Homeರಾಷ್ಟ್ರೀಯಪಟಾಕಿ ಪರವಾನಗಿಗೆ 35 ಲಕ್ಷ ಲಂಚದ ಆರೋಪ :ಟಿವಿಕೆ-ಡಿಎಂಕೆ ನಡುವೆ ವಾಗ್ವಾದ

ಪಟಾಕಿ ಪರವಾನಗಿಗೆ 35 ಲಕ್ಷ ಲಂಚದ ಆರೋಪ :ಟಿವಿಕೆ-ಡಿಎಂಕೆ ನಡುವೆ ವಾಗ್ವಾದ

ಚೆನ್ನೈ,ಆ.2- ತಮಿಳುನಾಡಿನಲ್ಲಿ ಪಟಾಕಿ ಉತ್ಪಾದನಾ ಘಟಕಗಳ ಪರವಾನಗಿ ಮತ್ತು ನವೀಕರಣ ಪ್ರಕ್ರಿಯೆಯು ಆಡಳಿತಾರೂಢ ಟಿವಿಕೆ ಮತ್ತು ಪ್ರತಿಪಕ್ಷ ಡಿಎಂಕೆ ನಡುವೆ ತೀವ್ರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಹಿಂದಿನ ಡಿಎಂಕೆ ಸರ್ಕಾರಿ ಆಡಳಿತದ ಅವಧಿಯಲ್ಲಿ ಪಟಾಕಿ ಉತ್ಪಾದನಾ ಘಟಕಗಳ ಒಂದೇ ಒಂದು ಪರವಾನಗಿ ನೀಡಲು 3 ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಲಂಚ ಪಡೆಯಲಾಗುತ್ತಿತ್ತು ಎಂದು ಕೈಗಾರಿಕಾ ಸಚಿವೆ ಸೆಲ್ವಿ ಎಸ್‌‍ ಕೀರ್ತನಾ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಸ್ತುತ ಟಿವಿಕೆ ಸರ್ಕಾರದ ಅಡಿಯಲ್ಲಿ 177 ಪಟಾಕಿ ಕಾರ್ಖಾನೆಗಳಿಗೆ ಯಾವುದೇ ಹಣ ಪಡೆಯದೇ ಪರವಾನಗಿಗಳನ್ನು ಯಶಸ್ವಿಯಾಗಿ ನವೀಕರಿಸಿ ಕೊಡಲಾಗಿದೆ. ಉದ್ಯಮದ ಐದು ಮಾಲೀಕರ ಸಂಘಗಳು ಈ ಪಾರದರ್ಶಕ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿವೆ ಎಂದರು. ಸಚಿವರ ಹೇಳಿಕೆಯನ್ನು ತೀವ್ರವಾಗಿ ತಳ್ಳಿಹಾಕಿದ ಡಿಎಂಕೆ ನಾಯಕ ತಂಗಂ ತೆನ್ನರಸು, ಪ್ರಸ್ತುತ ಸರ್ಕಾರದ ಅವಧಿಯಲ್ಲೂ ಪರವಾನಗಿ ನವೀಕರಣ ಮತ್ತು ಅನುಮೋದನೆಗಳಿಗಾಗಿ ಲಂಚ ಪಡೆಯಲಾಗುತ್ತಿದೆ ಎಂದು ಪಟಾಕಿ ಉದ್ಯಮದ ಸಂಘಗಳು ತಮ್ಮ ಬಳಿ ಆರೋಪಿಸಿವೆ ಎಂದು ತಿರುಗೇಟು ನೀಡಿದರು.

ಡಿಎಂಕೆಯ ಪ್ರತಿ-ಆರೋಪಗಳಿಗೆ ಉತ್ತರಿಸಿದ ಸಚಿವೆ ಕೀರ್ತನಾ, ಲಂಚದ ಕುರಿತಾದ ಹೇಳಿಕೆಯು ತಾವಾಗಿಯೇ ಹುಟ್ಟುಹಾಕಿದ್ದಲ್ಲದೆ, ಸಂಘದ ಸದಸ್ಯರೊಬ್ಬರು ತಮಗೆ ಇಮೇಲ್‌ ಮೂಲಕ ಕಳುಹಿಸಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿದೆ ಎಂದು ತಿಳಿಸಿ ಸದನದಲ್ಲಿ ದಾಖಲೆ ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದರು.

ತಂಗಮ್‌ ತೆನ್ನರಸು ಪ್ರತಿದಾಳಿ
ಡಿಎಂಕೆ ನಾಯಕ ಹಾಗೂ ಮಾಜಿ ಸಚಿವ ತಂಗಮ್‌ ತೆನ್ನರಸು, ಕೀರ್ತನಾ ಅವರ ಆರೋಪಕ್ಕೆ ಪ್ರತಿಯಾಗಿ ಪ್ರಸ್ತುತ ಸರ್ಕಾರದ ವಿರುದ್ಧವೇ ಪ್ರಶ್ನೆ ಎತ್ತಿದರು. ಪಟಾಕಿ ಕಾರ್ಖಾನೆಗಳ ಪರವಾನಗಿ ನವೀಕರಣಕ್ಕಾಗಿ ಸಂಘಗಳ ಸದಸ್ಯರಿಂದ ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ತಮ ಗಮನಕ್ಕೆ ಬಂದಿವೆ ಎಂದು ಅವರು ಹೇಳಿದರು. ಱಱಹಿಂದಿನ ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ನವೀಕರಣ ಪ್ರಕ್ರಿಯೆಯನ್ನೂ ಪರಿಶೀಲಿಸಬೇಕಲ್ಲವೇ ಎಂಬ ರೀತಿಯಲ್ಲಿ ಅವರು ಸಚಿವೆಯನ್ನು ಪ್ರಶ್ನಿಸಿದರು.

ಆಗ ಕೀರ್ತನಾ ಅವರು, ತಾವು ಸ್ವತಃ ಲಂಚ ಪಡೆದಿದ್ದಾರೆ ಎಂದು ಹೇಳಿಲ್ಲ. ಈ ಆರೋಪವನ್ನು ಸಂಘದ ಸದಸ್ಯರು ತಮ ಬಳಿ ಪ್ರಸ್ತಾಪಿಸಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇ-ಮೇಲ್‌ ಮೂಲಕ ಕಳುಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

177 ಕಾರ್ಖಾನೆಗಳ ಪರಿಶೀಲನೆ ಏಕೆ?
ಪ್ರಸ್ತುತ ಲಂಚದ ಆರೋಪಗಳ ಹಿಂದೆ ಮತ್ತೊಂದು ಪ್ರಮುಖ ಹಿನ್ನೆಲೆ ಇದೆ ಸಿವಕಾಸಿ ಮತ್ತು ಸುತ್ತಮುತ್ತಲಿನ ಪಟಾಕಿ ಕಾರ್ಖಾನೆಗಳ ಸುರಕ್ಷತಾ ಪರಿಶೀಲನೆ. 2026ರ ಆರಂಭದಿಂದ ಜುಲೈ 13ರವರೆಗೆ ನಡೆಸಿದ ತಪಾಸಣೆಗಳಲ್ಲಿ 177 ಪಟಾಕಿ ಘಟಕಗಳಲ್ಲಿ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಸರ್ಕಾರ ಹೇಳಿದೆ. ಸತತವಾಗಿ ನಡೆದ ಪಟಾಕಿ ಅವಘಡಗಳ ಹಿನ್ನೆಲೆಯಲ್ಲಿ ಪರಿಶೀಲನೆಗಳನ್ನು ತೀವ್ರಗೊಳಿಸಲಾಗಿತ್ತು ಎಂದು ಸಚಿವೆ ಕೀರ್ತನಾ ಸ್ಪಷ್ಟಪಡಿಸಿದ್ದಾರೆ. ನಂತರ ಹಲವು ಘಟಕಗಳು ತಮ ಲೋಪಗಳನ್ನು ಸರಿಪಡಿಸಿ ಮತ್ತೆ ಕಾರ್ಯನಿರ್ವಹಿಸಲು ಅನುಮತಿ ಪಡೆದಿವೆ.

ಆದರೆ ಈ ತಪಾಸಣೆಗಳ ಪರಿಣಾಮವಾಗಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ಘಟಕಗಳ ಉತ್ಪಾದನೆಯೂ ಅಸ್ತವ್ಯಸ್ತಗೊಂಡಿದೆ ಎಂದು ತೆನ್ನರಸು ಆರೋಪಿಸಿದ್ದರು. ವಿಶೇಷವಾಗಿ ದೀಪಾವಳಿ ಹಬ್ಬದ ಮುನ್ನ ಉತ್ಪಾದನೆಗೆ ಹೊಡೆತ ಬಿದ್ದಿದೆ ಎಂಬುದು ಉದ್ಯಮ ವಲಯದ ಪ್ರಮುಖ ಆತಂಕವಾಗಿದೆ. ಈ ರಾಜಕೀಯ ಜಟಾಪಟಿಯು ತಮಿಳುನಾಡು ಪಟಾಕಿ ಉದ್ಯಮದ ಪರವಾನಗಿ ವಿವಾದವನ್ನು ರಾಜ್ಯದ ಪ್ರಮುಖ ರಾಜಕೀಯ ಚರ್ಚೆಯನ್ನಾಗಿಸಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಪರಸ್ಪರ ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.

RELATED ARTICLES
spot_img

Latest News