Homeರಾಜ್ಯಮತ್ತೆ ಜೈಲಿಗೆ ಹೋಗಲು ಸಿದ್ಧನಿಲ್ಲ : ಹೆಚ್​ಡಿಕೆ, ಬಿಎಸ್‌ವೈಗೆ ಸಿಎಂ ಡಿಕೆಶಿ ತಿರುಗೇಟು

ಮತ್ತೆ ಜೈಲಿಗೆ ಹೋಗಲು ಸಿದ್ಧನಿಲ್ಲ : ಹೆಚ್​ಡಿಕೆ, ಬಿಎಸ್‌ವೈಗೆ ಸಿಎಂ ಡಿಕೆಶಿ ತಿರುಗೇಟು

ಬೆಂಗಳೂರು, ಜೂ.20- ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಇಲಾಖೆ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ಪ್ರಜಾಸೇವೆ ಇಲಾಖೆಯನ್ನು ರಚಿಸಲಾಗುತ್ತದೆ. ಈ ಇಲಾಖೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಇರುತ್ತಾರೆ. ಇದು ಕೇವಲ ಪೋಸ್ಟ್‌ಬನ್‌ ಕೆಲಸ ಮಾಡುವುದಲ್ಲ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ನ್ಯಾಯ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಸಚಿವರು, ಶಾಸಕರನ್ನು ಒಳಗೊಂಡಂತೆ ಎಲ್ಲಾ 224 ಕ್ಷೇತ್ರಗಳಲ್ಲೂ ಸಭೆ ನಡೆಸಲಿದ್ದಾರೆ. ವಾರಕ್ಕೊಮೆ ಕಡ್ಡಾಯವಾಗಿ ಶಾಸಕರ ಜೊತೆಗೂಡಿ ಸ್ಪಂದನಾ ಸಭೆ ಮಾಡಬೇಕು. ಆ ನಂತರ ಪರಿಶೀಲನೆ ಮಾಡಿ ಪರಿಹಾರ ಒದಗಿಸಬೇಕು ಎಂಬ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು. ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಹೊಂದಿದ್ದರೆ ಅರ್ಜಿ ಸಲ್ಲಿಸಲು 15 ದಿನ ಅವಕಾಶ ಕೊಡಲಾಗುತ್ತದೆ. ಇದಕ್ಕೆ ಫೋಟೊ ಮತ್ತು ಜಿಬಿಎಸ್‌‍ ಕಡ್ಡಾಯವಾಗಿರುತ್ತದೆ. ಈ ಹಿಂದೆ ಮೇ 31 ರೊಳಗೆ ಕಟ್ಟಡಕ್ಕೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ರೀತಿ ಕಟ್ಟಡಗಳ ಒಸಿ, ಸಿಸಿ ವಿಚಾರದಲ್ಲಿ ಸರಳೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ದೇವನಹಳ್ಳಿಯಲ್ಲಿ ಸ್ವಯಂಪ್ರೇರಿತರಾಗಿ ಜಮೀನು ನೀಡಲು ಮತ್ತೆ ಕಾಲಾವಕಾಶ ವಿಸ್ತರಣೆ ಮಾಡಲಾಗುವುದು ಎಂದ ಅವರು, ಐಎಎಸ್‌‍, ಐಪಿಎಸ್‌‍, ಐಆರ್‌ಎಸ್‌‍ನಂತಹ ಸ್ಪರ್ಧಾತಕ ಪರೀಕ್ಷೆಗಳಿಗೆ ಕೋಚಿಂಗ್‌ ಪಡೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವದೆಹಲಿಯಲ್ಲಿ ಕರ್ನಾಟಕ ಭವನ-4 ಅನ್ನು 9- ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇದರಲ್ಲಿ ಶೇ.50 ರಷ್ಟು ಎಸ್‌‍ಸಿ/ಎಸ್‌‍ಟಿ ಹಾಗೂ ಇತರರಿಗೆ ಶೇ.50 ರಷ್ಟು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ದೆಹಲಿಯಲ್ಲಿನ ಕರ್ನಾಟಕ ಸ್ಥಾನಿಕ ಆಯುಕ್ತರ ವ್ಯವಸ್ಥೆಯನ್ನು ಪುನರ್‌ ರಚಿಸಲು ತೀರ್ಮಾನಿಸಲಾಗಿದೆ. ಬೇರೆ ರಾಜ್ಯದವರು ಯಾವ ರೀತಿ ಕೇಂದ್ರ ಅನುದಾನವನ್ನು ಪಡೆಯುತ್ತಾರೆ ಎಂಬೆಲ್ಲಾ ಮಾಹಿತಿ ಪಡೆಯಬೇಕು. ದೆಹಲಿಯಲ್ಲಿರುವ ಕರ್ನಾಟಕ ಕೇಡರ್‌ನ ಅಧಿಕಾರಿಗಳು ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಅವರ ಸೇವೆಯನ್ನು ಪಡೆಯಲಾಗುವುದು ಎಂದು ಅವರು ತಿಳಿಸಿದರು.

ಬಸ್ಸು ದರ ಹೆಚ್ಚಳಕ್ಕೆ ಪ್ರಸ್ತಾವನೆ :
ಸಾರಿಗೆ ಸಂಸ್ಥೆಗಳ ಬಸ್ಸು ಪ್ರಯಾಣ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಇನ್ನೂ ಪರಿಶೀಲನೆ ಮಾಡಬೇಕು. ಜನರಿಗೂ ಒಳ್ಳೆಯದಾಗಬೇಕು, ಸಾರಿಗೆ ಸಂಸ್ಥೆಗಳೂ ಉಳಿಯಬೇಕು. ಆ ನಿಟ್ಟಿನಲ್ಲಿ ಶೀಘ್ರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಬಿಡದಿ ಟೌನ್‌ಶಿಪ್‌ ಅನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪನವರು ಮಾಡಿದ್ದರು. ಅದನ್ನು ನಾವು ಮುಂದುವರೆಸುತ್ತಿದ್ದೇವೆ ಅಷ್ಟೇ. ಈಗ ರಾಜಕಾರಣಕ್ಕಾಗಿ ಅವರು ವಿರೋಧ ಮಾಡುತ್ತಿದ್ದಾರೆ. ನಾವು ಯಾರಿಗೂ ಬಲವಂತ ಮಾಡಿ ಭೂಸ್ವಾಧೀನ ಮಾಡುತ್ತಿಲ್ಲ ಎಂದು ಹೇಳಿದರು.

ಈಗಾಗಲೇ ಅಂತಿಮ ಅಧಿಸೂಚನೆಯಾಗಿರುವ ಜಮೀನನ್ನು ಡಿ ನೋಟಿಫೈ ಮಾಡಿ ನಾನು ಜೈಲಿಗೆ ಹೋಗಲು ಸಿದ್ಧನಿಲ್ಲ. ಅವರು ಅಧಿಕಾರದಲ್ಲಿದ್ದಾಗಲೇ ಡಿ ನೋಟಿಫೈ ಮಾಡಲು ಅವಕಾಶವಿತ್ತು. ಏಕೆ ಮಾಡಲಿಲ್ಲ ? ಎಂದು ಪ್ರಶ್ನಿಸಿದರು. ಅತೀ ಹೆಚ್ಚು ಪರಿಹಾರವನ್ನು ರೈತರಿಗೆ ಕೊಡಲಾಗುತ್ತಿದೆ. ಈ ಯೋಜನೆಯ ಪಿತಾಮಹ ಕುಮಾರಸ್ವಾಮಿಯವರೇ. ಕೈಗಾರಿಕೆಯನ್ನು ಎಲ್ಲಿ, ಹೇಗೆ ತರಬೇಕು ಎಂಬುದರ ಬಗ್ಗೆ ಕುಮಾರಸ್ವಾಮಿಯವರೇ ಮೊದಲು ಮಾತನಾಡಲಿ ಎಂದು ಆಗ್ರಹಿಸಿದರು.

RELATED ARTICLES

Latest News