ ಮುಗಿಸಿದ್ದಾರೆ. ವಿಶ್ವಕಪ್‌ ಪಂದ್ಯಗಳಲ್ಲಿ ಅವರು 21 ಗೋಲುಗಳನ್ನು ಗಳಿಸಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮೆಸ್ಸಿಗಿಂತ ಹೆಚ್ಚು ಗೋಲು ಗಳಿಸಿರುವ ಏಕೈಕ ಆಟಗಾರ ಅವರ ದೀರ್ಘಕಾಲದ ಪ್ರತಿಸ್ಪರ್ಧಿ ಕ್ರಿಸ್ಟಿಯಾನೊ ರೊನಾಲ್ಡೊ.
ರೊನಾಲ್ಡೊ 146 ಗೋಲುಗಳನ್ನು ಗಳಿಸಿದ್ದು, ಪೋರ್ಚುಗಲ್‌ ರಾಷ್ಟ್ರೀಯ ತಂಡದಿಂದ ಇನ್ನೂ ನಿವೃತ್ತಿ ಘೋಷಿಸಿಲ್ಲ.

ಮೆಸ್ಸಿಯನ್ನು ಅರ್ಜೆಂಟೀನಾದ ದಿಗ್ಗಜ ಡಿಯಾಗೋ ಮರಡೋನಾ ಹಾಗೂ ಬ್ರೆಜಿಲ್‌ನ ಫುಟ್ಬಾಲ್‌ ಐಕಾನ್‌ ಪೀಲೆಯೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ. ಅನೇಕರ ದೃಷ್ಟಿಯಲ್ಲಿ ಮೆಸ್ಸಿಯೇ ಫುಟ್ಬಾಲ್‌ ಇತಿಹಾಸದ ಅತ್ಯುತ್ತಮ ಆಟಗಾರ. ನಾನು ಯಾವಾಗಲೂ ನನ್ನ ಸಂಪೂರ್ಣ ಶಕ್ತಿಯನ್ನು ನೀಡಿದ್ದೇನೆ. ಈ ಜೆರ್ಸಿಗಾಗಿ ನಾನು ಯಾವಾಗಲೂ ಹೋರಾಡಿದ್ದೇನೆ. ಫುಟ್ಬಾಲ್‌ ಮೂಲಕ ನಿಮಗೆ ಸಂತೋಷ ನೀಡಲು ಮತ್ತು ಅರ್ಜೆಂಟೀನಾದವರಾಗಿರುವುದಕ್ಕೆ ಹೆಮೆ ಪಡುವಂತೆ ಮಾಡಲು ನನ್ನೆಲ್ಲವನ್ನೂ ಮೈದಾನದಲ್ಲಿ ಬಿಟ್ಟಿದ್ದೇನೆಎಂದು ಮೆಸ್ಸಿಭಾವನಾತಕವಾಗಿ ಹೇಳಿದ್ದಾರೆ.

RELATED ARTICLES
spot_img

Latest News