ಬೆಂಗಳೂರು, ಆ.5- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೆಂಗಳೂರು ಕೇಂದ್ರ ವಿಭಾಗವು ಪ್ರವಾಸಿಗರಿಗಾಗಿ ಹೊಸದಾಗಿ ಬೆಂಗಳೂರು ಟು ಜೋಗ್ ಫಾಲ್ಸ್ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಪರಿಚಯಿಸಿದೆ. ಈ ಪ್ಯಾಕೇಜ್ ಪ್ರವಾಸವು ಶಿವಮೊಗ್ಗ, ಸಾಗರ ಮಾರ್ಗವಾಗಿ ಜೋಗ್ ಜಲಪಾತಕ್ಕೆ ಸಂಚರಿಸಲಿದ್ದು, ನಾನ್ ಎ/ಸಿ ಸ್ಲೀಪರ್ ವಾಹನದಲ್ಲಿ ಪ್ರಯಾಣದ ವ್‌ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ವಾಹನದಲ್ಲೇ ಶುಕ್ರವಾರ ರಾತ್ರಿ ಪ್ರಯಾಣ ಆರಂಭವಾಗಲಿದ್ದು, ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯೂ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.
ಈ ಪ್ರವಾಸವು ಆ.8 ರಿಂದ ಆರಂಭವಾಗಲಿದೆ.ಪ್ರವಾಸದ ವೇಳಾಪಟ್ಟಿಯ ಪ್ರಕಾರ, ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಡುವ ವಾಹನ ಬೆಳಿಗ್ಗೆ 5.30ಕ್ಕೆ ಸಾಗರ ತಲುಪಲಿದೆ. ನಂತರ ಉಪಾಹಾರ ಸೇವಿಸಿದ ಬಳಿಕ ಸಾಗರವರದಹಳ್ಳಿವರದಾಮೂಲಇಕ್ಕೇರಿ ಮಾರ್ಗವಾಗಿ ಜೋಗ್ ಜಲಪಾತಕ್ಕೆ ತೆರಳಲಿದೆ.
ಮಧ್ಯಾಹ್ನದ ಊಟದ ಬಳಿಕ ಜೋಗ್ ಜಲಪಾತ ವೀಕ್ಷಣೆ ನಡೆಸಿ, ಸಂಜೆ ಸಾಗರದಲ್ಲಿ ಶಾಪಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಭೋಜನದ ನಂತರ ರಾತ್ರಿ 10 ಗಂಟೆಗೆ ಬೆಂಗಳೂರಿನತ್ತ ಪ್ರಯಾಣ ಆರಂಭವಾಗಲಿದ್ದು, ಬೆಳಗಿನ ಜಾವ 5 ಗಂಟೆಗೆ ಬೆಂಗಳೂರು ತಲುಪಲಿದೆ.
ಪ್ಯಾಕೇಜ್ ದರವು ಶುಕ್ರವಾರ ಮತ್ತು ಶನಿವಾರ ಹೊರಡುವ ವಾರಾಂತ್ಯದ ಪ್ರವಾಸಕ್ಕೆ ಪ್ರತಿ ವಯಸ್ಕರಿಗೆ 3,300 ಹಾಗೂ 6ರಿಂದ 12 ವರ್ಷದೊಳಗಿನ ಮಕ್ಕಳಿಗೆ 3 ಸಾವಿರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಅಥವಾ www.karnataka.gove.inಗೆ ಭೇಟಿ ನೀಡಬಹುದಾಗಿದೆ. ಅಲ್ಲದೆ 080-26252625 ಹಾಗೂ 7760990100, 7760990560, 7760990287 ಸಂಪರ್ಕ ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದು ಎಂದು ಕೆಎಸ್‌ಆರ್ಟಿಸಿ ಬೆಂಗಳೂರು ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣ್ಣೂರಿಗೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆ :
ಬೆಂಗಳೂರು, ಆ.5- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆ.7 ರಿಂದ ಬೆಂಗಳೂರು (ಮಡಿವಾಳ)ದಿಂದ ಕೇರಳದ ಕಣ್ಣೂರಿಗೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಲಾಗುತ್ತಿರುವ ಈ ಸೇವೆಯು ಮಡಿವಾಳದಿಂದ ರಾತ್ರಿ 8.36ಕ್ಕೆ ಹೊರಟು ಶಾಂತಿನಗರ ಟಿಟಿಎಂಸಿ, ಮೈಸೂರು ರಸ್ತೆ ಉಪಗ್ರಹ ಬಸ್ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣ, ಮೈಸೂರು, ಹುಣಸೂರು, ಗೋಣಿಕೊಪ್ಪ, ವಿರಾಜಪೇಟೆ, ಇರುಟ್ಟಿ ಹಾಗೂ ತಲಶ್ಶೇರಿ ಮಾರ್ಗವಾಗಿ ಕಣ್ಣೂರು ತಲುಪಲಿದೆ.
ಪ್ರಯಾಣದ ವೇಳಾಪಟ್ಟಿಯ ಪ್ರಕಾರ, ಮಡಿವಾಳದಿಂದ ರಾತ್ರಿ 8.36ಕ್ಕೆ ಹೊರಡುವ ಬಸ್ ಬೆಳಗಿನ ಜಾವ 3.30ಕ್ಕೆ ವಿರಾಜಪೇಟೆ, 4.45ಕ್ಕೆ ಇರುಟ್ಟಿ, 5.45ಕ್ಕೆ ತಲಶ್ಶೇರಿ ತಲುಪಿ ಬೆಳಿಗ್ಗೆ 6.30ಕ್ಕೆ ಕಣ್ಣೂರು ತಲುಪಲಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆಗಸ್ಟ್ 7ರಿಂದ ಬೆಂಗಳೂರು (ಮಡಿವಾಳ)ದಿಂದ ಕೇರಳದ ಕಣ್ಣೂರಿಗೆ ಹೊಸ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸುತ್ತಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಲಾಗುತ್ತಿರುವ ಈ ಸೇವೆಯು ಮಡಿವಾಳದಿಂದ ರಾತ್ರಿ 8.36ಕ್ಕೆ ಹೊರಟು ಶಾಂತಿನಗರ ಟಿಟಿಎಂಸಿ, ಮೈಸೂರು ರಸ್ತೆ ಉಪಗ್ರಹ ಬಸ್ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣ, ಮೈಸೂರು, ಹುಣಸೂರು, ಗೋಣಿಕೊಪ್ಪ, ವಿರಾಜಪೇಟೆ, ಇರುಟ್ಟಿ ಹಾಗೂ ತಲಶ್ಶೇರಿ ಮಾರ್ಗವಾಗಿ ಕಣ್ಣೂರು ತಲುಪಲಿದೆ.
ಪ್ರಯಾಣ ದರವನ್ನು ಬೆಂಗಳೂರುವಿರಾಜಪೇಟೆಗೆ 600, ಬೆಂಗಳೂರುಇರುಟ್ಟಿಗೆ 705, ಬೆಂಗಳೂರುತಲಶ್ಶೇರಿಗೆ 805 ಹಾಗೂ ಬೆಂಗಳೂರುಕಣ್ಣೂರಿಗೆ 850 ಎಂದು ನಿಗದಿಪಡಿಸಲಾಗಿದೆ.ಈ ಹೊಸ ಸೇವೆಯಿಂದ ಬೆಂಗಳೂರು ಹಾಗೂ ಕೇರಳದ ಉತ್ತರ ಭಾಗಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
