ನಿತ್ಯ ನೀತಿ : ನಂಬಿಕೆ ಅನ್ನೋ ಪದ ತುಂಬಾನೇ ಪವಿತ್ರವಾದದ್ದು, ಅದನ್ನೂ ಗೌರವದಿಂದ ಉಳಿಸಿಕೊಳ್ಳಿ. ನಿಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬೇಡಿ.
ಪಂಚಾಂಗ : ಶುಕ್ರವಾರ, 19-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ನಿಜ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಆಶ್ಲೇಷಾ / ಯೋಗ: ರ್ಷಣ / ಕರಣ: ಕೌಲವ
ಸೂರ್ಯೋದಯ : ಬೆ.5.55
ಸೂರ್ಯಾಸ್ತ : 06.48
ರಾಹುಕಾಲ : 10.30-12.00
ಯಮಗಂಡ ಕಾಲ : 3.00- 4.30
ಗುಳಿಕ ಕಾಲ : 7.30-9.00
ರಾಶಿ ಭವಿಷ್ಯ
ಮೇಷ: ಸ್ತ್ರೀಯರಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಎಚ್ಚರಿಕೆಯಿಂದಿರಿ.
ವೃಷಭ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ.
ಮಿಥುನ: ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಕಟಕ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಸಿಂಹ: ಸಮಸ್ಯೆಗಳಿಗೆ ಶಾಂತಿ ಮತ್ತು ಸಭ್ಯತೆ ಯಿಂದ ಪರಿಹಾರ ಕಂಡುಕೊಳ್ಳುವುದು ಒಳಿತು.
ಕನ್ಯಾ: ವೃತ್ತಿ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ.
ತುಲಾ: ಹೊಸ ಜನರನ್ನು ಭೇಟಿ ಮಾಡು ವುದರಿಂದ ಹೆಚ್ಚು ಪ್ರಯೋಜನವಾಗಲಿದೆ.
ವೃಶ್ಚಿಕ: ಅದೃಷ್ಟವು ನಿಮ್ಮ ಕಡೆಗಿರುತ್ತದೆ. ಗುರು-ಹಿರಿಯರ ಆಶರ್ವಾದ ಪಡೆಯಿರಿ.
ಧನುಸ್ಸು: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.
ಮಕರ: ಪ್ರಮುಖ ನರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆದುಕೊಳ್ಳಿ.
ಕುಂಭ: ಸರ್ಕಾರಿ ನೌಕರರಿಗೆ, ಕೃಷಿಕರಿಗೆ ಅನುಕೂಲಕರವಾದ ದಿನ.
ಮೀನ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.
