ನಿತ್ಯ ನೀತಿ : ನದಿಯ ದಡ ಸೇರಲು ನಾವಿಕ ಕಾರಣ. ದೇವರ ಹೃದಯ ಸೇರಲು ಭಕ್ತಿಯ ಶಕ್ತಿಯೇ ಕಾರಣ.
ಪಂಚಾಂಗ : 14-02-2026, ಶನಿವಾರ
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಪೂ.ಷಾ. / ಯೋಗ: ಸಿದ್ಧಿ / ಕರಣ: ಗರಜ
ಸೂರ್ಯೋದಯ – 06.44
ಸೂರ್ಯಾಸ್ತ – 6.26
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಯಂತ್ರೋಪಕರಣಗಳಿಂದ ತೊಂದರೆ ಆಗಬಹುದು. ಹುಷಾರಾಗಿರಿ.
ವೃಷಭ: ದಾಂಪತ್ಯದಲ್ಲಿ ಸಮಸ್ಯೆಗಳು ತಲೆದೋರಬಹುದು. ಉದ್ದಿಮೆದಾರರಿಗೆ ನಷ್ಟ.
ಮಿಥುನ: ದಾಯಾದಿ ಕಲಹವಾಗಬಹುದು. ಪ್ರಯಾಣ ಮಾಡದಿರುವುದು ಒಳ್ಳೆಯದು.
ಕಟಕ: ಆಹಾರದಲ್ಲಾಗುವ ವ್ಯತ್ಯಾಸದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಸಿಂಹ: ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆ ಗಮನ ಹರಿಸುವರು. ಶಾಂತಿ, ಸಮಾಧಾನ ಅಗತ್ಯ.
ಕನ್ಯಾ: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಆದಾಯ ಬರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಲಾಭ.
ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ವೃಶ್ಚಿಕ: ತರಕಾರಿ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಸಾಲದ ಬಗ್ಗೆ ಎಚ್ಚರವಿರಲಿ.
ಧನುಸ್ಸು: ಸರ್ಕಾರಿ ನೌಕರರಿಗೆ ಉತ್ತಮ ದಿನ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾರ್ಜನೆಗೆ ಗಮನ ಹರಿಸಿ.
ಮಕರ: ಮಕ್ಕಳಿಂದ ನೋವುಂಟಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ.
ಕುಂಭ: ಅನಾರೋಗ್ಯದಿಂದ ಬಳಲುತ್ತಿದ್ದ ನಿಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಮೀನ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುವುದರಿಂದ ಮನಸ್ಸಿಗೆ ಸಂತಸವಾಗಲಿದೆ.
