Sunday, April 28, 2024
Homeಬೆಂಗಳೂರುಡಿವೈಡರ್‌ಗೆ ಬೈಕ್ ಡಿಕ್ಕಿ, ಗಾಲ್ಫ್ ಕೋಚ್ ನಿಧನ

ಡಿವೈಡರ್‌ಗೆ ಬೈಕ್ ಡಿಕ್ಕಿ, ಗಾಲ್ಫ್ ಕೋಚ್ ನಿಧನ

ಬೆಂಗಳೂರು,ಜ.22- ಸ್ನೇಹಿತರಿಬ್ಬರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ ಗಾಲ್ಫ್ ಕೋಚ್ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಬಿಡದಿ ನಿವಾಸಿ ಚಂದ್ರಶೇಖರ್(28) ಮೃತಪಟ್ಟ ಗಾಲ್ ಕೋಚ್. ಸ್ನೇಹಿತ ಕಿರಣ್ ಜೊತೆ ಚಂದ್ರಶೇಖರ್ ಅವರು ನಗರಕ್ಕೆ ಬಂದಿದ್ದು, ರಾತ್ರಿ 10.15ರ ಸುಮಾರಿನಲ್ಲಿ ವಾಪಸ್ ಬಿಡದಿಗೆ ಹೋಗುತ್ತಿದ್ದರು.

ಸುಮನಹಳ್ಳಿ ರಿಂಗ್‍ರಸ್ತೆಯ ಬಿಎಂಟಿಸಿ ಡಿಪೋಎದುರು ಬೈಕ್ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಚಂದ್ರಶೇಖರ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ದೇಹವನ್ನು ಇಡಲಾಗಿದೆ.

ಸ್ನೇಹಿತ ಕಿರಣ್ ಅವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸ್ನೇಹಿತರ ಭೇಟಿಗೆ ತೆರಳಿದ್ದ ಗೆಳೆಯ ಅಪಘಾತದಲ್ಲಿ ಸಾವು
ಬೆಂಗಳೂರು,ಜ.22- ಸ್ನೇಹಿತರನ್ನು ಭೇಟಿ ಮಾಡಿ ಬೈಕ್‍ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಯಾವುದೋ ವಾಹನ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬ್ಯಾಂಕ್ ಉದ್ಯೋಗಿ ಮೇಲೆ ಹರಿದು ಪರಿಣಾಮ ಅವರು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಬುಸಾಬ್ ಪಾಳ್ಯ ನಿವಾಸಿ ಮೋನಿಶ್(27) ಮೃತಪಟ್ಟ ಖಾಸಗಿ ಕಂಪನಿ ಬ್ಯಾಂಕ್ ಉದ್ಯೋಗಿ ಹಾಗೂ ಫುಟ್ಬಾಲ್ ಆಟಗಾರ.

ಮೋನಿಶ್ ಅವರು ಮೊನ್ನೆ ಸಂಜೆ 7 ಗಂಟೆ ಸುಮಾರಿನಲ್ಲಿ ಸ್ನೇಹಿತರನ್ನು ಭೇಟಿ ಮಾಡಿ ಬರುತ್ತೇನೆಂದು ಮನೆಯಲ್ಲಿ ಹೇಳಿ ತನ್ನ ಪಲ್ಸರ್ ಬೈಕ್ ತೆಗೆದುಕೊಂಡು ಹೊರಗೆ ಹೋಗಿದ್ದಾರೆ. ರಾತ್ರಿ 11 ಗಂಟೆಯಾದರೂ ಮೋನಿಶ್ ಅವರು ಮನೆಗೆ ಹಿಂದಿರುಗದಿದ್ದಾಗ ಅವರ ತಾಯಿ ಮೊಬೈಲ್‍ಗೆ ಕರೆ ಮಾಡಿ ವಿಚಾರಿಸಿದಾಗ ಜೀವನಹಳ್ಳಿ ಕಡೆ ಸ್ನೇಹಿತರ ಜೊತೆ ಇದ್ದು ಕೆಲ ಸಮಯದ ಬಳಿಕ ಬರುತ್ತೇನೆಂದು ಹೇಳಿದ್ದಾರೆ.

ನಿನ್ನೆ ಬೆಳಗಿ ಜಾವ 2.30ರ ಸುಮಾರಿನಲ್ಲಿ ಮೋನಿಶ್ ಅವರು ಟಿನ್ ಫ್ಯಾಕ್ಟರಿ ಕಡೆಯಿಂದ ಚನ್ನಸಂದ್ರ ಸ್ಕೈವಾಕ್ ಮೂಲಕ ಬೈಕ್‍ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅದೇ ಸಮಯದಲ್ಲಿ ಎದುರಿನಿಂದ ಅತಿವೇಗವಾಗಿ ಬಂದ ಯಾವುದೋ ವಾಹನ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಮೋನಿಶ್ ಅವರ ಕಾಲುಗಳ ಮೇಲೆಯೇ ವಾಹನದ ಚಕ್ರಗಳು ಹರಿದ ಪರಿಣಾಮ ಗಂಭೀರ ಗಾಯಗೊಂಡರು.

ರಾಮಲಲ್ಲಾ ಕಾರ್ಯಕ್ರಮ ನೇರ ಪ್ರಸಾರಕ್ಕೆ ತಮಿಳುನಾಡಿನಲ್ಲಿ ಕಿಡಿಗೇಡಿಗಳಿಂದ ಅಡ್ಡಿ

ಅಪಘಾತವೆಸಗಿದ ವಾಹನದ ಚಾಲಕ ವಾಹನ ನಿಲ್ಲಸದೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಇತ್ತ ಗಂಭೀರ ಗಾಯಗೊಂಡಿದ್ದ ಮೋನಿಶ್ ಅವರನ್ನು ಸಾರ್ವಜನಿಕರ ಸಹಾಯದಿಂದ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ನಂತರ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಮೋನಿಶ್ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೆ.ಆರ್‍ಪುರಂ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತ ವೆಸಗಿ ಹೋಗಿರುವ ವಾಹನ ಹಾಗೂ ಚಾಲಕನ ಪತ್ತೆಗೆ ಅಪಘಾತ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಮೋನಿಶ್ ಅವರ ಮೃತದೇಹವನ್ನು ಮರಣೋತ್ತ ಪರೀಕ್ಷೆ ನಡೆಸಿ ವಾರುಸುದಾರರಿಗೆ ಹಸ್ತಾಂತರಿಸಲಾಗಿದೆ.

RELATED ARTICLES

Latest News