Homeರಾಜ್ಯಬೇಲೂರು ತಾಲ್ಲೂಕಿನಲ್ಲಿ ಬೀಡುಬಿಟ್ಟ 25 ಕಾಡಾನೆಗಳು

ಬೇಲೂರು ತಾಲ್ಲೂಕಿನಲ್ಲಿ ಬೀಡುಬಿಟ್ಟ 25 ಕಾಡಾನೆಗಳು

ಬೇಲೂರು, ಜೂ.21- ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಕಡೇಗರ್ಜೆ ಗ್ರಾಮದಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೇಲೂರು-ಸಕಲೇಶಪುರ ರಾಜ್ಯ ಹೆದ್ದಾರಿ ರಸ್ತೆ ದಾಟುತ್ತಿದ್ದ ದೃಶ್ಯ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕಿನ ಮಲೆನಾಡು ಭಾಗದ ತೋಟ, ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಆದರೆ ಒಂದೇ ಬಾರಿಗೆ 25ಕ್ಕೂ ಹೆಚ್ಚು ಕಾಡಾನೆಗಳು ಸಮೀಪದ ಅರಣ್ಯ ಪ್ರದೇಶದಿಂದ ಮುಖ್ಯರಸ್ತೆ ಮೂಲಕವೇ ರಸ್ತೆ ದಾಟಿ ಮತ್ತೊಂದು ಭಾಗಕ್ಕೆ ಸಾಗುತ್ತಿರುವುದನ್ನು ಸಾರ್ವಜನಿಕರು ಗಮನಿಸಿ ವಾಹನಗಳನ್ನು ಕೆಲ ಸಮಯ ದೂರದಲ್ಲೇ ನಿಲ್ಲಿಸಿದ್ದಾರೆ. ಕಾಡಾನೆಗಳು ಒಂದರ ಹಿಂದೆ ಒಂದರಂತೆ ರಸ್ತೆ ದಾಟಿದ್ದು ನೋಡುಗರ ಮೈ ಜುಮೆನಿಸುತಿತ್ತು.

ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ ಬೆಳೆ ಹಾಗೂ ಆಸ್ತಿಪಾಸ್ತಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುತಿದ್ದಾರೆ. ಮಳೆಗಾಲದಲ್ಲಿ ಬೆಳೆ ಬೆಳೆಯಲು ರೈತರು, ಬೆಳೆಗಾರರು ಜಮೀನು, ತೋಟಗಳಿಗೆ ತೆರಳಬೇಕು. ಆದರೆ ಕಾಡಾನೆಗಳ ಹಾವಳಿಯಿಂದ ಜಮೀನುಗಳನ್ನು ಹಳು ಬಿಡುವಂತ್ತಾಗಿದೆಯಲ್ಲದೆ, ಬೆಳೆ ನಷ್ಟ ಅನುಭವಿಸುವಂತ್ತಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಕಾಡಾನೆಗಳನ್ನು ದೂರದ ಕಾಡಿಗಟ್ಟಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
spot_img

Latest News