ನಿತ್ಯ ನೀತಿ : ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ.
ಪಂಚಾಂಗ : ಬುಧವಾರ, 06-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ:ವೈಶಾಖ / ಪಕ್ಷ:ಕೃಷ್ಣ / ತಿಥಿ: ಚತುರ್ಥಿ / ನಕ್ಷತ್ರ: ಮೂಲಾ / ಕರಣ: ಕೌಲವ
ಸೂರ್ಯೋದಯ – ಬೆ.5.58
ಸೂರ್ಯಾಸ್ತ – 06.36
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ವೃಷಭ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಮಿಥುನ: ನೆರೆಹೊರೆಯವರ ಭಾವನೆಗಳಿಗೆ ಸ್ಪಂದಿಸುವುದರಿಂದ ಅವರಿಗೆ ಸಂತಸ ಉಂಟುಮಾಡುವಿರಿ.
ಕಟಕ: ನೆಂಟರಿಷ್ಟರೊಂದಿಗೆ ವಿನಾಕಾರಣ ನಿಷ್ಠೂರ ಮಾಡಿಕೊಳ್ಳದಿರಿ.
ಸಿಂಹ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸ್ನೇಹಿತರಿಗೆ ಸಹಾಯ ಮಾಡುವಿರಿ.
ಕನ್ಯಾ: ಅತಿಯಾದ ಒಳ್ಳೆಯತನ, ಬೇಜವಾಬ್ದಾರಿತನದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ.
ತುಲಾ: ಕೆಲಸದಲ್ಲಿ ಜಾಗ್ರತೆ ವಹಿಸಿ. ದುಷ್ಟ ಜನರ ಸಹವಾಸದಿಂದ ದೂರವಿರುವುದು ಒಳಿತು.
ವೃಶ್ಚಿಕ: ಧನಾತ್ಮಕ ಚಿಂತನೆಗಳಿಂದ ಯಶಸ್ಸು ಸಾ ಸುವಿರಿ. ಶುಭಕರವಾದ ದಿನವಾಗಿದೆ.
ಧನುಸ್ಸು: ಬರುವ ಅವಕಾಶಗಳನ್ನು ಸದುಪ ಯೋಗಪಡಿಸಿಕೊಳ್ಳಿ. ಸುಖ ಭೋಜನ ಮಾಡುವಿರಿ.
ಮಕರ: ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು. ಸಮಸ್ಯೆ ಸರಿದೂಗಿಸಿಕೊಂಡು ಮುಂದೆ ಹೆಜ್ಜೆ ಇಡಿ.
ಕುಂಭ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಮೀನ: ಉನ್ನತ ಸ್ಥಾನಮಾನ ದೊರೆಯಲಿದೆ. ನಿಮ್ಮ ಕನಸು ನನಸಾಗಲಿದೆ. ಆತ್ಮೀಯರ ಸಹಾಯ ಸಿಗಲಿದೆ.
