Homeಅಂತಾರಾಷ್ಟ್ರೀಯಸ್ವೀಡನ್‌ ಸಂಸತ್ತಿಗೆ ಆಯ್ಕೆಯಾದ ಮಹಾರಾಷ್ಟ್ರದ ಸಚಿವರ ಸೋದರ ಸೊಸೆ ನೀಲಾ ವಿಖೆ ಪಾಟೀಲ್‌

ಸ್ವೀಡನ್‌ ಸಂಸತ್ತಿಗೆ ಆಯ್ಕೆಯಾದ ಮಹಾರಾಷ್ಟ್ರದ ಸಚಿವರ ಸೋದರ ಸೊಸೆ ನೀಲಾ ವಿಖೆ ಪಾಟೀಲ್‌

ಸ್ಟಾಕ್‌ಹೋಮ್‌, ಸೆ.20: ಮಹಾರಾಷ್ಟ್ರದ ಬಿಜೆಪಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಸೋದರ ಸೊಸೆ ಹಾಗೂ ಗ್ರೀನ್‌ ಪಾರ್ಟಿ ನಾಯಕಿ ನೀಲಾ ವಿಖೆ ಪಾಟೀಲ್‌ ಅವರು ಸ್ವೀಡನ್‌ನ ಸ್ಟಾಕ್‌ಹೋಮ್‌ ನಗರ ಕ್ಷೇತ್ರದಿಂದ ಅಲ್ಲಿನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

41 ವರ್ಷದ ಗ್ರೀನ್‌ ಪಾರ್ಟಿ ರಾಜಕಾರಣಿಯಾಗಿರುವ ನೀಲಾ ಅವರು ಸೆಪ್ಟೆಂಬರ್‌ 13ರಂದು ನಡೆದ ಸ್ವೀಡನ್‌ನ ರಾಷ್ಟ್ರೀಯ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಸ್ವೀಡನ್‌ ಸಂಸತ್ತಾದ ರಿಕ್ಸ್‌ಡಾಗ್‌ನ 349 ಸದಸ್ಯರಲ್ಲಿ ಒಬ್ಬರಾಗಲಿದ್ದಾರೆ.

‘349 ಸದಸ್ಯರ ಸಂಸತ್ತಿನ ಭಾಗವಾಗಿರುವುದು ಸಂತೋಷದ ವಿಷಯ. ನಗರ ಮತ್ತು ದೇಶಕ್ಕೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ನೀಲಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

‘ಮತ ಚಲಾಯಿಸಲು ಸಾಧ್ಯವಾಗದವರ ಧ್ವನಿಯಾಗಲು ನಾನು ಬಯಸುತ್ತೇನೆ. ಪ್ರತಿಯೊಂದು ಮಗುವಿಗೂ ಉತ್ತಮ ಭವಿಷ್ಯದ ಅವಕಾಶ ಸಿಗುವಂತಹ ಸಮಾಜ ನಿರ್ಮಿಸಲು ನಾನು ಕೊಡುಗೆ ನೀಡಲು ಬಯಸುತ್ತೇನೆ. ನಮಗೆ ಸ್ವಚ್ಛ ನೀರು, ಜೀವಂತ ಪ್ರಕೃತಿ ಮತ್ತು ಮಾನವ ನಿರ್ಮಿತ ನೈಸರ್ಗಿಕ ವಿಪತ್ತುಗಳು ಸಾಧ್ಯವಾದಷ್ಟು ಕಡಿಮೆ ಇರುವಂತಹ ವಾಸಯೋಗ್ಯ ಗ್ರಹದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಯಾರು ಈ ನೀಲಾ ವಿಖೆ ಪಾಟೀಲ್‌?

ನೀಲಾ ವಿಖೆ ಪಾಟೀಲ್‌ ಅವರು ಸ್ವೀಡನ್‌ನಲ್ಲಿ ಜನಿಸಿದ್ದು, ತಮ್ಮ ಬಾಲ್ಯದ ದಿನಗಳನ್ನು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಕಳೆದಿದ್ದಾರೆ. ಮಹಾರಾಷ್ಟ್ರದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ವಿಖೆ ಪಾಟೀಲ್‌ ಫೌಂಡೇಶನ್‌ನ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಅಶೋಕ್‌ ವಿಖೆ ಪಾಟೀಲ್‌ ಅವರ ಪುತ್ರಿಯಾಗಿದ್ದಾರೆ.

ಅವರು ಕೇಂದ್ರದ ಮಾಜಿ ಸಚಿವ ಬಾಳಾಸಾಹೇಬ್‌ ವಿಖೆ ಪಾಟೀಲ್‌ ಅವರ ಮೊಮ್ಮಗಳು ಹಾಗೂ ಏಷ್ಯಾದ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿದ ವಿಠಲ್‌ ರಾವ್‌ ವಿಖೆ ಪಾಟೀಲ್‌ ಅವರ ಮರಿಮೊಮ್ಮಗಳು.

RELATED ARTICLES
spot_img

Latest News