Homeರಾಷ್ಟ್ರೀಯದೆಹಲಿ ವಿವಿಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಎಬಿವಿಪಿ

ದೆಹಲಿ ವಿವಿಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಎಬಿವಿಪಿ

ನವದೆಹಲಿ, ಸೆ.20: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (DUSU) 2026ರ ಚುನಾವಣೆಯಲ್ಲಿ ಎಬಿವಿಪಿ ನಾಲ್ಕು ಪ್ರಮುಖ ಹುದ್ದೆಗಳ ಪೈಕಿ ಮೂರನ್ನು ಗೆದ್ದುಕೊಂಡಿದೆ. ಯಶ್‌ ದಬಾಸ್‌ ಅಧ್ಯಕ್ಷರಾಗಿ, ರಿಯಾ ಛವಾಡಿ ಕಾರ್ಯದರ್ಶಿಯಾಗಿ ಹಾಗೂ ಲಕ್ಷ್ಯ ರಾಜ್‌ ಸಿಂಗ್‌ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್‌ ಗೆದ್ದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆನ್‌ ಝೀ ವಿದ್ಯಾರ್ಥಿಗಳ ಸಮಸ್ಯೆಗಳು, ಕ್ಯಾಂಪಸ್‌ ಸುರಕ್ಷತೆ, ಪರೀಕ್ಷಾ ವ್ಯವಸ್ಥೆ, ವಿದ್ಯಾರ್ಥಿ ವಸತಿ ಹಾಗೂ ಆಡಳಿತದ ಹೊಣೆಗಾರಿಕೆ ಪ್ರಮುಖ ವಿಷಯಗಳಾಗಿದ್ದವು.

ಇತ್ತೀಚೆಗೆ ದೆಹಲಿಯ ಸತ್ಯ ನಿಕೇತನದಲ್ಲಿ ಪೇಯಿಂಗ್‌ ಗೆಸ್ಟ್‌ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ವಿದ್ಯಾರ್ಥಿಗಳ ವಸತಿ ಸುರಕ್ಷತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತ್ತು. ಘಟನೆಯ ಬಳಿಕ ವಿದ್ಯಾರ್ಥಿಗಳ ವಸತಿ ಮತ್ತು ಸುರಕ್ಷತೆ ಕುರಿತು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ದೆಹಲಿ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿ, ಆಯುಕ್ತರ ರಾಜೀನಾಮೆಗೂ ಒತ್ತಾಯಿಸಿತ್ತು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಚುನಾವಣಾ ಪ್ರಚಾರದ ಪ್ರಮುಖ ವಿಷಯವಾಗಿತ್ತು. ಚುನಾವಣೆಯ ಬಳಿಕ ಮಾತನಾಡಿದ ಯಶ್‌ ದಬಾಸ್‌, ಹಾಸ್ಟೆಲ್‌ಗಳು ಮತ್ತು ಪೇಯಿಂಗ್‌ ಗೆಸ್ಟ್‌ ವಸತಿಗಳ ಸುರಕ್ಷತಾ ಪರಿಶೀಲನೆ, ಹೊಸ ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ ವ್ಯವಸ್ಥೆ ರೂಪಿಸುವುದು ತಮ್ಮ ಆದ್ಯತೆಗಳಾಗಿವೆ ಎಂದು ಹೇಳಿದ್ದಾರೆ.

RELATED ARTICLES
spot_img

Latest News