Thursday, May 14, 2026
Homeಅಂತಾರಾಷ್ಟ್ರೀಯಇರಾನ್‌ ಸೇನಾ ವಿಮಾನಗಳಿಗೆ ನೆರವು ನೀಡಿದ್ದ ಪಾಕ್‌ : ಅಮೆರಿಕ ಗರಂ

ಇರಾನ್‌ ಸೇನಾ ವಿಮಾನಗಳಿಗೆ ನೆರವು ನೀಡಿದ್ದ ಪಾಕ್‌ : ಅಮೆರಿಕ ಗರಂ

Pakistan 'ditched' US despite playing peacemaker, helped Iran

ವಾಷಿಂಗ್ಟನ್‌,ಮೇ 12- ಯುದ್ಧ ಅಂತ್ಯಗೊಳಿಸಲು ಮಧ್ಯವರ್ತಿತ್ವ ವಹಿಸುತ್ತಿರುವುದಾಗಿ ಬೀಗುತ್ತಿದ್ದ ಪಾಕಿಸ್ಥಾನ ಅಮೆರಿಕ ದಾಳಿಯಿಂದ ರಕ್ಷಿಸಲು ಇರಾನ್‌ನ ಸೇನಾ ವಿಮಾನಗಳಿಗೆ ತನ್ನ ವಾಯುನೆಲೆಗಳಲ್ಲಿ ಆಶ್ರಯ ನೀಡಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ.

ಇದಲ್ಲದೆ, ಅಮೆರಿಕದ ದಾಳಿಯಿಂದ ರಕ್ಷಿಸಿಕೊಳ್ಳಲು ಇರಾನ್‌ ತನ್ನ ನಾಗರಿಕ ವಿಮಾನ ಗಳನ್ನೂ ನೆರೆ ದೇಶವಾದ ಅಫ್ಘಾನಿಸ್ತಾನಲ್ಲಿ ನಿಲ್ಲಿಸಿತ್ತು ಎಂದು ಸಿಬಿಎಸ್‌‍ ನ್ಯೂಸ್‌‍ ವರದಿ ಹೇಳಿದೆ. ಈ ವರದಿಗೆ ಪ್ರತಿಕ್ರಿಯಿಸಿದ ಅಮೆರಿಕದ ರಿಪಬ್ಲಿಕನ್‌ ಪಕ್ಷದ ಸೆನೆಟರ್‌ ಲಿಂಡ್ಸೆ ಗ್ರಹಾಂ ಆತಂಕ ವ್ಯಕ್ತಪಡಿಸಿ ಅಮೆರಿಕ-ಇರಾನ್‌ ಯುದ್ಧದಲ್ಲಿ ಮಧ್ಯವರ್ತಿಯಾಗಿ ಪಾಕಿಸ್ತಾನದ ಪಾತ್ರವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ವರದಿ ಸತ್ಯವಾಗಿದ್ದರೆ, ಇರಾನ್‌, ಅಮೆರಿಕ ಮತ್ತು ಇತರ ಪಕ್ಷಗಳ

ನಡುವೆ ಮಧ್ಯವರ್ತಿಯಾಗಿ ಪಾಕಿಸ್ತಾನ ವಹಿಸುತ್ತಿರುವ ಪಾತ್ರವನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕಾಗುತ್ತದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.ಇಸ್ರೇಲ್‌ ಕುರಿತು ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳು ಹಿಂದೆ ನೀಡಿದ್ದ ಕೆಲವು ಹೇಳಿಕೆಗಳನ್ನು ಗಮನಿಸಿದರೆ, ಈ ವರದಿ ನಿಜವಾಗಿದ್ದರೂ ಅಚ್ಚರಿಯಿಲ್ಲ,ಎಂದು ಗ್ರಾಹಮ್‌ ಹೇಳಿದ್ದಾರೆ.

ಅಮೆರಿಕದ ಹೆಸರು ಬಹಿರಂಗಪಡಿಸದ ಅಧಿಕಾರಿಗಳನ್ನು ಉಲ್ಲೇಖಿಸಿದ ಸಿಬಿಎಸ್‌‍ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಟ್ರಂಪ್‌ ಏಪ್ರಿಲ್‌ನಲ್ಲಿ ಯುದ್ಧ ವಿರಾಮ ಘೋಷಿಸಿದ ಕೆಲವೇ ದಿನಗಳಲ್ಲಿ ಇರಾನ್‌ ತನ್ನ ಗುಪ್ತಚರ ಹಾಗೂ ನಿಗಾವಹಿಸುವ ವಿಮಾನ ಸೇರಿದಂತೆ ಹಲವು ವಿಮಾನಗಳನ್ನುಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆಗೆ ಕಳುಹಿಸಿತ್ತು.

ಆದರೆ,ಆರೋಪಗಳನ್ನು ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಳ್ಳಿಹಾಕಿದ್ದಾರೆ. ನೂರ್‌ ಖಾನ್‌ ವಾಯುನೆಲೆ ನಗರ ಹೃದಯಭಾಗದಲ್ಲಿದೆ. ಅಲ್ಲಿ ದೊಡ್ಡ ಪ್ರಮಾಣದ ವಿಮಾನಗಳನ್ನು ನಿಲ್ಲಿಸಿ ಸಾರ್ವಜನಿಕರ ಗಮನಕ್ಕೆ ಬಾರದಂತೆ ಇಡುವುದು ಸಾಧ್ಯವಿಲ್ಲ ಎಂದು ಅವರು ಸಿಬಿಎಸ್‌‍ಗೆ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ಸಿಬಿಎಸ್‌‍ಗೆ ನೀಡಿದ ಮಾಹಿತಿಯ ಪ್ರಕಾರ, ಇರಾನ್‌ಗೆ ಸೇರಿದ ನಾಗರಿಕ ವಿಮಾನವೊಂದು ಯುದ್ಧ ಆರಂಭಕ್ಕೂ ಮೊದಲು ಕಾಬೂಲ್‌ಗೆ ಬಂದು, ಇರಾನ್‌ ವಾಯುಪ್ರದೇಶ ಮುಚ್ಚಿದ ನಂತರವೂ ಅಲ್ಲಿ ನಿಲ್ಲಿಸಲಾಗಿತ್ತು ಎಂದಿದ್ದಾರೆ.

ನಂತರ ಪಾಕಿಸ್ತಾನ ಅಫ್ಘಾನಿಸ್ತಾನ ಮೇಲೆ ದಾಳಿ ನಡೆಸಿದ ಬಳಿಕ ಆ ವಿಮಾನವನ್ನು ಇರಾನ್‌ ಗಡಿಯ ಸಮೀಪದ ಹೆರಾತ್‌ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು ಎಂದು ಅಫ್ಘಾನ್‌ ಅಧಿಕಾರಿಗಳು ಹೇಳಿದ್ದಾರೆ. ದೇಶದಲ್ಲಿ ಇದ್ದ ಏಕೈಕ ಇರಾನಿಯನ್‌ ವಿಮಾನ ಅದಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಎರಡು ಬದಿಗಳನ್ನೂ ಸಮತೋಲನದಲ್ಲಿಡಲು ಯತ್ನಿಸುತ್ತಿದ್ದು, ಅಮೆರಿಕದ ಎದುರು ತಾನು ಸ್ಥಿರತೆ ತರುವ ಮಧ್ಯವರ್ತಿಯಂತೆ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದರೆ, ಮತ್ತೊಂದೆಡೆ ಇರಾನ್‌ ಅಥವಾ ಚೀನಾವನ್ನು ದೂರ ಮಾಡುವಂತಹ ಕ್ರಮಗಳಿಂದ ದೂರ ಉಳಿದಿದೆ ಎಂದು ವರದಿ ವಿಶ್ಲೇಷಿಸಿದೆ.

RELATED ARTICLES

Latest News