Homeಇದೀಗ ಬಂದ ಸುದ್ದಿಬಿ.ಕೆ.ಹರಿಪ್ರಸಾದ್‌ ಪದಗ್ರಹಣಕ್ಕೆ ಭರದ ಸಿದ್ಧತೆ

ಬಿ.ಕೆ.ಹರಿಪ್ರಸಾದ್‌ ಪದಗ್ರಹಣಕ್ಕೆ ಭರದ ಸಿದ್ಧತೆ

ಬೆಂಗಳೂರು, ಜೂ.20- ಪಕ್ಷನಿಷ್ಠೆಯ ನಾಯಕ, ವಿಧಾನಪರಿಷತ್‌ ಸದಸ್ಯರೂ ಆದ ಬಿ.ಕೆ.ಹರಿಪ್ರಸಾದ್‌ರವರು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನಾಳೆ ಅಧಿಕಾರ ಸ್ವೀಕಾರ ಮಾಡುತ್ತಿದ್ದು, ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಐಸಿಸಿ ಮುಖಂಡರು, ವಿವಿಧ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರು, ವಿವಿಧ ಕಾಂಗ್ರೆಸ್‌‍ ಮುಖಂಡರು ನಾಳಿನ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿಯೋಜಿತ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್‌ರವರಿಗೆ ಕೆಪಿಸಿಸಿ ಹಾಲಿ ಅಧ್ಯಕ್ಷರಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಡಿನ ಮೂಲೆಮೂಲೆಗಳಿಂದ ಕಾಂಗ್ರೆಸ್‌‍ ಕಾರ್ಯಕರ್ತರು ಬೃಹತ್‌ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಪದಗ್ರಹಣ ಕಾರ್ಯಕ್ರಮವನ್ನು ರಾಜಭವನದಲ್ಲಿ ಸರಳವಾಗಿ ಆಚರಿಸಲಾಗಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಲು ಕಾಂಗ್ರೆಸ್‌‍ ಪಕ್ಷ ತೀರ್ಮಾನಿಸಿದೆ. ಅದಕ್ಕೆ ಕಳೆದ ಒಂದು ವಾರದಿಂದ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ನಗರದ ಸುತ್ತಮುತ್ತ ಬಿ.ಕೆ.ಹರಿಪ್ರಸಾದ್‌, ಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿ ಸೇರಿದಂತೆ ವಿವಿಧ ಮುಖಂಡರ ಕಟೌಟ್‌ಗಳು, ಸ್ವಾಗತ ಅಭಿನಂದನೆ ಫ್ಲೆಕ್‌್ಸಗಳು, ಬ್ಯಾನರ್‌ಗಳು ವಿಜೃಂಭಿಸುತ್ತಿವೆ. ಕೆಪಿಸಿಸಿ ಮುಖಂಡರು ಈಗಾಗಲೇ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿದ್ದಾರೆ. ಮುಖ್ಯಮಂತ್ರಿ ಡಿಕೆಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಮುಖಂಡರು, ಸೇವಾದಳ, ಎನ್‌.ಎನ್‌.ಯು.ಐ, ಯುವ ಕಾಂಗ್ರೆಸ್‌‍, ಮಹಿಳಾ ಕಾಂಗ್ರೆಸ್‌‍ ಸೇರಿದಂತೆ ಎಲ್ಲಾ ಘಟಕಗಳ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

RELATED ARTICLES

Latest News