ಬೆಂಗಳೂರು- ದೇವದುರ್ಗದ ಶಾಸಕರಾದ ಕರೆಮ್ಮ ಜಿ. ನಾಯಕ ಅವರಿಗೆ ಬೆದರಿಕೆ ಹಾಕಿರುವ ಮರಳು ಮಾಫಿಯಾ ದಂಧೆಕೋರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ರಶ್ಮಿ ರಾಮೇಗೌಡ ಅವರು, ಕರೆಮ್ಮ ಅವರಿಗೆ ಸರ್ಕಾರ ಸೂಕ್ತ ರಕ್ಷಣೆ ಕೊಡಬೇಕು
ರಾಜ್ಯಸರ್ಕಾರ ಬೆದರಿಕೆ ಹಾಕಿದವರನ್ನು ಬಂಧಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಹೇಳಿದ ಅವರು, ಕರೆಮ್ಮ ಅವರ ಮನೆಗೆ ಬಂದು ಪೋಲೀಸರ ಸಮ್ಮುಖದಲ್ಲೇ ಬೆದರಿಕೆ ಹಾಕಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಎಸ್ಪಿ ಅವರಿಗೂ ಮನವಿ ಮಾಡಿದ್ದರೂ ಕೇವಲ ಎಪ್ ಐಆರ್ ಮಾತ್ರ ದಾಖಲಿಸಲಾಗಿದೆ. ಬೆದರಿಕೆ ಹಾಕಿದವರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.
ಪೊಲೀಸರ ಉಪಸ್ಥಿತಿಯಲ್ಲಿ ಶಾಸಕಿಯ ಮೇಲೆ ಬೆದರಿಕೆ ಹಾಕಲಾಗಿದೆ. ಮರಳು ದಂದೆ ನಿಲ್ಲಿಸಬೇಕು ಎಂದು ಡಿಸಿ ಅವರಿಗೆ ದೂರು ಕೊಟ್ಟಿದ್ದಾರೆ.ಶಾಸಕಿ ಕರೆಮ್ಮ ಬೆದರಿಕೆ ಹಾಕಿರುವ ವಿಡಿಯೋ ಬಿಡುಗಡೆ ಮಾಡಿದ ರಶ್ಮಿ ರಾಮೇಗೌಡ ಅವರು, ಈ ಬಗ್ಗೆ ಎಫ್ ಐ ಆರ್ ಮಾತ್ರ ಹಾಕಿದ್ದಾರೆ.ಆಮೇಲೆ ಬಿ ರಿಪೋರ್ಟ್ ಹಾಕಿಸಿಕೊಳ್ಳುತ್ತಾರೆ. ಗೃಹ ಸಚಿವರು ಎಲ್ಲದಕ್ಕೂ ನಾನೇ ಹೊಣೆನಾ ಎಂದು ಅಸಹಾಯಕರಂತೆ ಮಾತನಾಡುತ್ತಾರೆ. ಹಾಗದರೆ, ಪೋಲೀಸ್ ವ್ಯವಸ್ಥೆ ನಿದ್ದೆ ಮಾಡುತ್ತಿದಿಯೇ ಎಂದು ಪ್ರಶ್ನೆ ಮಾಡಿದರು.
ಮರಳು ದಂದೆಗೆ ಅವರೇ ಅಗ್ರಿಮೆಂಟ್ ಹಾಕಿಕೊಟ್ಟಿದ್ದಾರೆ.ಸದನದಲ್ಲಿ ಜೀವ ಬೆದರಿಕೆ ಇದೆ ಎಂದು ನೋವನ್ನ ಹೇಳಿಕೊಂಡಿದ್ದಾರೆ.ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ ಅಂದ್ರೆ ಹೋರಾಟ ಮಾಡುತ್ತೇವೆ.ಕರೆಮ್ಮ ಅವರಿಗೆ ಏನೆ ಆದರೂ ್ರ ಸರ್ಕಾರವೆ ಹೊಣೆಯಾಗುತ್ತೆದೆ.ಕೇಂದ್ರ ಮಹಿಳಾ ಆಯೋಗಕ್ಕೆ ದೂರು ಕೊಡುವ ವಿಚಾರವಾಗಿ ನಾಯಕರ ಜೊತೆ ಮಾತಾಡಿ ದೂರು ನೀಡಲಾಗುವುದು. ದೇವದುರ್ಗದಲ್ಲೆ ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಿಡ್ಲಘಟ್ಟದಲ್ಲಿ ನಗರಸಭೆ ಆಯುಕ್ತರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪ್ರಾಣ ಬೆದರಿಕೆ ಹಾಕುತ್ತಾರೆ. ಅವರನ್ನು ಈ ವರೆಗೂ ಏಕೆ ಬಂಧನ ಮಾಡಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು ಎಂಬ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ. ಮುಂದೆಯೂ ಹೀಗೆ ಮುಂದುವರಿದರೆ ರಾಜ್ಯಾದ್ಯಂತ ಮಹಿಳಾ ಘಟಕ ಗಟ್ಟಿ ಹೋರಾಟ ಮಾಡಬೇಕಾಗುತ್ತದೆ ಎಂದು ವಾಗ್ದಳಿ ನಡೆಸಿದರು.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಮೈಸೂರಿನಲ್ಲೂ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಸಲಾಗಿದೆ. ಸರ್ಕಾರದಿಂದ ಯಾವುದೇ ಕ್ರಮ ಇಲ್ಲ. ಮಹಿಳಾ ಆಯೋಗವು ನಿಷ್ಕ್ರಿಯವಾಗಿದೆ. ಕೃಷ್ಣಾ ನದಿಯಲ್ಲಿ ಮರಳು ದಂಧೆ ನಿಲ್ಲಿಸಲು ಹೇಳಿದ್ದ ನಮ್ಮ ಪಕ್ಷದ ಶಾಸಕರಾದ ಕರೆಮ್ಮ ಅವರಿಗೆ ಪೋಲೀಸರ ಸಮ್ಮುಖದಲ್ಲೇ ಬೆದರಿಕೆ ಹಾಕಿದ್ದಾರೆ.
ದಾಖಲೆಸಹಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಟೋಲ್‍ಗೇಟ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರೆಮ್ಮ ಮತ್ತು ಅವರ ಕುಟುಂಬದವರ ಮೇಲೆ ಕೇಸು ದಾಖಲಿಸಲಿದ್ದಾರೆ. ಬೆದರಿಕೆ ಹಾಕಿದವರಿಗೆ ಬಂ?ಸಿ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು..
ವಿಧಾನಸಭಾ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಮಹಿಳೆಯರಿಗೆ ಸರ್ಕಾರದಲ್ಲಿ ರಕ್ಷಣೆ ಇಲ್ಲದೆ ಗೂಂಡಾ ರಾಜ್ಯವಾಗಿದೆ. ಶಾಸಕಿ ಕರೆಮ್ಮ ಅವರಿಗೆ ರಕ್ಷಣೆ ನೀಡಿಲ್ಲ. ಅವರಿಗೆ ಬೆದರಿಕೆ ಹಾಕಿರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಾಗುತ್ತದೆ.ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಗೃಹಸಚಿವರು ಪ್ರತಿಯೊಂದು ವಿಚಾರಕ್ಕೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 82 ಪ್ರಕರಣಗಳಲ್ಲಿ ಪೆÇಲೀಸರೇ ಭಾಗಿಯಾಗಿದ್ದು, ಅವರನ್ನು ಅಮಾನತು ಮಾಡಿದರೆ ಸಾಲದು, ಸೇವೆಯಿಂದಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಕರೆಮ್ಮ ಅವರಿಗೆ ಬೆದರಿಕೆ ಹಾಕಿರುವ ವಿಚಾರದ ಬಗ್ಗೆ ಉನ್ನತ ಮಟ್ಟದ ಟಾಸ್ಕ್-ಪೋರ್ಸ್ ರಚಿಸಬೇಕು. ಬೆದರಿಕೆ ಹಾಕಿದವರನ್ನು ಕೂಡಲೇ ಬಂ?ಸಬೇಕು ಎಂದು ಆಗ್ರಹಿಸಿದರು.
ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಮುಖಂಡರಾದ ಕನ್ಯಾಕುಮಾರಿ, ಸೀತಾಲಕ್ಷಿ, ಪ್ರಶಾಂತಿ ಸುಭಾಶ್, ಶೈಲಜಾ ರಾವ್, ಮಂಗಳಾ ಜಿ. ರಾಜು, ಕವಿತಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
