Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-07-2026)

Today's Horoscope

ನಿತ್ಯ ನೀತಿ : ಬದುಕು ನಾಣ್ಯವಿದ್ದಂತೆ ಅದಕ್ಕೆ ಸಂತೋಷ ಹಾಗೂ ದುಃಖ ಎರಡು ಮುಖಗಳು. ಒಂದು ಸಲಕ್ಕೆ ಒಂದೇ ಮುಖ ಕಾಣುತ್ತದೆ.

ಪಂಚಾಂಗ : ಬುಧವಾರ, 01-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಪ್ರತಿಪದಾ / ನಕ್ಷತ್ರ: ಪೂ.ಷಾ./ ಯೋಗ: ಐಂದ್ರ / ಕರಣ: ತೈತಿಲ
ಸೂರ್ಯೋದಯ – ಬೆ.5.57
ಸೂರ್ಯಾಸ್ತ- 06.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳ ಬಹುದು. ಆದ್ದರಿಂದ ಜಾಗ್ರತೆಯಿಂದಿರಿ.
ವೃಷಭ: ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ.
ಮಿಥುನ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ. ಓದಿನ ಬಗ್ಗೆ ಕಾಳಜಿ ಇರಲಿ.

ಕಟಕ: ಕಾರ್ಯ ಸಾಮರ್ಥ್ಯವನ್ನು ಅರ್ಥಮಾಡಿ ಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ಸಿಂಹ: ಹಣದ ವಿಷಯದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ.

ತುಲಾ: ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಡಿ.
ವೃಶ್ಚಿಕ: ಉನ್ನತ ಮಟ್ಟದಲ್ಲಿ ಕಾರ್ಯನಿರ್ವ ಹಿಸುವವರಿಗೆ ಜನಸಾಮಾನ್ಯರಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ.
ಧನುಸ್ಸು: ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕಾಗಬಹುದು.

ಮಕರ: ಬಂಧುಗಳಿಂದ ಸಮಸ್ಯೆ ಎದುರಾಗಲಿದೆ. ಹಿತಶತ್ರುಗಳ ಕಾಟ ಹೆಚ್ಚಾಗಲಿದೆ.
ಕುಂಭ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಮೀನ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.

RELATED ARTICLES

Latest News