Homeಇದೀಗ ಬಂದ ಸುದ್ದಿವರ್ತಮಾನ ಜಗತ್ತಿನ ಸ್ವಾಸ್ಥ್ಯ, ನೆಮ್ಮದಿಗೆ ಯೋಗ ಸೂಕ್ತ ಮಾರ್ಗ : ಹೆಚ್‌ಡಿಕೆ

ವರ್ತಮಾನ ಜಗತ್ತಿನ ಸ್ವಾಸ್ಥ್ಯ, ನೆಮ್ಮದಿಗೆ ಯೋಗ ಸೂಕ್ತ ಮಾರ್ಗ : ಹೆಚ್‌ಡಿಕೆ

ಬೆಂಗಳೂರು, ಜೂ.21-ವರ್ತಮಾನ ಜಗತ್ತಿನ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಇರುವ ಏಕೈಕ ಮಾರ್ಗವೆಂದರೆ ಯೋಗ ಒಂದೇ ಆಗಿದೆ ಎಂದಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು, ಸರ್ವರಿಗೂ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಸಂಬಂಧ X ನಲ್ಲಿ ಪೋಸ್ಟ್‌ ಮಾಡಿರುವ ಅವರು, ದೈಹಿಕ ಆರೋಗ್ಯ ಮತ್ತು ಮಾನಸಿಕ ಶಾಂತಿ ನೀಡುವ ಯೋಗವು ಪ್ರಾಚೀನ ಭಾರತದ ಶ್ರೇಷ್ಠ ಕೊಡುಗೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಹಾಗೂ ಅವರ ಅವಿರತ ಶ್ರಮದಿಂದ ಯೋಗಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ದೇಶ ವಿದೇಶಗಳಲ್ಲಿ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ವಿಶ್ವಸಂಸ್ಥೆಯು 2014 ಜೂನ್‌ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿದ್ದು, ಇದು ಭಾರತೀಯ ಪ್ರಾಚೀನ ಪರಂಪರೆಗೆ ದೊರೆತ ಮಹತ್ತರ ಜಾಗತಿಕ ಮನ್ನಣೆ ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಅವರು ಶ್ಲಾಘಿಸಿದ್ದಾರೆ.

ನಾವೆಲ್ಲರೂ ಯೋಗವನ್ನು ನಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳೋಣ. ಆರೋಗ್ಯಕರ ದೇಹ, ಶಾಂತ ಮನಸ್ಸುಹೊಂದುವುದಕ್ಕೆ ಯೋಗವನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳಲು ದೃಢ ನಿರ್ಧಾರ ಮಾಡೋಣ ಎಂದಿದ್ದಾರೆ.

Union Minister HDKumaraswamy Yoga Day celebrations

RELATED ARTICLES
spot_img

Latest News