ನಿತ್ಯ ನೀತಿ : ಹಿತೈಷಿಗಳು ಪಾಂಡವರನ್ನು ಕಾಪಾಡಿದ ಶ್ರೀಕೃಷ್ಣನಂತೆ, ಜೀವನ ಸಾರ್ಥಕಕ್ಕೆ ಆಧಾರವಾಗುತ್ತಾರೆ. ಹಿತಶತ್ರುಗಳು ಕೌರವರನ್ನು ಕಾಡಿದ ಶಕುನಿಯಂತೆ ಬದುಕಿನಲ್ಲಿ ಹಿನ್ನಡೆಗೆ ಕಾರಣರಾಗುತ್ತಾರೆ.
ಪಂಚಾಂಗ : ಶನಿವಾರ, 03-10-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಆರ್ದ್ರಾ / ಯೋಗ: ಪರೀಯಾನ / ಕರಣ: ಬಾಲವ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.10
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ವಿರೋ ಗಳಿಂದ ತೊಂದರೆಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ವೃಷಭ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬರುವುದು ಒಳಿತು.
ಮಿಥುನ: ಮಹಿಳೆಯರಿಗೆ ಅನುಕೂಲಕರ ದಿನ. ಕುಲದೇವರ ದರ್ಶನ ಮಾಡುವಿರಿ.
ಕಟಕ: ಹಂತ ಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.
ಸಿಂಹ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.
ಕನ್ಯಾ: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.
ತುಲಾ: ಮನಸ್ಸಿನಲ್ಲಿ ಗೊಂದಲ ಉಂಟಾಗಲಿದೆ. ದುಶ್ಚಟಗಳಿಂದ ದೂರವಿರಿ.
ವೃಶ್ಚಿಕ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.
ಧನುಸ್ಸು: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.
ಮಕರ: ಹೊಸ ಜವಾಬ್ದಾರಿ ಹೊರುವ ಸಂದರ್ಭಗಳು ಎದುರಾಗಬಹುದು.
ಕುಂಭ: ಮಾತಿನಲ್ಲಿ ಹಿಡಿತವಿರಲಿ. ಅನಗತ್ಯ ವಿಷಯಗಳಿಗೆ ತಲೆ ಹಾಕದಿರಿ.
ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
