ನಿತ್ಯ ನೀತಿ : ಜೀವನ ಕೆಟ್ಟರೆ ಯಾರೂ ಹತ್ತಿರಕ್ಕೆ ಬರಲ್ಲ , ಜೀವನ ಚೆನ್ನಾಗಿದ್ದರೆ ಕರೆಯದಿದ್ದರೂ ಎಲ್ಲರೂ ಹತ್ತಿರಕ್ಕೆ ಬರುತ್ತಾರೆ ಇಷ್ಟೇ ಮನುಷ್ಯನ ಗುಣ.
ಪಂಚಾಂಗ : ಗುರುವಾರ, 21-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ / ಮಾಸ: ಅಧಿಕ / ಜ್ಯೇಷ್ಠ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಪುಷ್ಯ / ಯೋಗ: ಗಂಡ / ಕರಣ: ಕೌಲವ ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.40
ರಾಹುಕಾಲ – 1.30-3.00
ಯಮಗಂಡ ಕಾಲ – 6.00- 7.30
ಗುಳಿಕ ಕಾಲ – 9.00- 10.30
ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು-ತೂಗಿ ಮುಂದಕ್ಕೆ ಹೆಜ್ಜೆ ಇಡಿ.
ವೃಷಭ: ನೀವು ನಿರೀಕ್ಷಿಸದ ರೀತಿಯಲ್ಲಿ ಕೆಲವು ಬದಲಾವಣೆಗಳಾಗಬಹುದು. ಆ ಬಗ್ಗೆ ಎಚ್ಚರವಿರಲಿ.
ಮಿಥುನ: ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.
ಕಟಕ: ಯಾವುದೇ ಹೊಸ ಕೆಲಸ ಆರಂಭಿಸಲು ಅಥವಾ ಸಾಧನೆ ಮಾಡಲು ಅತ್ಯುತ್ತಮ ಸಮಯವಾಗಿದ್ದು, ಗಳಿಕೆಯಲ್ಲೂ ಹೆಚ್ಚಾಗಲಿದೆ.
ಸಿಂಹ: ಬೇರೆಯವರ ಬಗ್ಗೆ ವ್ಯಂಗ್ಯದ ಟೀಕೆಗಳನ್ನು ಮಾಡುವುದು ಮತ್ತು ಅನುಮಾನದಿಂದ ನೋಡುವುದನ್ನು ತಪ್ಪಿಸಿ.
ಕನ್ಯಾ: ಹೆಚ್ಚು ಮಾತನಾಡಬೇಡಿ.
ತುಲಾ: ಗುರು-ಹಿರಿಯರ ಆಶೀರ್ವಾದದಿಂದ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಉಡುಗೊರೆ ಪಡೆಯುವಿರಿ.
ವೃಶ್ಚಿಕ: ಪತ್ನಿ ಆರೋಗ್ಯದಲ್ಲಿ ಏರುಪೇರಾಗಲಿದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.
ಧನುಸ್ಸು: ಉದ್ಯೋಗದಲ್ಲಿನ ಅನವಶ್ಯಕ ಗೊಂದಲಗಳು ನಿವಾರಣೆಯಾಗುತ್ತವೆ.
ಮಕರ: ನೀವು ಮಾಡುವ ಸಣ್ಣ ಪ್ರಯತ್ನವೂ ದೊಡ್ಡ ಲಾಭಕ್ಕೆ ಕಾರಣವಾಗುತ್ತದೆ.
ಕುಂಭ: ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ. ಸಂತಸ ಹೆಚ್ಚಾಗಲಿದೆ.
ಮೀನ:ಉತ್ಸಾಹದಿಂದ ತೆಗೆದುಕೊಂಡ ಕ್ರಮಗಳು ನಿಮ್ಮ ಇಚ್ಛೆಗೆ ವಿರುದ್ಧವಾದ ಫಲಿತಾಂಶಗಳನ್ನು ನೀಡುತ್ತವೆ.
