Homeರಾಷ್ಟ್ರೀಯಪ್ರಧಾನಿ ಮೋದಿ ತಾಯಿಯ ಕುರಿತು ಅಪಹಾಸ್ಯ : ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಪ್ರಧಾನಿ ಮೋದಿ ತಾಯಿಯ ಕುರಿತು ಅಪಹಾಸ್ಯ : ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಇಂದೋರ್‌(ಮಧ್ಯಪ್ರದೇಶ),ಸೆ.20- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಇಂದೋರ್‌ನಲ್ಲಿ ನಡೆದ ಛಾತ್ರೋನ್‌ ಕಿ ಗೂಂಜ್‌ ವಿದ್ಯಾರ್ಥಿ ಸಂವಾದ ಕಾರ್ಯಕ್ರಮವು ಶಿಕ್ಷಣ, ಉದ್ಯೋಗ ಮತ್ತು ನೇಮಕಾತಿ ಸಮಸ್ಯೆಗಳ ಚರ್ಚೆಯ ಜೊತೆಗೆ ರಾಜಕೀಯ ವಿವಾದಕ್ಕೂ ಕಾರಣವಾಗಿದೆ.

ವೇದಿಕೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಹೋಲುವಂತೆ ವ್ಯಕ್ತಿಯೊಬ್ಬರು ಮಾಡಿದ ಅನುಕರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಇದನ್ನು ಆಧರಿಸಿ ಬಿಜೆಪಿ ನಾಯಕರು ರಾಹುಲ್‌ ಗಾಂಧಿ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದ ವಿಡಿಯೋದಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ವೇದಿಕೆಯಲ್ಲಿದ್ದ ಪ್ರದರ್ಶಕನೊಬ್ಬ ಪ್ರಧಾನಿ ಮೋದಿ ಅವರ ಮಾತಿನ ಶೈಲಿ ಮತ್ತು ವಿದೇಶಿ ನಾಯಕರೊಂದಿಗಿನ ಸಂವಹನವನ್ನು ಅನುಕರಿಸುವಂತೆ ಕಾಣಿಸಿಕೊಂಡಿದ್ದಾನೆ. ರಾಹುಲ್‌ ಗಾಂಧಿ ನಗುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಇದೇ ಅಂಶವನ್ನು ಬಿಜೆಪಿ ನಾಯಕರು ಪ್ರಶ್ನಿಸಿ, ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ರಾಜಕೀಯ ವ್ಯಂಗ್ಯ ಪ್ರದರ್ಶನಕ್ಕೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್‌. ಕೇಶವನ್‌ ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ ಮೂಲಕ ರಾಹುಲ್‌ ಗಾಂಧಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಅವರ ತಾಯಿ ಕುರಿತ ಅವಹೇಳನಕಾರಿ ಅಂಶಗಳೂ ಇದ್ದವು ಎಂದು ಆರೋಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ನಗುತ್ತಿದ್ದರು ಎಂಬುದನ್ನೂ ಅವರು ಟೀಕಿಸಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಜವಾಬ್ದಾರಿ ಮತ್ತು ರಾಜಕೀಯ ಭಾಷೆಯ ಮಟ್ಟದ ಕುರಿತು ಪ್ರಶ್ನೆ ಎತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕೂಡ ಘಟನೆಗೆ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಅವರ ದಿವಂಗತ ತಾಯಿಯನ್ನು ಅವಹೇಳನ ಮಾಡುವ ರೀತಿಯ ಪ್ರದರ್ಶನ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ನೀತಿ ಮತ್ತು ವಿಚಾರಗಳ ಆಧಾರದ ಮೇಲೆ ಇರಬೇಕು; ಕುಟುಂಬ ಸದಸ್ಯರು ಅಥವಾ ಹಿರಿಯರನ್ನು ಗುರಿಯಾಗಿಸುವ ವೈಯಕ್ತಿಕ ಟೀಕೆಗಳ ಮೂಲಕ ರಾಜಕೀಯ ಸಂಘರ್ಷ ನಡೆಸಬಾರದು ಎಂಬುದು ಅವರ ನಿಲುವಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಕೂಡ ಇದೇ ವಿಚಾರವಾಗಿ ರಾಹುಲ್‌ ಗಾಂಧಿ ವಿರುದ್ಧ ಟೀಕೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ, ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವುದರಿಂದಲೇ ವ್ಯವಸ್ಥೆಗೆ ಅಸಹನೆ ಉಂಟಾಗುತ್ತದೆ ಎಂದು ಆರೋಪಿಸಿದರು. ಱವ್ಯವಸ್ಥೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಹೆದರುತ್ತಿದೆ ಎಂಬುದು ಅವರ ಭಾಷಣದ ಪ್ರಮುಖ ಅಂಶವಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಅವರು ಪ್ರಸ್ತಾಪಿಸಿದರು. ಬಿಜೆಪಿ ಬೆಂಬಲಿಗರನ್ನು ಉಲ್ಲೇಖಿಸಿ ಅಂಧಭಕ್ತ ಎಂಬ ಪದವನ್ನೂ ಬಳಸಿದರು.

ರಾಹುಲ್‌ ಗಾಂಧಿ ತಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಹಾಗೂ ಉದ್ಯಮಿಗಳಾದ ಗೌತಮ್‌ ಅದಾನಿ ಮತ್ತು ಮುಖೇಶ್‌ ಅಂಬಾನಿ ಅವರನ್ನು ಒಳಗೊಂಡಂತೆ ದೇಶದ ಱವ್ಯವಸ್ಥೆೞ ಕುರಿತು ತಮ ರಾಜಕೀಯ ಆರೋಪಗಳನ್ನು ಮುಂದಿಟ್ಟರು.

RELATED ARTICLES
spot_img

Latest News