ನಿತ್ಯ ನೀತಿ : ಜನರ ದೃಷ್ಟಿಯಲ್ಲಿ ಒಳ್ಳೆಯವನಾಗಿ ಕಾಣುವ ಆಸೆಯನ್ನು ನೀನು ಕೈಬಿಟ್ಟ ದಿನ, ನೀನು ನಿಜವಾಗಿಯೂ ಸ್ವತಂತ್ರನಾಗುತ್ತೀಯ..!!
ಪಂಚಾಂಗ : ಶನಿವಾರ, 23-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ಅಷ್ಟಮಿ / ನಕ್ಷತ್ರ: ಮಘಾ / ಯೋಗ: ಧ್ರುವ / ಕರಣ: ವಿಷ್ಟಿ
ಸೂರ್ಯೋದಯ : ಬೆ.5.54
ಸೂರ್ಯಾಸ್ತ : 06.40
ರಾಹುಕಾಲ : 10.30-12.00
ಯಮಗಂಡ ಕಾಲ : 3.00- 4.30
ಗುಳಿಕ ಕಾಲ : 7.30-9.00
ರಾಶಿ ಭವಿಷ್ಯ
ಮೇಷ: ಅಣ್ಣ-ತಂಗಿಯರಲ್ಲಿ ಒಬ್ಬರು ನಿಮ್ಮಿಂದ ಹಣದ ಸಹಾಯ ಕೇಳುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಷಭ: ಸ್ನೇಹಿತರಿಂದ ನಿರೀಕ್ಷಿತ ಸಹಕಾರ ಸಿಗುವುದಿಲ್ಲ. ಮಾತಿಗೆ ಮಾತು ಬೆಳೆಸಬೇಡಿ.
ಮಿಥುನ: ನಿಮ್ಮ ಅಹಂಕಾರದಿಂದಾಗಿ ಹಣಕಾಸು ನಷ್ಟ ಅನುಭವಿಸಲಿದ್ದೀರಿ. ಸಾಲಗಾರರ ಒತ್ತಡ ಹೆಚ್ಚಾಗಲಿದೆ.
ಕಟಕ: ಹಲವಾರು ವಿಷಯ ಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಸಿಂಹ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ.
ಕನ್ಯಾ: ಪ್ರೇಮ ವ್ಯವಹಾರಗಳಿಗೆ ಸಂಬಂ ಸಿ ದಂತೆ ಉತ್ತಮ ದಿನ.
ತುಲಾ: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ವೃಶ್ಚಿಕ: ರಿಯಲ್ ಎಸ್ಟೇಟ್‌ಗೆ ಸಂಬಂ ಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಿಗಲಿದೆ.
ಧನುಸ್ಸು: ಮನೆಯ ಎಲ್ಲ ಸದಸ್ಯರೊಂದಿಗೆ ಸಂಯಮದಿಂದ ಕಾಲ ಕಳೆಯಲು ಪ್ರಯತ್ನಿಸುವಿರಿ.
ಮಕರ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಕುಂಭ: ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿ ಹಾಗೂ ಉಳಿತಾಯದತ್ತ ಗಮನ ಹರಿಸಿ.
ಮೀನ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಯಿದೆ
