Homeರಾಷ್ಟ್ರೀಯಶುಲ್ಕ ಹೇರಿಕೆ ಬೆನ್ನಲ್ಲೇ ಅಂಗಡಿಗಳ ಮುಂದೆ ರಾರಾಜಿಸುತ್ತಿವೆ 'ಯುಪಿಐ ಪಾವತಿ ಸ್ವೀಕರಿಸಲ್ಲ' ಎಂಬ ಬೋರ್ಡ್‌ಗಳು

ಶುಲ್ಕ ಹೇರಿಕೆ ಬೆನ್ನಲ್ಲೇ ಅಂಗಡಿಗಳ ಮುಂದೆ ರಾರಾಜಿಸುತ್ತಿವೆ ‘ಯುಪಿಐ ಪಾವತಿ ಸ್ವೀಕರಿಸಲ್ಲ’ ಎಂಬ ಬೋರ್ಡ್‌ಗಳು

ಗಾಜಿಯಾಬಾದ್‌, ಸೆ.20- ಯುಪಿಐ ಪಾವತಿಗೆ ಕೇಂದ್ರ ಸರ್ಕಾರ ಶುಲ್ಕ ಹೇರಿದ ಬೆನ್ನಲ್ಲೇ ಇತ್ತ ವ್ಯಾಪಾರಿಗಳು ನಗದು ಮಾತ್ರ ಸ್ವೀಕರಿಸಲಾಗುವುದು ಎಂದು ತಮ ಮಳಿಗೆಗಳ ಮುಂದೆ ಬೋರ್ಡ್‌ ಹಾಕುತ್ತಿದ್ದಾರಂತೆ.ಅಕ್ಟೋಬರ್‌ 15ರಿಂದ 2,000 ರೂಗಿಂತ ಹೆಚ್ಚಿನ ಮೊತ್ತದ ಕೆಲವು ವಹಿವಾಟುಗಳಿಗೆ ಪ್ರಸ್ತಾವಿತ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ ಜಾರಿಯಾಗಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನ ವ್ಯಾಪಾರಿಗಳು, ತಮ್ಮ ಅಂಗಡಿಗಳ ಮುಂದೆ ಯುಪಿಐ ಪಾವತಿ ಸ್ವೀಕರಿಸುವುದಿಲ್ಲ ಎಂಬ ಬೋರ್ಡ್‌ ಗಳನ್ನು ಹಾಕಲು ಆರಂಭಿಸಿದ್ದಾರೆ.

ಪ್ರಸ್ತಾವಿತ ನಿಯಮದಡಿ ನಿರ್ದಿಷ್ಟ 2,000 ರೂಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇ.0.4ರಷ್ಟು ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕವನ್ನು ವ್ಯಾಪಾರಿಗಳೇ ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿಗಳು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಇದರಿಂದ ಅಕ್ಟೋಬರ್‌ 15 ರಿಂದ 2,000 ರೂಗಿಂತ ಹೆಚ್ಚಿನ ಮೊತ್ತದ ಖರೀದಿಗೆ ಗ್ರಾಹಕರು ನಗದು ಹಣವನ್ನು ತೆಗೆದುಕೊಂಡು ಬರುವಂತೆ ಕೆಲವು ವ್ಯಾಪಾರಿಗಳು ಸೂಚಿಸುತ್ತಿದ್ದಾರೆ.ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಪೆಟ್ರೋಲ್‌ ಪಂಪ್‌ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಸ್ವೀಕರಿಸಲು ನಕಾರ!ವ್ಯಾಪಾರಿಗಳ ಆಕ್ಷೇಪವೇನು? ಶುಲ್ಕವನ್ನು ವ್ಯಾಪಾರಿಗಳೇ ಭರಿಸಬೇಕು ಎಂದು ಸರ್ಕಾರ ಹೇಳಿದ್ದರೂ, ಈ ಹೆಚ್ಚುವರಿ ವೆಚ್ಚವನ್ನು ವ್ಯಾಪಾರಿಗಳು ತಮ್ಮ ಮೇಲೆ ಸಂಪೂರ್ಣವಾಗಿ ಹೊರುವ ಸಾಧ್ಯತೆ ಕಡಿಮೆ ಎಂದು ಇತರೆ ವ್ಯಾಪಾರಿಗಳು ವಾದಿಸುತ್ತಿದ್ದಾರೆ.

ಹೆಚ್ಚಿನ ಮೊತ್ತದ ವಹಿವಾಟುಗಳಲ್ಲಿ ಶುಲ್ಕ ವ್ಯಾಪಾರಿಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಬಹುದು.ಹೀಗಾಗಿ, 2,000 ರೂಗಿಂತ ಹೆಚ್ಚಿನ ಖರೀದಿಗೆ ಬದಲು ನಗದು ಪಾವತಿ ಮಾಡುವಂತೆ ಗ್ರಾಹಕರನ್ನು ಕೇಳುವ ಸಾಧ್ಯತೆ ಇದೆ.

ಗಾಜಿಯಾಬಾದ್‌ನ ಅಂಗಡಿಗಳ ಮುಂದೆ ಹಾಕಲಾಗುತ್ತಿರುವ ಬೋರ್ಡ್‌ ಗಳು, ಪ್ರಸ್ತಾವಿತ ಶುಲ್ಕ ಜಾರಿಗೆ ಬಂದ ನಂತರ ನಿರ್ದಿಷ್ಟ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಸ್ವೀಕಾರದಲ್ಲಿ ಬದಲಾವಣೆ ಆಗಬಹುದು ಎಂಬ ವ್ಯಾಪಾರಿಗಳ ಎಚ್ಚರಿಕೆಯಾಗಿ ಪರಿಣಮಿಸಿವೆ.

RELATED ARTICLES
spot_img

Latest News