ನಿತ್ಯ ನೀತಿ : ದೊಡ್ಡ ದೊಡ್ಡ ಅವಕಾಶಗಳಿಗೆ ಕಾದು ಬಂದ ಸಣ್ಣ ಅವಕಾಶಗಳನ್ನು ಅಲಕ್ಷಿಸುವುದು ಸರಿಯಲ್ಲ. ಅವುಗಳನ್ನೇ ಬಳಸಿ ಬೆಳೆಸಿಕೊಳ್ಳುವತ್ತ ಗಮನ ಹರಿಸೋಣ.
ಪಂಚಾಂಗ : ಶನಿವಾರ, 21-03-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಅಶ್ವಿನಿ / ಯೋಗ: ಐಂದ್ರ / ಕರಣ: ತೈತಿಲ ಸೂರ್ಯೋದಯ – 06.25
ಸೂರ್ಯಾಸ್ತ – 6.31
ರಾಹುಕಾಲ – 9.00-10.30
ಯಮಗಂಡ ಕಾಲ – 1.30- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಅಲ್ಪ ಗಳಿಕೆ, ಅವಸರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ.
ವೃಷಭ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ.
ಮಿಥುನ: ಅಧಿಕಾರಿಗಳಿಂದ ತೊಂದರೆ, ಸಾಲ ಮಾಡುವ ಸಾಧ್ಯತೆ, ಶರೀರದಲ್ಲಿ ತಳಮಳ.
ಕಟಕ:ಮಕ್ಕಳಿಂದ ನೆಮದಿ, ಪ್ರಭಾವಿ ವ್ಯಕ್ತಿಗಳ ಭೇಟಿ.
ಸಿಂಹ: ಸ್ವಂತ ಉದ್ಯಮಿಗಳಿಗೆ ಅಲ್ಪ ಲಾಭ,ವಾಹನ ಯೋಗ.
ಕನ್ಯಾ:ವಿನಾಕಾರಣ ದ್ವೇಷ, ಅಕಾಲ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.
ತುಲಾ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ದೂರ ಪ್ರಯಾಣ.
ವೃಶ್ಚಿಕ: ಸಣ್ಣ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳಲ್ಲಿ ಗೊಂದಲ.
ಧನುಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಮಹತ್ತರ ಕೆಲಸ ಪೂರ್ಣ.
ಮಕರ: ಉದ್ಯೋಗದಲ್ಲಿ ಜವಾಬ್ದಾರಿ, ಮನೆಯಲ್ಲಿ ಶುಭ ಸಮಾರಂಭ, ವಾದ ವಿವಾದ, ವೃಥಾ ತಿರುಗಾಟ.
ಕುಂಭ: ಬೇಡದ ವಿಷಯಗಳಿಂದ ದೂರವಿರಿ, ನಿರೀಕ್ಷಿತ ಆದಾಯ.
ಮೀನ: ಪ್ರತಿಯೊಂದು ಕೆಲಸವನ್ನು ತಾಳೆಯಿಂದ ನಿಭಾಯಿಸಿ, ಮನ ಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
