Homeರಾಜ್ಯಪ್ರೇಮಿಗಳ ದಿನಾಚರಣೆಗೆ ನಂದಿ ಬೆಟ್ಟ ಬಂದ್‌ ; ವಾಪಸ್ಸಾದ ಪ್ರೇಮಿಗಳು

ಪ್ರೇಮಿಗಳ ದಿನಾಚರಣೆಗೆ ನಂದಿ ಬೆಟ್ಟ ಬಂದ್‌ ; ವಾಪಸ್ಸಾದ ಪ್ರೇಮಿಗಳು

ಚಿಕ್ಕಬಳ್ಳಾಪುರ,ಫೆ.14- ಪ್ರೇಮಿಗಳ ದಿನವನ್ನು ಬಡವರ ಊಟಿ ಎಂದೆ ಪ್ರಸಿದ್ಧಿಯಾದ ನಂದಿ ಗಿರಿಧಾಮದಲ್ಲಿ ಆಚರಣೆ ಮಾಡಲು ಸಜ್ಜಾಗಿದ್ದ ಪ್ರೇಮಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ನಂದಿ ಗಿರಿಧಾಮಕ್ಕೆ ಪ್ರೇಮಿಗಳ ಪ್ರವೇಶಕ್ಕೆ ಇಲ್ಲಿನ ಜಿಲ್ಲಾಡಳಿತ ನಿಷೇಧ ಏರಿ ಆದೇಶ ಹೊರಡಿಸಿದೆ. ಈ ಬಾರಿ ವ್ಯಾಲಂಟೈನ್‌ ಡೇ ಆಚರಿಸಿಕೊಳ್ಳುವ ಪ್ರೇಮಿಗಳಿಗೆ ಒಂದು ಕಡೆ ನಿರಾಸೆ ಮೂಡಿದೆ ಹೀಗಾಗಿ ಇಂದು ನಂದಿಬೆಟ್ಟ ಪ್ರೇಮಿಗಳ ಮುಕ್ತ ನಂದಿಬೆಟ್ಟವಾಗಿತ್ತು.

ಸಾಮಾನ್ಯವಾಗಿ ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳು ಪರಸ್ಪರ ಪ್ರೀತಿಯ ಉಡುಗೊರೆಗಳನ್ನು ನೀಡಿ ಖುಷಿ ಪಡುತ್ತಾರೆ. ಜನಸಂದಣಿ, ಟ್ರಾಫಿಕ್‌ ಜಾಮ್‌ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಇಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸಾರ್ವಜನಿಕರು ಮತ್ತು ಖಾಸಗಿ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ಬ್ರೇಕ್‌ ಹಾಕಲಾಗಿತ್ತು.

ನಂದಿಬೆಟ್ಟದ ಪ್ರವೇಶದ್ವಾರದಲ್ಲಿ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದ್ದು, ವಿಷಯ ಗೊತ್ತಿಲ್ಲದೆ ಬಂದ ಜನರು ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯಗಳು ಕಂಡುಬಂದವು. ಬಂದ ದಾರಿ ವ್ಯರ್ಥವಾಗಬಾರದೆಂದು ಜಿಲ್ಲೆಯ ಪ್ರವಾಸಿತಾಣಗಳಿಗೆ ಭೇಟಿ ನೀಡಿದ ದೃಶ್ಯಗಳು ಸರ್ವೆಸಾಮಾನ್ಯವಾಗಿತ್ತು.

RELATED ARTICLES
spot_img

Latest News