ಕೋಲ್ಕತ್ತಾ, ಜೂ.21- ವಿಶ್ವಾದಾದ್ಯಂತ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿನಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾವವಹಿಸಿ ಗಮನ ಸೆಳೆದರು. ಸಾವಿರಾರು ಮಂದಿ ಅವರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಪ್ರಧಾನಿ ಮೋದಿ, ಸಾವಿರಾರು ಯೋಗ ಸಾಧಕರೊಂದಿಗೆ ವಿವಿಧ ಯೋಗಾಸನಗಳನ್ನು ಮಾಡಿದರು. ಒಂದು ಕಡೆ ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯ ಕಚೇರಿ ಹಾಗೂ ಇನ್ನೊಂದು ಕಡೆ ವಿಶಾಲವಾದ ಮೈದಾನ ಪ್ರದೇಶವಿರುವ ರೆಡ್ ರೋಡ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವರ್ಷದ ಯೋಗ ದಿನಾಚರಣೆಯ ಧ್ಯೇಯವಾಕ್ಯ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಆಗಿದೆ. ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ, ಭಾವನಾತ್ಮಕ ಸ್ಥಿರತೆ ಹಾಗೂ ಸಕ್ರಿಯ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಈ ವಿಷಯವಸ್ತು ಒತ್ತಿಹೇಳುತ್ತದೆ. ವಿಶ್ವದಾದ್ಯಂತ ಸುಮಾರು 2,500 ಸ್ಥಳಗಳಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 210ಕ್ಕೂ ಹೆಚ್ಚು ಭಾರತೀಯ ರಾಯಭಾರ ಕಚೇರಿಗಳು ಹಾಗೂ ವಿದೇಶಿ ನಿಯೋಗಗಳು ಇದರಲ್ಲಿ ಭಾಗವಹಿಸುತ್ತಿವೆ. ಇದರಿಂದ ಯೋಗವು ಆರೋಗ್ಯ, ಸಾಮರಸ್ಯ ಮತ್ತು ಸಮೂಹ ಕಲ್ಯಾಣಕ್ಕಾಗಿ ಜಾಗತಿಕ ಚಳವಳಿಯಾಗಿ ಬೆಳೆದಿರುವುದು ಮತ್ತೊಮ್ಮೆ ದೃಢಪಟ್ಟಿದೆ.
ಭಾರತದ ಪ್ರಸ್ತಾವನೆಯನ್ನುವಿಶ್ವಸಂಸೆ ಅಂಗೀಕರಿಸಿದ ಬಳಿಕ 2015ರಿಂದ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿದೆ. ಅಂದಿನಿಂದ ಪ್ರತಿವರ್ಷ ಪ್ರಧಾನಿ ಮೋದಿ ದೇಶ ಮತ್ತು ವಿದೇಶಗಳ ವಿವಿಧ ಸ್ಥಳಗಳಿಂದ ಯೋಗ ದಿನಾಚರಣೆಗೆ ನೇತೃತ್ವ ನೀಡುತ್ತಿದ್ದಾರೆ.
