ಐಚಿ-ನಗೋಯಾ, ಸೆ.20 (ಪಿಟಿಐ): ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡವು ಗ್ರೂಪ್ ಎಫ್‌ನ ಆರಂಭಿಕ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 3-0 ಅಂತರದ ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತು.
ಆರಂಭಿಕ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು ನಿ ಮಹಾರಾನಿ ಅವರನ್ನು 3-1 ಅಂತರದಿಂದ ಸೋಲಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಗೇಮ್ ಅನ್ನು 8-11 ಅಂತರದಲ್ಲಿ ಕಳೆದುಕೊಂಡ ನಂತರ ಶ್ರೀಜಾ ಚೇತರಿಸಿಕೊಂಡು ಮುಂದಿನ ಎರಡು ಗೇಮ್‌ಗಳನ್ನು 11-4, 11-4 ಅಂತರದಲ್ಲಿ ಗೆದ್ದುಕೊಂಡರು.
ನಂತರ ದಿಯಾ ಚಿಟಲೆ ಅವರು ಅಲೈರಾ ನೆಬುಚಾಡ್ನೆಜರ್ ವಿರುದ್ಧ 3-0 ಅಂತರದ ಪ್ರಭಾವಶಾಲಿ ಗೆಲುವು ಸಾಧಿಸಿ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ದಿಯಾ 11-9, 11-8, 11-5 ಅಂತರದಲ್ಲಿ ಗೆಲ್ಲುವ ಮೂಲಕ ಭಾರತವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.
ಮೂರನೇ ಪಂದ್ಯದಲ್ಲಿ ಯಶಸ್ವಿನಿ ಘೋರ್ಪಡೆ ಅವರು ಚಿತ್ರಾ ರಾಸ್ಮಿ ಅವರನ್ನು 3-0 ಅಂತರದಿಂದ ಸೋಲಿಸುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಯಶಸ್ವಿನಿ 12-10, 11-4, 11-4 ಅಂತರದಲ್ಲಿ ಜಯಗಳಿಸಿ ಭಾರತಕ್ಕೆ ಟೈ ಗೆಲುವು ತಂದುಕೊಟ್ಟರು. ಭಾರತವು ಗ್ರೂಪ್ ಎಫ್‌ನಲ್ಲಿ ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ಸಿಂಗಾಪುರದೊಂದಿಗೆ ಸ್ಥಾನ ಪಡೆದಿದೆ.
ಬೆಳ್ಳಿ ಗೆದ್ದ ಭಾರತ :
ಟೊಕಿಯೊ, ಸೆ.20-ಹೃದಯದಿಂದ ಹೃದಯಕ್ಕೆ ಎನ್ನುವ ಭವ್ಯ ಸಂದೇಶದೊಂದಿಗೆ ಆರಂಭವಾಗಿರುವ ಏಷ್ಯನ್ ಗೇಮ್ಸೌನ 2ನೇ ದಿನವೇ ಭಾರತ ತನ್ನ ಪದಕ ಬೇಟೆ ಆರಂಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಗುಂಪು ಸ್ಪರ್ಧೆಯಲ್ಲಿ ಎಲವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕ್ಕೆ ಕೊರಳೊಡ್ಡುವ ಮೂಲಕ ಏಷ್ಯನ್ ಗೇಮ್ಸೌನಲ್ಲಿ ಪದಕ ಖಾತೆ ತೆರೆದಿದೆ.
ಅಗ್ರ ಸ್ಥಾನ ಪಡೆದ ಚೀನಾ ಚಿನ್ನದ ಪದಕ ಗೆದ್ದುಕೊಂಡರೆ, ಜಪಾನ್ 3ನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಕೊರಳೊಡ್ಡಿತು. ಭಾರತೀಯ ಶೂಟರ್ ಸೋನಮ್ ಮಾಸ್ಕರ್ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತನ್ನು 634.1 ಅಂಕಗಳೊಂದಿಗೆ ಪೂರ್ಣಗೊಳಿಸಿದರು. ವೈಯಕ್ತಿಕ ವಿಭಾಗದ ಫೈನಲ್‌ಗೆ ಪ್ರವೇಶಿಸುವ ಸ್ಪರ್ಧೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಏಷ್ಯನ್ ಗೇಮ್ಸೌನಲ್ಲಿ ಮಹಿಳಾ ಹಾಕಿ ತಂಡದ ಪರಾಕ್ರಮ :
ಕಕಮಿಲ್ಗಹರಾ, ಸೆ. 20 (ಪಿಟಿಐ): ಜಪಾನ್ ಏಷ್ಯನ್ ಗೇಮ್ಸೌನ ಪೂಲ್ ಬಿ ವಿಭಾಗದ ತಮ್ಮ ಆರಂಭಿಕ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಉಜ್ಬೇಕಿಸ್ತಾನವನ್ನು 19-0 ಅಂತರದಿಂದ ಭರ್ಜರಿಯಾಗಿ ಸೋಲಿಸಿದೆ.ಮಾತ್ರವಲ್ಲ, ಈ ಪಂದ್ಯದಲ್ಲಿ ದೀಪಿಕಾ ಏಕಾಂಗಿಯಾಗಿ ಎಂಟು ಗೋಲುಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.
ಇದು ಏಕಪಕ್ಷೀಯ ಪಂದ್ಯವಾಗುವ ನಿರೀಕ್ಷೆಯಿತ್ತು ಮತ್ತು ಹಾಗೆಯೇ ನಡೆಯಿತು; ಏಕೆಂದರೆ ಭಾರತದ ನಿರಂತರ ದಾಳಿಗಳನ್ನು ತಡೆಯಲು ಉಜ್ಬೇಕಿಸ್ತಾನದ ರಕ್ಷಣಾ ವಿಭಾಗದ ಬಳಿ ಯಾವುದೇ ಉತ್ತರವಿರಲಿಲ್ಲ. ಆಟದ ಮೈದಾನದಲ್ಲಿ ಉಭಯ ತಂಡಗಳ ನಡುವಿನ ಅಂತರ ಸ್ಪಷ್ಟವಾಗಿ ಗೋಚರಿಸುತ್ತಿತ್ತು, ಏಕೆಂದರೆ ಆರಂಭದಿಂದಲೇ ಭಾರತದ ಪರ ಗೋಲುಗಳ ಸುರಿಮಳೆಯೇ ಹರಿಯಿತು.
ಭಾರತದ ಪರ ದೀಪಿಕಾ (8, 22, 25, 33, 36, 38, 41 ಮತ್ತು 54ನೇ ನಿಮಿಷಗಳಲ್ಲಿ) ಅತಿ ಹೆಚ್ಚು ಗೋಲುಗಳನ್ನು ಗಳಿಸಿದರು. ಉಳಿದಂತೆ ಲಾಲ್‌ರೆಮ್ಸಿಯಾಮಿ (7ನೇ ನಿಮಿಷ), ಇಶಿಕಾ (11, 42, 54ನೇ ನಿಮಿಷ), ಬಲ್ಜೀತ್ ಕೌರ್ (12ನೇ ನಿಮಿಷ), ನೇಹಾ (18ನೇ ನಿಮಿಷ), ನವನೀತ್ ಕೌರ್ (23, 45ನೇ ನಿಮಿಷ), ಲಾಲ್‌ಥಾಂತ್ಲುವಾಂಗಿ (43, 51ನೇ ನಿಮಿಷ) ಮತ್ತು ಸಾಕ್ಷಿ ರಾಣಾ (43ನೇ ನಿಮಿಷ) ಗೋಲುಗಳನ್ನು ಗಳಿಸಿದರು.
ಭಾರತವು ತನ್ನ ಮುಂದಿನ ಪಂದ್ಯದಲ್ಲಿ ನಾಳೆ ಇಂಡೋನೇಷ್ಯಾವನ್ನು ಎದುರಿಸಲಿದೆ. ಸ್ಪರ್ಧೆಯಲ್ಲಿ ಎರಡನೇ ಅತ್ಯುನ್ನತ ಶ್ರೇಯಾಂಕ ಹೊಂದಿರುವ ಭಾರತ ತಂಡವು, ಉಜ್ಬೇಕಿಸ್ತಾನದ ರಕ್ಷಣಾ ವಿಭಾಗವನ್ನು ಸುಲಭವಾಗಿ ಮೀರಿ ಮೊದಲಾರ್ಧದಲ್ಲೇ ಎಂಟು ಗೋಲುಗಳನ್ನು ಗಳಿಸಿತು. ಪಂದ್ಯವು ಸಂಪೂರ್ಣವಾಗಿ ಏಕಪಕ್ಷೀಯವಾಗಿತ್ತು ಮತ್ತು ಉಭಯ ತಂಡಗಳ ಕೌಶಲ್ಯ ಮಟ್ಟದಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.
ಲಾಲ್‌ರೆಮ್ಸಿಯಾಮಿ ಹತ್ತಿರದ ಅಂತರದಿಂದ ಫೀಲ್‌್ಡ ಗೋಲ್ ಗಳಿಸುವ ಮೂಲಕ ಗೋಲುಗಳ ಖಾತೆ ತೆರೆದರು ಮತ್ತು ಒಂದು ನಿಮಿಷದ ನಂತರ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ನಂತರ ಸುನೇಲಿತಾ ಟೊಪ್ಪೊ ಅವರಿಂದ ಪಾಸ್ ಪಡೆದ ಇಶಿಕಾ, ೞಸರ್ಕಲ್‌ೞನ ಎಡಭಾಗದಿಂದ ಅತ್ಯುತ್ತಮವಾದ ಫಸ್ಟ್-ಟೈಮ್ ಫಿನಿಶ್ ಮೂಲಕ ಚೆಂಡನ್ನು ಗುರಿಯತ್ತ ಸೇರಿಸಿದರು.
ಒಂದು ನಿಮಿಷದ ನಂತರ ಬಲ್ಜೀತ್ ಸ್ಕೋರ್ ಅನ್ನು 4-0ಗೆ ಏರಿಸಿದರು; ಬಳಿಕ ನೇಹಾ ಮತ್ತೊಂದು ಫೀಲ್‌್ಡ ಗೋಲ್ ಗಳಿಸಿ ತಮ್ಮ ಹೆಸರನ್ನು ಸ್ಕೋರ್‌ಶೀಟ್‌ನಲ್ಲಿ ದಾಖಲಿಸಿದರು. ನಂತರ ದೀಪಿಕಾ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಲಗಡೆಯ ಕೆಳಮೂಲೆಗೆ ಶಕ್ತಿಯುತವಾದ ಡ್ರ್ಯಾಗ್-ಫ್ಲಿಕ್ ಹೊಡೆಯುವ ಮೂಲಕ ತಮ್ಮ ಎರಡನೇ ಗೋಲು ಗಳಿಸಿದರು ಮತ್ತು ಸ್ಕೋರ್ ಅನ್ನು 6-0ಗೆ ತಲುಪಿಸಿದರು.
ಈಜಿನಲ್ಲಿ ಫೈನಲ್‌ಗೆ ಆರ್ಹತೆ ಪಡೆದ ದಿಷಭ್ ದಾಸ್
ಟೋಕಿಯೊ, ಸೆ. 20 (ಪಿಟಿಐ): ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸೌನ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಹೀಟ್‌್ಸನಲ್ಲಿ ಭಾರತದ ರಿಷಭ್ ದಾಸ್ ಒಟ್ಟಾರೆ ಐದನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡು ಗಮನಾರ್ಹ ಪ್ರದರ್ಶನ ನೀಡಿದರು.
ರಿಷಭ್ 54.85 ಸೆಕೆಂಡುಗಳ ಸಮಯವನ್ನು ದಾಖಲಿಸಿದರು. ಇವರು ಎರಡನೇ ಸ್ಥಾನ ಪಡೆದ ಜಪಾನ್‌ನ ಈಜುಪಟು ಹಿಡೆಕಾಜು ಟಕೆಹರಾ ಅವರಿಗಿಂತ 0.63 ಸೆಕೆಂಡುಗಳು ಮತ್ತು ಹೀಟ್‌್ಸನಲ್ಲಿ ಅಗ್ರಸ್ಥಾನ ಪಡೆದ ಚೀನಾದ ಏಷ್ಯನ್ ದಾಖಲೆ ಹೊಂದಿರುವ ಕ್ಸು ಜಿಯಾಯು (52.63 ಸೆಕೆಂಡುಗಳು) ಅವರಿಗಿಂತ 2.22 ಸೆಕೆಂಡುಗಳಷ್ಟು ಹಿಂದೆ ಉಳಿದರು. ಸ್ಪರ್ಧೆಯಲ್ಲಿದ್ದ ಮತ್ತೊಬ್ಬ ಭಾರತೀಯ ಉತ್ಕರ್ಷ್ ಪಾಟೀಲ್ 56.19 ಸೆಕೆಂಡುಗಳ ಸಮಯದೊಂದಿಗೆ 12ನೇ ಸ್ಥಾನ ಪಡೆದರು ಮತ್ತು ಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡರು.
ರಿಷಭ್ ನಾಳೆ ನಡೆಯಲಿರುವ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಏತನ್ಮಧ್ಯೆ, ಪುರುಷರ 100 ಮೀಟರ್ ಫ್ರೀಸ್ಟೈಲ್ ಹೀಟ್‌್ಸ ನಲ್ಲಿ ಭಾರತಕ್ಕೆ ನಿರಾಶಾದಾಯಕ ಫಲಿತಾಂಶಗಳು ಎದುರಾದವು; ಇದರಲ್ಲಿ ಬೆನೆಡಿಕ್ಷನ್ ಬೆನಿಸ್ಟನ್ 50.25 ಸೆಕೆಂಡುಗಳ ಸಮಯದೊಂದಿಗೆ 12ನೇ ಸ್ಥಾನ ಪಡೆದರೆ, ಆಕಾಶ್ ಮಣಿ 50.85 ಸೆಕೆಂಡುಗಳ ಸಮಯದೊಂದಿಗೆ 23ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
